10 ರೂ. ಯೋಗ್ಯತೆ ಇಲ್ಲ ಎಂದ ಸೇಲ್ಸ್ ಮ್ಯಾನ್: ಒಂದೇ ಗಂಟೆಯಲ್ಲಿ ತಲೆ ತಿರುಗುವ ಉತ್ತರ ಕೊಟ್ಟ ಯುವರೈತ!!
ಮುಖ ನೋಡಿ ಮಣೆ ಹಾಕುವುದು, ವೇಷ ಭೂಷಣ ನೋಡಿ ಗೌರವ ನೀಡುವುದು ಇಂದಿನ ಸಮಾಜದಲ್ಲಿ ಸಾಮಾನ್ಯವಾಗಿದೆ. ಸಾಮಾನ್ಯರಂತೆ ಕಾಣುವವರಿಗೆ ಗೌರವ, ಮರ್ಯಾದೆ ಸಿಗುವುದೇ ಅಪರೂಪ. ಈ ವಿಚಾರ ರೈತರ ವಿಚಾರದಲ್ಲೂ ನಡೆಯುತ್ತದೆ. ತಮ್ಮ ಊರಿನಲ್ಲಿ ಸ್ವಂತ ಜಮೀನಿನಲ್ಲಿ ಮಾಲೀಕರಾಗಿ ಕೃಷಿ ಮಾಡುವ ರೈತರನ್ನು ನಗರಗಳಲ್ಲಿ ದೊಡ್ಡ ದೊಡ್ಡ ಶೋ ರೂಮ್ ಗಳಲ್ಲಿ ಯಾರದೋ ಕೈಕಳಗೆ ಕೆಲಸ ಮಾಡುವ ಮಂದಿ ಅವಮಾನ ಮಾಡುವುದು, ಅಗೌರವ ತೋರುವುದು ಸಾಮಾನ್ಯವಾಗಿದೆ. ಪ್ರಸ್ತುತ ಇಂತಹುದೇ ಒಂದು ಘಟನೆ ಮರುಕಳಿಸಿದ್ದು, ಆದರೆ ಅನಂತರ ಆದ ಬೆಳವಣಿಗೆ ಮಾತ್ರ ದೊಡ್ಡ ಮೆಚ್ಚುಗೆ ಪಡೆದಿದೆ.
ತುಮಕೂರಿನ ಹೆಬ್ಬೂರು ಹೋಬಳಿಯ ರಾಮನ ಪಾಳ್ಯದ ಯುವರೈತ ಕೆಂಪೇಗೌಡ ಅವರು ತುಮಕೂರಿನ ಶೋ ರೂಂ ಒಂದರಲ್ಲಿ ಕಾರನ್ನು ಖರೀದಿ ಮಾಡಲು ಬಂದಿದ್ದಾರೆ. ಸ್ನೇಹಿತರೊಂದಿಗೆ ಶೋಂ ರೂಂ ಗೆ ಆಗಮಿಸಿದ್ದ ಅವರನ್ನು , ಅವರ ವೇಷ ಭೂಷಣ ಹಾಗೂ ಆಡುವ ಮಾತನ್ನು ನೋಡಿದ ಶೋ ರೂಂ ನ ಸಿಬ್ಬಂದಿ ಅ ವ ಮಾನಿ ನಿಸುವಂತೆ ಮಾತನಾಡಿದ್ದಾರೆ. ಶೋ ರೂಮ್ ನಲ್ಲಿ ಸೇಲ್ಸ್ ಏಜೆಂಟ್ ಒಬ್ಬರು ಕೆಂಪೇಗೌಡ ಅವರಿಗೆ ಹತ್ತು ರೂಪಾಯಿ ದುಡ್ಡು ಕೊಡೋ ಯೋಗ್ಯತೆ ಇಲ್ಲ, ಕಾರು ತಗೋಳ್ಳೋಕೆ ಬಂದಿದ್ಯಾ ಎಂದು ಅ ವ ಮಾ ನಿ ಸಿದ್ದಾರೆ.
ಇದರಿಂದ ಸಿ ಟ್ಟು ಗೊಂಡ ಕೆಂಪೇಗೌಡ ಅವರು, ಸೇಲ್ಸ್ ಏಜೆಂಟ್ ಆಡಿದ ಮಾತನ್ನು ಸವಾಲಾಗಿ ಸ್ವೀಕರಿಸಿದ್ದಾರೆ. ಅಲ್ಲದೇ ಒಂದು ಗಂಟೆಯೊಳಗೆ ದುಡ್ಡು ತರ್ತೀನಿ ಕಾರು ಕೊಡ್ತೀಯಾ ಎಂದು ಕಡ್ಡಿ ಮುರಿದ ಹಾಗೆ ಕೇಳಿದ್ದಾರೆ. ಆಗ ಶೋ ರೂಮ್ ಕೆಲಸಗಾರನು ಮೊದಲು ದುಡ್ಡು ತಗೊಂಡು ಬಾ, ಆಮೇಲೆ ಕಾರು ಕೊಡ್ತೀನಿ ಎಂದಿದ್ದಾನೆ. ಒಂದು ಗಂಟೆ ಅವಧಿಯಲ್ಲಿ ಕೆಂಪೇಗೌಡ ಹತ್ತು ಲಕ್ಷ ರೂ. ಹೊಂದಿಸಿ ತಂದಿದ್ದಾರೆ, ಕಾರನ್ನು ಕೊಡುವಂತೆ ಪಟ್ಟು ಹಿಡಿದಿದ್ದಾರೆ.
ಶೋ ರೂಮ್ ನಲ್ಲಿ ವಾ ಗ್ವಾ ದ ನಡೆದು ವಿಷಯ ಪೋಲಿಸ್ ಠಾಣೆಯ ವರೆಗೂ ಈ ವಿಚಾರವು ಹೋಗಿದೆ. ಅನಂತರ ಶೋ ರೂಮ್ ಸಿಬ್ಬಂದಿಯಿಂದ ಗ್ರಾಹಕನಾದ ಕೆಂಪೇಗೌಡ ಅವರಿಗೆ ಕ್ಷಮಾಪಣೆ ಯನ್ನು ಕೋರಿ ಮುಚ್ಚಳಿಕೆಯನ್ನು ಬರೆಸಿಕೊಡಲಾಗಿದೆ. ಈ ಮೂಲಕ ಈ ಪ್ರ ಕರಣವು ಸುಖಾಂತ್ಯ ವನ್ನು ಕಂಡಿದೆ. ಏನೇ ಆದರೂ ವ್ಯಕ್ತಿಯ ಬಟ್ಟೆ, ಆತನ ಮಾತನ್ನು ನೋಡಿ ಅವರ ಸ್ಥಾನ ಮಾನವನ್ನು ಲೆಕ್ಕಿಸುವ ಪರಿಪಾಠ ದೂರವಾಗಬೇಕಿದೆ.