10ನೇ ತರಗತಿ 6 ಸಬ್ಜೆಕ್ಟ್ ಫೇಲ್: ಆದರೆ ಮಾಡಿರೋ ಸಾಧನೆ ಯಾವ ಟಾಪರ್ ಗಿಂತ ಕಡಿಮೆಯೇನಲ್ಲ!!

Entertainment Featured-Articles News Wonder

ನಮ್ಮ ಜೀವನದಲ್ಲಿ ನಾವು ಅನುಭವಗಳಿಂದ ಕಲಿಯುವ ಪಾಠವು ಶಾಲಾ-ಕಾಲೇಜಿನಲ್ಲಿ ಪುಸ್ತಕಗಳಿಂದ ಪಡೆಯುವ ಜ್ಞಾನಕ್ಕಿಂತ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿರುತ್ತದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಬಾಯಿಪಾಠ ಮಾಡಿ ಹೇಳುವ ಗಿಳಿಗಿಂತ, ತಮ್ಮ ಆಸಕ್ತಿಯ ಕಡೆಗೆ ಗಮನ ನೀಡಿ ಅದನ್ನು ಕಾರ್ಯರೂಪಕ್ಕೆ ತರಲು ಮಾಡುವ ಪ್ರಯತ್ನವೂ ಮಹತ್ವದಾಗಿರುತ್ತದೆ. ಅಲ್ಲದೇ ಸಾಧನೆಯೊಂದನ್ನು ಮಾಡುವುದಕ್ಕೆ ಪ್ರತಿಬಾರಿಯೂ ತರಗತಿಯ ಟಾಪರ್ ಆಗಬೇಕೆಂಬ ನಿಯಮ ಖಂಡಿತ ಇಲ್ಲ.

ಹೀಗೆ ತರಗತಿಯ ಪರೀಕ್ಷೆಗಳಲ್ಲಿ ಹಿಂದೆ ಬಿದ್ದರೂ ಕೂಡಾ ಜೀವನ ಎನ್ನುವ ಬಹು ದೊಡ್ಡ ಪರೀಕ್ಷೆಯಲ್ಲಿ ದೊಡ್ಡ ಯಶಸ್ಸನ್ನು ಪಡೆದುಕೊಂಡಿರುವ ಅನೇಕ ವ್ಯಕ್ತಿಗಳ ಉದಾಹರಣೆ ನಮ್ಮ ಕಣ್ಣ ಮುಂದೆಯೇ ಇದೆ. ಅವರು ನಮಗೆ ಸ್ಪೂರ್ತಿಯೂ ಆಗಿದ್ದಾರೆ. ಅಂತಹದೇ ಒಂದು ಹೊಸ ಉದಾಹರಣೆಯನ್ನು ನಾವು ನಿಮಗೆ ತಿಳಿಸಲು ಹೊರಟಿದ್ದೇವೆ. ಹತ್ತನೇ ತರಗತಿಯಲ್ಲಿ ಒಂದೆರಡಲ್ಲ, ಆರು ವಿಷಯದಲ್ಲೂ ಫೇಲಾದ ವಿದ್ಯಾರ್ಥಿಯೊಬ್ಬ ಮಾಡಿರುವ ಸಾಧನೆಯ ಕುರಿತಾಗಿ ನಾವು ನಿಮಗೆ ತಿಳಿಸಲಿದ್ದೇವೆ.

ಯಾವುದೇ ವ್ಯಕ್ತಿಯ ಬುದ್ಧಿಶಕ್ತಿಯನ್ನು ಅವನು ಗಳಿಸುವ ಅಂಕಗಳಿಂದ ಪರಿಗಣಿಸಬಾರದು. ಏಕೆಂದರೆ ಅಂಕಗಳು ಎನ್ನುವುದು ಅನೇಕ ಬಾರಿ ಜ್ಞಾಪಕಶಕ್ತಿಯ ಫಲವಾಗಿರುತ್ತದೆ. ವಡೋದರಾದ ಪ್ರಿನ್ಸ್ ಪಾಂಚಾಲ್ ಎನ್ನುವ ಹೆಸರಿನ ಯುವಕ ಹತ್ತನೇ ತರಗತಿ ಪರೀಕ್ಷೆಯಲ್ಲಿ ಆರು ವಿಷಯದಲ್ಲಿ ಅನುತ್ತೀರ್ಣನಾಗಿದ್ದಾನೆ. ಆದರೆ ಫೇಲ್ ಎನ್ನುವ ಮಾತ್ರಕ್ಕೆ ನಾವು ಆತನಿಗೆ ಬುದ್ಧಿ ಶಕ್ತಿ ಕಡಿಮೆ ಎಂದು ತೀರ್ಮಾನ ಮಾಡುವುದು ತಪ್ಪಾಗುತ್ತದೆ. ಏಕೆಂದರೆ ಪ್ರಿನ್ಸ್ ತಾನೆಷ್ಟು ಬುದ್ಧಿವಂತ ಎನ್ನುವುದನ್ನು ತೋರಿಸಿದ್ದಾರೆ.

ಪ್ರಿನ್ಸ್ ಪಾಂಚಾಲ್ ಸುಮಾರು 35 ಹಗುರವಾದ ವಿಮಾನಗಳ ಮಾಡೆಲ್ ಅಥವಾ ಮಾದರಿಗಳನ್ನು ಸಿದ್ಧಪಡಿಸಿದ್ದಾನೆ. 17ವರ್ಷದ ಪ್ರಿನ್ಸ್ ಈ ವಿಮಾನದ ಮಾದರಿಗಳನ್ನು ಬ್ಯಾನರ್ ಮತ್ತು ಹೋಲ್ಡಿಂಗ್ಸ್ ಗಳಲ್ಲಿ ಬಳಸಲಾಗುವ ಫ್ಲೆಕ್ಸ್ ಗಳಿಂದ ಸಿದ್ಧಪಡಿಸಿದ್ದಾರೆ. ಹಾರುವ ಸಾಮರ್ಥ್ಯವುಳ್ಳ ಪ್ರಿನ್ಸ್ ಸಿದ್ಧಪಡಿಸಿರುವ ಈ ವಿಮಾನಗಳನ್ನು ರಿಮೋಟ್ ಕಂಟ್ರೋಲ್ ನಿಂದ ನಿಯಂತ್ರಿಸಬಹುದಾಗಿದೆ. ANI ವರದಿಯ ಪ್ರಕಾರ ಪ್ರಿನ್ಸ್ ಪಂಚಲ್ 10ನೇ ತರಗತಿಯಲ್ಲಿ ಆರು ವಿಷಯಗಳಲ್ಲಿ ಕೂಡಾ ಅನುತ್ತೀರ್ಣನಾಗಿದ್ದ.

ಹತ್ತನೇ ತರಗತಿಯಲ್ಲಿ ಫೇಲಾದ ಕಾರಣದಿಂದ ಆತ ಮನೆಯಲ್ಲಿ ಸಮಯವನ್ನು ಕಳೆಯುತ್ತಿರುವಾಗ, ಅವರ ತಾತ ಮೊಮ್ಮಗನಿಗೆ ಪ್ರೇರಣೆಯನ್ನು ನೀಡುತ್ತಾ, ಏನಾದರೂ ಹೊಸದಾಗಿ ಮಾಡುವಂತೆ ಉತ್ತೇಜನವನ್ನು ನೀಡುತ್ತಿದ್ದರು. ತಾತ ಹೇಳುತ್ತಿದ್ದ ಪ್ರೇರಣೆಯ ಮಾತುಗಳು ಪ್ರಿನ್ಸ್ ಮನಸಿನ ಮೇಲೆ ಪರಿಣಾಮವನ್ನು ಬೀರಿತ್ತು. ಆತ ಅಂತರ್ಜಾಲದ ಸಹಾಯದಿಂದ ವಿಮಾನಗಳ ಮಾಡೆಲ್ ಮಾಡುವುದನ್ನು ಕಲಿತುಕೊಂಡನು.

ಮಾಧ್ಯಮದೊಂದಿಗೆ ಮಾತನಾಡುತ್ತ ಪ್ರಿನ್ಸ್ ಪಂಚಾಂಗ್ ಬ್ಯಾನರ್ ಮತ್ತು ಹೋರ್ಡಿಂಗ್ಸ್ ಗಳನ್ನು ನೋಡಿದಾಗ ಅವುಗಳಿಂದ ವಿಮಾನ ತಯಾರಿಸುವ ಆಲೋಚನೆ ಹೊಳೆಯಿತು ಎಂದು ಹೇಳುತ್ತಾನೆ. ಪ್ರಿನ್ಸ್ ತನ್ನದೇ ಆದ ಯುಟ್ಯೂಬ್ ಚಾನೆಲ್ ಕೂಡ ಹೊಂದಿದ್ದಾನೆ. ಪ್ರಸ್ತುತ ಹತ್ತನೇ ತರಗತಿಯನ್ನು ಪಾಸ್ ಮಾಡುವ ಆಶಯವನ್ನು ಹೊಂದಿದ್ದು, ಅದಕ್ಕಾಗಿ ಪ್ರಯತ್ನವನ್ನು ನಡೆಸಿದ್ದಾನೆ. ಅಲ್ಲದೇ ತನ್ನ ಈ ಸಾಧನೆ ಕಂಡು ಜನರು ತನ್ನನ್ನು ಮೆಚ್ಚಿದ್ದಾರೆ ಎಂದು ಹೇಳಿದ್ದಾನೆ.

Leave a Reply

Your email address will not be published.