10 ಜನ ಪತ್ನಿಯರ ಮುದ್ದಿನ ಪತಿ ಈ ಯುವಕ: ತನ್ನ ಜೀವನ ಬದಲಾಗಿದ್ದು ಹೇಗೆಂದು ಹೇಳಿದ್ದಾನೆ!!

Written by Soma Shekar

Published on:

---Join Our Channel---

ಒಂದೇ ಸಮಯದಲ್ಲಿ 9 ಜನರನ್ನು ಮದುವೆಯಾಗಿ ಬ್ರೆಜಿಲ್ ನ ಮಾಡೆಲ್ ಆರ್ಥರ್ ಓ ಉರ್ಸೋ ಸುದ್ದಿಗಳಲ್ಲಿ ದೊಡ್ಡ ಸದ್ದನ್ನು ಮಾಡುತ್ತಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ ಆರ್ಥರ್ ಗೆ ಈಗಾಗಲೇ ಮದುವೆಯಾಗಿದೆ. ಆದರೆ ಫ್ರೀ ಲವ್ ನ ಖುಷಿಯನ್ನು ಎಂಜಾಯ್ ಮಾಡುವ ಸಲುವಾಗಿ ಹಾಗೂ ‘ಒಂದು ಮದುವೆ’ ಯನ್ನು ಪ್ರ ತಿ ಭ ಟ ನೆ ಮಾಡಲು ಅವರು ಒಂಬತ್ತು ಜನ ಮಹಿಳೆಯರ ಜೊತೆ ವಿವಾಹವಾಗಿದ್ದಾರೆ. ಈ ರೀತಿಯಲ್ಲಿ ಆರ್ಥರ್ ಗೆ ಈಗ ಒಟ್ಟು ಹತ್ತು ಜನ ಪತ್ನಿಯರಿದ್ದಾರೆ. ಇನ್ನು ಆರ್ಥರ್ ತನ್ನ ದೇಹದ ಗಾತ್ರದ ಕಾರಣದಿಂದಲೂ ಬಹಳ ಸಮಸ್ಯೆ ಎದುರಿಸುತ್ತಿದ್ದರು.

ತನ್ನ ಭಾರೀ ದೇಹದಿಂದ ಬೇಸರಗೊಂಡಿದ್ದ ಆರ್ಥರ್ ಹೇಗಾದರೂ ಮಾಡಿ ತಾನು ಸಣ್ಣಗಾಗಬೇಕೆಂದು ನಿರ್ಧರಿಸಿ, ಶ್ರಮ ವಹಿಸಿ ಬರೋಬ್ಬರಿ 28 ಕೆಜಿ ತೂಕವನ್ನು ಇಳಿಸಿಕೊಂಡರು. ಮೊದಲು ಆರ್ಥರ್ ದೇಹದ ತೂಕ ನೂರು ಕಿಲೋ ದಾಟಿತ್ತು. ತೂಕ ಇಳಿಸಿಕೊಂಡ ಮೇಲೆ ಆರ್ಥರ್ ಮಾಡೆಲಿಂಗ್ ಕ್ಷೇತ್ರಕ್ಕೆ ಅಡಿಯಿಟ್ಟರು. ಆರ್ಥರ್ ಮಾತನಾಡುತ್ತಾ ಒಂದು ವೇಳೆ ನಾನು ದೇಹದ ತೂಕ ಕಡಿಮೆ ಮಾಡಿಕೊಳ್ಳದೇ ಹೋಗಿದ್ದರೆ ಒಂಬತ್ತು ಜನ ಮಹಿಳೆಯರನ್ನು ಮದುವೆಯಾಗುವುದು ಖಂಡಿತ ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಡೈಲಿ ಸ್ಟಾರ್ ನ ವರದಿಯ ಪ್ರಕಾರ ಆರ್ಥರ್ ಒಂಬತ್ತು ಜನ ಮಹಿಳೆಯರನ್ನು ಮದುವೆಯಾದ ಮೇಲೆ ಅವರು ದೊಡ್ಡ ಸುದ್ದಿಯಾಗಿದ್ದಾರೆ. ಒಂಬತ್ತು ಜನರನ್ನು ಮದುವೆಯಾಗುವ ಮೊದಲೇ ಅವರಿಗೆ ಮದುವೆಯಾಗಿದ್ದು, ಅವರ ಮೊದಲ ಪತ್ನಿಯ ಹೆಸರು ಲುವಾನಾ ಕಾಜಾಕಿ ಎಂದಾಗಿದೆ. ಆರ್ಥರ್ ನ ಜೀವನ ಹೇಗೆ ಬದಲಾಯಿತು ಎನ್ನುವುದು ಆರ್ಥರ್ ಸ್ವತಃ ತಾನೇ ವಿವರಿಸಿದ್ದಾರೆ. ವಾರದ ಆರು ದಿನ ಜಿಮ್ ನಲ್ಲಿ ವರ್ಕೌಟ್ ಮಾಡಿ ಬೆವರನ್ನು ಹರಿಸಿ, ತಮ್ಮ ದೇಹವನ್ನು ದಂಡಿಸುತ್ತಿದ್ದೆ.

ಭಾನುವಾರ ಒಂದು ದಿನ ಮಾತ್ರ ವಿಶ್ರಾಂತಿಯನ್ನು ಪಡೆಯುತ್ತಿದ್ದೆ ಎನ್ನುವ ಆರ್ಥರ್, ಆ ದಿನಗಳಲ್ಲಿ ತಾನು ಕೊಬ್ಬಿನಂಶ, ಉಪ್ಪು ಹಾಗೂ ಸಕ್ಕರೆ ಅಂಶ ಇರುವ ಆಹಾರವನ್ನು ಸೇವನೆ ಮಾಡುತ್ತಿರಲಿಲ್ಲ, ಸಮತೋಲನ ಆಹಾರಕ್ಕೆ ಮಾತ್ರವೇ ಆದ್ಯತೆ ನೀಡುತ್ತಿದೆ ಎಂದು ತಿಳಿಸಿದ್ದಾರೆ. ಮೊದಲು ನಾನು ಆರಾಮವಾಗಿ ತಿನ್ನುತ್ತಾ ಕಾಲ ಕಳೆಯುತ್ತಿದ್ದೆ, ಮನೆಯಿಂದ ಹೊರಗೆ ಬರುತ್ತಿರಲಿಲ್ಲ.‌ ಕೆಲವು ಸಮಯದವರೆಗೆ ನಾನು ಖಿ ನ್ನ ತೆಗೆ ಕೂಡಾ ಒಳಗಾಗಿದ್ದೆ ಎಂದಿದ್ದಾರೆ ಆರ್ಥರ್.

ಆದರೆ ಈಗ ಈ ಹೊಸ ಜೀವನ ಶೈಲಿಯಿಂದ ತೂಕ ಇಳಿಸಿಕೊಂಡಿದ್ದೇನೆ, ಈಗ ಮೊದಲಿಗಿಂತ ಹೆಚ್ಚು ಖುಷಿಯಾಗಿದ್ದೇನೆ ಎನ್ನುತ್ತಾರೆ. ತೂಕ ಇಳಿಸಿಕೊಂಡು ಫಿಟ್ ಆಗಿ ಮಾಡೆಲಿಂಗ್ ಮಾಡುತ್ತಿರುವ ಆರ್ಥರ್ ಕಡೆಗೆ ಮಹಿಳೆಯರು ಆಕರ್ಷಿತರಾಗಿದ್ದಾರೆ. ಇದಕ್ಕೂ ಮೊದಲು ಆರ್ಥರ್ ಮತ್ತು ಆತನ ಮೊದಲ ಪತ್ನಿ ಒಂದು ಸಬ್ಸ್ಕ್ರಿಪ್ಷನ್ ವೆಬ್ಸೈಟ್ ಮೂಲಕ ತಾವು ದೊಡ್ಡ ಮೊತ್ತದ ಹಣ ಗಳಿಸುತ್ತಿರುವುದಾಗಿ ಹೇಳಿ ಸುದ್ದಿಯಾಗಿದ್ದರು, ಅಲ್ಲದೇ ಅವರ ಓಪನ್ ರಿಲೇಶಿನ್ ಶಿಪ್ ವಿಚಾರಗಳು ಸಹಾ ಸುದ್ದಿಯಾಗಿದ್ದವು.

Leave a Comment