ಹಿಂದೂ ದೇವರ ಕಥೆಗಳು ಅನುಮಾನ ಮೂಡಿಸಿ, ಕ್ರೈಸ್ತ ಧರ್ಮ ಸೆಳೆದಿತ್ತು: ಧರ್ಮದ ಬಗ್ಗೆ ರಾಜಮೌಳಿ ಮಾತು

Written by Soma Shekar

Published on:

---Join Our Channel---

ಬಾಹುಬಲಿ(Bahubali) ಮತ್ತು ತ್ರಿಬಲ್ ಅರ್(RRR) ಸಿನಿಮಾಗಳ ಮೂಲಕ ನಿರ್ದೇಶಕ ರಾಜಮೌಳಿ (Raja Mouli) ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವ ಸ್ಥಾನಮಾನವನ್ನು ಪಡೆದುಕೊಂಡಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೇ ಅವರ ತ್ರಿಬಲ್ ಆರ್ ಸಿನಿಮಾದ ನಾಟು ನಾಟು ಹಾಡಿಗೆ ಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಪುರಸ್ಕಾರ ಗೋಲ್ಡನ್ ಗ್ಲೋಬ್(Golden Globe) ಅನ್ನು ಪಡೆದಿದ್ದಾರೆ. ಅದೇ ನಾಟು ನಾಟು ಹಾಡು ಆಸ್ಕರ್ (Oscar) ಪ್ರಶಸ್ತಿಯ ರೇಸ್ ಸಹಾ ಪ್ರವೇಶಿಸಿದೆ. ರಾಜಮೌಳಿಯವರ ಸಿನಿಮಾಗಳ ಕಡೆ ಒಂದು ನೋಟ ಹರಿಸಿದಾಗ ಅವರ ಸಿನಿಮಾಗಳಲ್ಲಿನ ಪಾತ್ರಗಳು, ಬಹುತೇಕ ಪೌರಾಣಿಕ ಪಾತ್ರಗಳು ಹಾಗೂ ಅವುಗಳ ಅಂಶಗಳನ್ನು ಪ್ರತಿಬಿಂಬಿಸುವುದನ್ನು ನಾವು ನೋಡುತ್ತೇವೆ.

ಇಂತಹ ಅಂಶಗಳು ತಮ್ಮ ಸಿನಿಮಾದಲ್ಲಿ ಇದ್ದರೂ ರಾಜ ಮೌಳಿ(Raja Mouli) ತನ್ನನ್ನು ತಾನು ಒಬ್ಬ ನಾಸ್ತಿಕ ಅಂತಲೇ ಕರೆದುಕೊಳ್ಳುವವರು ಎನ್ನುವ ವಿಚಾರ ಮಾತ್ರ ಬಹಳಷ್ಟು ಜನರಿಗೆ ತಿಳಿದಿಲ್ಲ. ರಾಜ ಮೌಳಿಯವರು ದಿ ನ್ಯೂಯಾರ್ಕರ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಧರ್ಮದ ಆಚಾರ ವಿಚಾರಗಳಿಂದ ತನ್ನ ಮೇಲೆ ಆದ ಪರಿಣಾಮ ಹಾಗೂ ನಾನು ಅದರಿಂದ ಹೊರಗೆ ಹೋದ ವಿಚಾರಗಳ ಕುರಿತು ಮಾತನಾಡಿ ಅಚ್ಚರಿಯನ್ನು ಮೂಡಿಸಿದ್ದಾರೆ. ಅವರು ಹಂಚಿಕೊಂಡ ವಿಚಾರಗಳೀಗ ಹೊಸ ಚರ್ಚೆಯನ್ನೇ ಹುಟ್ಟು ಹಾಕಿದೆ. ಇದನ್ನೂ ಓದಿ: ಮಗಳ ಸಿನಿಮಾದಲ್ಲಿ ನಟಿಸಲು ದುಬಾರಿ ಸಂಭಾವನೆ ಬೇಡಿಕೆ ಇಟ್ಟ ತಲೈವಾ! ಶಾಕ್ ಆದ ಕಾಲಿವುಡ್

ರಾಜ ಮೌಳಿ ಮಾತನಾಡುತ್ತಾ, ನಮ್ಮ ಕುಟುಂಬ ಬಹಳ ದೊಡ್ಡದಾಗಿದ್ದು, ಎಲ್ಲರೂ ಅತಿಯಾದ ಧಾರ್ಮಿಕ ಭಾವನೆಗಳನ್ನು ಹೊಂದಿರುವವರಾಗಿದ್ದಾರೆ. ಬಾಲ್ಯದಲ್ಲಿ ಹಿಂದೂ ದೇವರ ಕಥೆಗಳನ್ನು ಕೇಳುವಾಗ ಮತ್ತು ಓದುವಾಗ ಸಾಕಷ್ಟು ಅನುಮಾನಗಳು ಬರುತ್ತಿದ್ದವು ಅಲ್ಲದೇ ಅವು ಯಾವುದು ನಿಜವಲ್ಲ ಎನ್ನುವ ಯೋಚನೆ ನನಗೆ ಬರುತ್ತಿತ್ತು.. ನಾನು ನನ್ನ ಕುಟುಂಬದ ಧಾರ್ಮಿಕ ಅತ್ಯುತ್ಸಾಹದ ಒಳಗೆ ಸಿಲುಕಿಕೊಂಡಿದ್ದೆ. ಧಾರ್ಮಿಕ ಗ್ರಂಥಗಳನ್ನು ಓದಲು ಪ್ರಾರಂಭಿಸಿದ್ದೆ. ತೀರ್ಥಕ್ಷೇತ್ರಗಳಿಗೆ ಭೇಟಿ ಕೊಟ್ಟೆ, ಕೇಸರಿ ಬಟ್ಟೆಯನ್ನು ಧರಿಸಿ ಒಂದಷ್ಟು ವರ್ಷಗಳ ಕಾಲ ಆಸ್ತಿಕನಂತೆ ಸನ್ಯಾಸಿಯಂತೆ ಬದುಕಿದೆ.

ನನ್ನನ್ನು ಕ್ರಿಶ್ಚಿಯನ್(Christianity) ಧರ್ಮ ತನ್ನ ಕಡೆಗೆ ಕಳೆಯಿತು. ಇದಕ್ಕಾಗಿ ನಾನು ನನ್ನ ಸ್ನೇಹಿತರಿಗೆ ಧನ್ಯವಾದ ಹೇಳುತ್ತೇನೆ. ನಾನು ಬೈಬಲ್ ಓದುತ್ತೇನೆ, ಚರ್ಚ್ ಗೆ ಹೋಗುತ್ತೇನೆ. ಎಲ್ಲಾ ರೀತಿಯ ವಿಷಯಗಳನ್ನು ಅಧ್ಯಯನ ಮಾಡುತ್ತೇನೆ. ಈ ಎಲ್ಲಾ ವಿಷಯಗಳು ಧರ್ಮವೂ ಒಂದು ರೀತಿಯಲ್ಲಿ ಶೋ ಷ ಣೆ ಎಂದೇ ನನಗೆ ಎನಿಸಿದೆ ಎನ್ನುವ ಮಾತನ್ನು ಅವರು ಹೇಳಿದ್ದಾರೆ. ಮಹಾಭಾರತ (Mahabharata) ಅಥವಾ ರಾಮಾಯಣಗಳಂತಹ (Ramayana) ಕಥೆಗಳ ಮೇಲಿರುವ ನನ್ನ ಪ್ರೀತಿ ಮಾತ್ರ ಎಂದಿಗೂ ಕಡಿಮೆಯಾಗಿಲ್ಲ.

ನಾನು ಧಾರ್ಮಿಕ ಅಂಶಗಳಿಂದ ದೂರ ತಳ್ಳಲು ಪ್ರಾರಂಭಿಸಿದೆ ಎಂದಿದ್ದಾರೆ. ಈಗ ನನ್ನೊಂದಿಗೆ ಉಳಿದುಕೊಂಡಿರುವುದು ಈ ಕೃತಿಗಳ ನಾಟಕ ಮತ್ತು ಕಥೆಯನ್ನು ಹೇಳುವ ಸಂಕೀರ್ಣತೆ ಮತ್ತು ಅವುಗಳ ಶ್ರೇಷ್ಠತೆ ಎಂಬುದಾಗಿ ರಾಜ ಮೌಳಿಯವರು ಹೇಳಿದ್ದು, ಅವರು ಹೇಳಿದ ಮಾತುಗಳು ಸುದ್ದಿಯಾದ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರವಾಗಿ ಮಿಶ್ರ ಪ್ರತಿಕ್ರಿಯೆಗಳು ಹರಿದು ಬರುತ್ತಿದೆ.

Leave a Comment