10 ವರ್ಷಗಳ ನಂತರ ನಾನೂ ಕರ್ನಾಟಕದವಳೇ ಎಂದ ನಟಿಗೆ ಸಖತ್ ತಿರುಗೇಟು ನೀಡಿದ ನೆಟ್ಟಿಗರು:

Written by Soma Shekar

Published on:

---Join Our Channel---

ಮಾಜಿ ಸಚಿವ ಜನಾರ್ಧನ‌ ರೆಡ್ಡಿ ಅವರ ಕಿರಿಯ ಪುತ್ರ ಕಿರೀಟ ಸಿನಿಮಾ ರಂಗಕ್ಕೆ ಅಡಿಯಿಡುತ್ತಿರುವ ವಿಷಯ ಈಗಾಗಲೇ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿರುವ ವಿಷಯವಾಗಿದೆ. ಅವರ ಹೊಸ ಸಿನಿಮಾದ ಮುಹೂರ್ತ ಕಾರ್ಯಕ್ರಮ ಸಹಾ ಕೆಲವೇ ದಿನಗಳ ಹಿಂದೆ‌ ಬಹಳ ಅದ್ದೂರಿಯಾಗಿ ನಡೆದಿದ್ದು, ಸ್ಟಾರ್ ನಿರ್ದೇಶಕ ರಾಜಮೌಳಿ ಸಿನಿಮಾಕ್ಕೆ ಕ್ಲ್ಯಾಪ್ ಮಾಡಿದ್ದಾರೆ. ಅಲ್ಲದೇ ಕಿರೀಟಿ ಅವರನ್ನು ಪರಿಚಯಿಸುವ ಟೀಸರ್ ಒಂದನ್ನು ಸಹಾ ಬಿಡುಗಡೆ ಮಾಡಲಾಗಿದ್ದು, ಈ ಟೀಸರ್ ಅನೇಕ ಸಿನಿ ಪ್ರೇಮಿಗಳ ಮನಸ್ಸನ್ನು ಗೆದ್ದಿದ್ದು, ಮೆಚ್ಚುಗೆ ಗಳು ಸಹಾ ಹರಿದು ಬಂದಿವೆ.

ಈ ಸಿನಿಮಾ ದೊಡ್ಡ ಬಜೆಟ್ ನಲ್ಲಿ ನಿರ್ಮಾಣವಾಗಲಿದೆ ಎನ್ನಲಾಗಿದ್ದು, ನಟಿ ಶ್ರೀಲೀಲಾ ಈ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ. ಇದೇ ವೇಳೆ ಈ ಸಿನಿಮಾದ ಮತ್ತೊಂದು ವಿಶೇಷ ಎಂದರೆ ಒಂದು ದಶಕ ಕಾಲದ ವಿರಾಮದ ನಂತರ ಇದೀಗ ದಕ್ಷಿಣ ಸಿನಿ ರಂಗದ ಜನಪ್ರಿಯ ನಟಿ ಎನಿಸಿಕೊಂಡಿದ್ದ ನಟಿ ಜೆನಿಲಿಯಾ ಈ ಸಿನಿಮಾ ಮೂಲಕ ಕನ್ನಡಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ.‌ ನಟಿ ಜೆನಿಲಿಯಾ 2008 ರಲ್ಲಿ ಶಿವರಾಜ್ ಕುಮಾರ್ ಅವರ ಸತ್ಯ ಇನ್ ಲವ್ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

ಹೊಸ ಸಿನಿಮಾ ಮೂಲಕ, ದೀರ್ಘ ವಿರಾಮದ ನಂತರ ಕಮ್ ಬ್ಯಾಕ್ ಮಾಡುತ್ತಿರುವ ಜೆನಿಲಿಯಾ ಬಹಳ ಖುಷಿಯಾಗಿದ್ದು, ಅವರು ಮಾತನಾಡುತ್ತಾ, ನಟನೆಗೆ ಮರಳದೇ ಹತ್ತು ವರ್ಷಗಳಾಗಿದೆ. ಇದೊಂದು ಬಹಳ ವಿಶೇಷ ಪ್ರಾಜೆಕ್ಟ್, ಇದರ ಭಾಗವಾಗಿರುವುದು ಸಂತೋಷ ನೀಡಿದೆ. ಕಿರೀಟಿಗೆ ಇದು ಮೊದಲ ಸಿನಿಮಾ. ಅವರೊಂದಿಗೆ ನಾವೆಲ್ಲಾ ಇದ್ದೇವೆ. ನನ್ನ ಕಮ್ ಬ್ಯಾಕ್ ಹೇಗಿದೆ ಎಂದರೆ, ನಿನ್ನ‌ ಜೊತೆ ನಾನು ಕೂಡಾ ನ್ಯೂ ಕಮರ್ ಎನಿಸುತ್ತಿದೆ ಎಂದು ಜೆನಿಲಿಯಾ ಹೇಳಿದ್ದಾರೆ.

ಶಿವರಾಜ್ ಕುಮಾರ್ ಅವರ ಜೊತೆ ನಟಿಸಿದ್ದನ್ನು ನೆನಪಿಸಿಕೊಳ್ಳುತ್ತಾ, ನಾನು ಮೂಲತಃ ಕರ್ನಾಟಕದವಳೇ ಎಂದು ಜೆನಿಲಿಯಾ ಹೇಳಿದ್ದಾರೆ. ಹತ್ತು ವರ್ಷಗಳ ನಂತರ ಕಮ್ ಬ್ಯಾಕ್ ಮಾಡುತ್ತಿರುವ ತನಗೆ ಜನರ ಪ್ರೀತಿ ಮತ್ತು ಆಶೀರ್ವಾದ ಬೇಕು ಎಂದಿರುವ ಜೆನಿಲಿಯಾ, ಈ ಸಿನಿಮಾವನ್ನು ಒಪ್ಪಲು ಪ್ರಮುಖವಾದ ಕಾರಣ ಸಿನಿಮಾದ ಕಥೆ, ಅಣ್ಣ ತಂಗಿ ಬಾಂಧವ್ಯದ ಕಥೆ ಎಂದು ಒಂದಷ್ಟು ಸಿನಿಮಾ ವಿಚಾರ ಹಂಚಿಕೊಂಡು, ಕಿರೀಟಿ ಗೆ ಯಶಸ್ಸು ಸಿಗಬೇಕು ಎಂದು ಹಾರೈಸಿದ್ದಾರೆ.

ಇನ್ನು ಜೆನಿಲಿಯಾ ನಾನು ಕರ್ನಾಟಕದವಳು ಎಂದು ಹೇಳಿದ ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ಗಳು ವ್ಯಕ್ತವಾಗಿದೆ.‌ ಅನೇಕರು ಸಿನಿಮಾ ಅವಕಾಶ ಸಿಕ್ಕಾಗ ಮಾತ್ರ ಇವರಿಗೆ ಇವರ ಅಜ್ಜ, ಮುತ್ತಜ್ಜ ಕರ್ನಾಟಕದವರು ಅಂತ ನೆನಪಾಗುತ್ತೆ.‌ ಉಳಿದ ಸಮಯದಲ್ಲಿ ಅವರೆಲ್ಲಾ ಬೇರೆ ಕಡೆಗೆ ವಲಸೆ ಹೋಗ್ತಾರಾ ? ಎಂದು ವ್ಯಂಗ್ಯ ವಾಡಿದ್ದಾರೆ. ಮತ್ತೆ ಕೆಲವರು ಇಲ್ಲಿ ನಿಮ್ಮ ಅವಶ್ಯಕತೆ ಇಲ್ಲ ಬಿಡಿ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಅವರ ಅಭಿಮಾನಿಗಳು ಕಮ್ ಬ್ಯಾಕ್ ಗೆ ವೆಲ್ ಕಂ ಎಂದಿದ್ದಾರೆ.

Leave a Comment