ಕೋವಿಡ್ ವಿ ರು ದ್ಧ ದ ಹೋರಾಟದಲ್ಲಿ ಲಸಿಕೆಯೇ ರಕ್ಷಣಾ ಅ ಸ್ತ್ರ ಎಂದು ಜನರಿಗೆ ಕೋವಿಡ್ ಲಸಿಕೆಯನ್ನು ಪಡೆಯುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹಾ ಜನರಿಗೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದು, ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಸಹಾ ಮಾಡಲಾಗುತ್ತಿದೆ. ಆದರೆ ಇದರ ಹೊರತಾಗಿಯೂ ಅನೇಕರು ಇನ್ನೂ ಕೂಡಾ ಲಸಿಕೆಯನ್ನು ಪಡೆಯಲು ಹಿಂದೇಟು ಹಾಕುತ್ತಿರುವ ವಿಷಯ ಸಹಾ ಎಲ್ಲರಿಗೂ ತಿಳಿದಿದೆ. ಅಲ್ಲದೇ ಅನೇಕರಲ್ಲಿ ಕೋವಿಡ್ ಲಸಿಕೆಯ ಕುರಿತಾಗಿ ಬಹಳಷ್ಟು ಅನುಮಾನಗಳು ಕಾಡುತ್ತಿವೆ.
ಕೋವಿಡ್ ನ ಎರಡು ಡೋಸ್ ಲಸಿಕೆಯನ್ನು ಪಡೆಯಲು ಜನರು ಹಿಂದೇಟು ಹಾಕುವಂತಹ ಪರಿಸ್ಥಿತಿಯಲ್ಲಿ ಇಲ್ಲಿ ಒಬ್ಬ ವ್ಯಕ್ತಿ ಒಂದು ವರ್ಷದ ಅವಧಿಯಲ್ಲಿ ಬರೋಬ್ಬರಿ ಹನ್ನೊಂದು ಬಾರಿ ಕೋವಿಡ್ ಲಸಿಕೆಯನ್ನು ಪಡೆದಿರುವ ವಿಷಯ ಇದೀಗ ದೊಡ್ಡ ಸುದ್ದಿಯಾಗಿದೆ ಹಾಗೂ ಒಂದೆಡೆ ಇದನ್ನು ನೋಡಿ ಅನೇಕರು ಅಚ್ಚರಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಹೌದು ಇಂತಹುದೊಂದು ಘಟನೆ ಬಿಹಾರದ ಮಾಧೇಪುರ ಜಿಲ್ಲೆಯಲ್ಲಿ ನಡೆದಿದೆ.
ಬಿಹಾರದ ಮಾಧೇಪುರ ಜಿಲ್ಲೆಯ ಬ್ರಹ್ಮದೇವ್ ಮಂಡಲ್ ಎನ್ನುವ ವ್ಯಕ್ತಿಯು ಹನ್ನೊಂದು ಬಾರಿ ಲಸಿಕೆ ಪಡೆದಿದ್ದು, ಈ ವಾರದ ಆರಂಭದಲ್ಲಿ ಹನ್ನೆರಡನೇ ಬಾರಿಗೆ ಡೋಸ್ ಪಡೆಯಲು ಹೋದಾಗ ಸಿಕ್ಕಿ ಬಿದ್ದಿದ್ದಾರೆ. ಈಗ ಅವರ ವಿ ರು ದ್ಧ ಪುರೈನಿ ಪೋಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಆರೋಗ್ಯ ಕಾರ್ಯಕರ್ತರ ಕೈಗೆ ಸಿಕ್ಕಿ ಬಿದ್ದಿರುವ ಇವರು ಆಧಾರ್ ಕಾರ್ಡ್ ಬಳಸಿ ಲಸಿಕೆ ಪಡೆದಿರುವುದು ತಿಳಿದು ಬಂದಿದೆ.
ಬ್ರಹ್ಮದೇವ್ ಲಸಿಕೆ ಪಡೆದ ಮೇಲೆ ತನಗಿದ್ದ ಹಳೆಯ ಕಾಯಿಲೆಗಳು ವಾಸಿಯಾದವು ಎನ್ನುವ ಮಾತನ್ನು ಹೇಳಿದ್ದಾರೆ ಎನ್ನಲಾಗಿದೆ. ಆದರೆ ಇಂತಹ ಕೆಲಸ ಮಾಡಿದ್ದಕ್ಕೆ ಅವರ ಮೇಲೆ ಭಾರತೀಯ ದಂಡ ಸಂಹಿತೆ ಸೆಕ್ಷನ್ 188 ( ಸಾರ್ವಜನಿಕ ಸೇವಕರಿಂದ ಆದೇಶಕ್ಕೆ ಅಸಹಕಾರ), 419 ( ವ್ಯಕ್ತಿತ್ವದಿಂದ ವಂಚನೆ ), 420 ( ವಂಚನೆ ) ಆ ರೋ ಪ ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿದೆ.