ಹಾಲಿವುಡ್ ಗೆ ರಾಕಿಂಗ್ ಸ್ಟಾರ್ ಯಶ್? ಜಗತ್ತಿನ ಟಾಪ್ ಫಾರ್ಮುಲಾ ಕಾರ್ ರೇಸರ್ ಭೇಟಿ, ಥ್ರಿಲ್ಲಾದ ಅಭಿಮಾನಿಗಳು

Written by Soma Shekar

Published on:

---Join Our Channel---

ಕೆಜಿಎಫ್-2 ಸಿನಿಮಾ ನಂತರ ಸ್ಟಾರ್ ನಟ ಎನಿಸಿಕೊಂಡಿರುವ ನಟ ಯಶ್ ಅವರ ಮುಂದಿನ ಸಿನಿಮಾ ಯಾವುದು? ಎನ್ನುವುದು ಅಭಿಮಾನಿಗಳ ಪ್ರಶ್ನೆಯಾಗಿದೆ. ಈಗಾಗಲೇ ಒಂದಷ್ಟು ಸುದ್ದಿಗಳ ಹರಿದಾಡಿದೆಯಾದರೂ ಯಾವ ಸಿನಿಮಾ ಮಾಡಲಿದ್ದಾರೆ ರಾಕಿಂಗ್ ಸ್ಟಾರ್ ಎನ್ನುವುದು ಮಾತ್ರ ಅಧಿಕೃತವಾಗಿ ಘೋಷಣೆಯಾಗಿಲ್ಲ. ಆದರೆ ಈಗ ಹೊಸ ಸುದ್ದಿಗಳ ಪ್ರಕಾರ ನಟ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಮುಂದಿನ ಸಿನಿಮಾಕ್ಕಾಗಿ ಅಮೆರಿಕಾದಲ್ಲಿ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ರೀತಿಯ ಸುದ್ದಿಗಳು ಹರಡಲು ಕಾರಣಗಳು ಸಹಾ ಇದೆ ಎಂದು ಹೇಳಬಹುದು. ಹಾಗಾದರೆ ಏನೀ ಹೊಸ ಸುದ್ದಿ ತಿಳಿಯೋಣ ಬನ್ನಿ.

ಕೆಜಿಎಫ್ ಸರಣಿ ಸಿನಿಮಾಗಳ ನಂತರ ನಟ ಯಶ್ ಅವರ ಜನಪ್ರಿಯತೆ ಹೆಚ್ಚಿದೆ. ನಟ ಯಶ್ ಈಗ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಆದ್ದರಿಂದಲೇ ಅವರ ಹೊಸ ಸಿನಿಮಾ ಯಾವುದಾಗಲಿದೆ ಎನ್ನುವ ಕುತೂಹಲ ಎಲ್ಲೆಡೆ ಇದೆ. ನಟನ ಮುಂದಿನ ನಡೆ ಏನಾಗಬಹುದು ಎನ್ನುವುದನ್ನು ತಿಳಿದುಕೊಳ್ಳಲು ಅಭಿಮಾನಿಗಳು ಮತ್ತು ಸಿನಿ ಪ್ರೇಮಿಗಳು ಸಾಕಷ್ಟು ಕಾತರರಾಗಿದ್ದಾರೆ. ಇವೆಲ್ಲವುಗಳ ಬೆನ್ನಲ್ಲೇ ನಟ ಯಶ್ ಹಾಲಿವುಡ್ ಸಿನಿಮಾ ನಿರ್ದೇಶಕರೊಬ್ಬರನ್ನು ಭೇಟಿ ಮಾಡಿದ್ದು ಅಚ್ಚರಿ ಯನ್ನು ಮೂಡಿಸಿತ್ತು. ಈಗ ಅದರ ಹಿಂದೆಯೇ ಮತ್ತೊಂದು ಅಪ್ಡೇಟ್ ಅಭಿಮಾನಿಗಳಿಗೆ ಥ್ರಿಲ್ ನೀಡಿದೆ.

ಕೆಲವು ದಿನಗಳ ಹಿಂದೆಯಷ್ಟೇ ನಟ ಯಶ್ ಅವರು ಹಾಲಿವುಡ್ ಸಿನಿಮಾ ನಿರ್ದೇಶಕ ಜೆಜೆ ಪೆರ್ರಿ ಅವರನ್ನು ಭೇಟಿಯಾಗಿದ್ದರು. ಈಗ ನಟ ಯಶ್ ಅವರು ಫಾರ್ಮುಲಾ ಕಾರ್ ರೇಸರ್ ಲೇವಿಸ್ ಹ್ಯಾಮಿಲ್ಟನ್ ಅವರನ್ನು ಭೇಟಿ ಮಾಡಿದ್ದು, ಅವರ ಭೇಟಿಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗುತ್ತಾ ಸಾಗಿದೆ. ಅಮೆರಿಕಾದ ಲಾಸ್ ಏಂಜಲ್ಸ್ ನಲ್ಲಿ ನಟ ಯಶ್ ಅವರು ಹ್ಯಾಮಿಲ್ಟನ್ ಅವರನ್ನು ಭೇಟಿ ಮಾಡಿದ್ದಾರೆ. ಲೇವಿಸ್ ಹ್ಯಾಮಿಲ್ಟನ್ ಅವರು ಜಗತ್ತಿನ ಅತ್ಯುತ್ತಮ ಫಾರ್ಮುಲಾ ಕಾರ್ ರೇಸರ್ ಗಳಲ್ಲಿ ಒಬ್ಬರು ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ.

ನಟ ಯಶ್ ಹ್ಯಾಮಿಲ್ಟನ್ ಅವರನ್ನು ಭೇಟಿ ಮಾಡಿದ ನಂತರ, ಬಹುಶಃ ಅವರು ಜೆಜೆ ಪೆರ್ರಿ ನಿರ್ದೇಶನದಲ್ಲಿ ಮೂಡಿ ಬರಲಿರುವ ಸಿನಿಮಾದಲ್ಲೇನಾದರೂ ಕಾರ್ ರೇಸರ್ ಆಗಿ ಕಾಣಿಸಿಕೊಳ್ಳುತ್ತಾರಾ ಎನ್ನುವ ಅನುಮಾನ ಗಳು ಅಭಿಮಾನಿಗಳಲ್ಲಿ ದಟ್ಟವಾಗಿದೆ. ಹೊಸ ಸಿನಿಮಾದ ಹೊಸ ಪಾತ್ರಕ್ಕೆ ನಟ ಯಶ್ ಅವರು ಪೂರ್ವ ತಯಾರಿಯನ್ನು ನಡೆಸುತ್ತಿದ್ದಾರಾ? ಎನ್ನುವ ಪ್ರಶ್ನೆ ಸಹಾ ಇದೆ. ಒಟ್ಟಾರೆ ಅಭಿಮಾನಿಗಳ ಕಾತರ ಹಾಗೂ ಕುತೂಹಲಗಳಿಗೆ ನಟ ಯಶ್ ಅವರು ಶೀಘ್ರದಲ್ಲೇ ಉತ್ತರ ನೀಡಬಹುದು ಎನ್ನುವ ನಿರೀಕ್ಷೆಗಳು ಅವರ ಅಭಿಮಾನಿಗಳಲ್ಲಿ ದಟ್ಟವಾಗಿದೆ.

Leave a Comment