Haripriya: ಮದ್ವೆಯಾದ ಎರಡೇ ತಿಂಗಳಲ್ಲಿ ಗುಡ್ ನ್ಯೂಸ್ ಕೊಡೋಕೆ ಸಿದ್ಧವಾದ ಸಿಂಹಪ್ರಿಯ..!

Written by Soma Shekar

Published on:

---Join Our Channel---

Hari Priya Vasista simha : ಸ್ಯಾಂಡಲ್ವುಡ್ ನ ಕ್ಯೂಟ್ ಜೋಡಿಗಳಲ್ಲಿ ಸದ್ಯಕ್ಕೆ ಸದ್ದು, ಸುದ್ದಿಯನ್ನು ಮಾಡುತ್ತಿರುವುದು ಸಿಂಹಪ್ರಿಯ ಜೋಡಿ(Simha Priya Couple) ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ತಮ್ಮ ಅಭಿಮಾನಿಗಳಿಗೆ ಅಚ್ಚರಿಯ ಜೊತೆಗೆ ಶಾ ಕ್ ನೀಡಿದ್ದ ಈ ಜೋಡಿ ಸಪ್ತಪದಿ ತುಳಿದು ಹೊಸ ಜೀವನಕ್ಕೆ ಅಡಿಯಿಟ್ಟಾಗಿದೆ. ಇವರ ಮದುವೆಯ ಸುದ್ದಿಯು, ಅನಂತರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ವೈರಲ್ ಆಗಿ, ಅಭಿಮಾನಿಗಳು ಹಾಗೂ ನೆಟ್ಟಿಗರಿಂದ ಮೆಚ್ಚುಗೆ ಗಳು ದೊಡ್ಡ ಸಂಖ್ಯೆಯಲ್ಲಿಯೇ ಹರಿದು ಬಂದಿತ್ತು. ಈಗ ಮದುವೆಯ ಸಿಹಿ ಸುದ್ದಿಯ ಬೆನ್ನಲ್ಲೇ ಮತ್ತೊಂದು ಸಿಹಿ ಸುದ್ದಿ ನೀಡಲು ಈ ಜೋಡಿ ಸಜ್ಜಾಗಿದೆ.

ಈ ವಿಚಾರವಾಗಿ ನಟಿ ಹರಿಪ್ರಿಯ(Hari Priya) ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ನಟಿ ಹಂಚಿಕೊಂಡ ಪೋಸ್ಟ್ ಈಗ ಎಲ್ಲೆಡೆ ವೈರಲ್ ಆಗ್ತಾ ಇದೆ. ಹರಿಪ್ರಿಯ ಮತ್ತು ವಸಿಷ್ಠ ಸಿಂಹ(Vasista Simha) ಜೋಡಿಯು ಕಳೆದ ಜನವರಿ 26 ರಂದು ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಅನಂತರ ಖುಷಿಯಾಗಿ ಹನಿಮೂನ್ ಎಂಜಾಯ್ ಮಾಡಿದ್ದರು ಈ ಜೋಡಿ. ಇದೀಗ ನಟಿ ಹರಿಪ್ರಿಯ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡು, ಗುಡ್ ನ್ಯೂಸ್ ಹೇಳ್ತೀನಿ ಅಂತ ಒಂದು ಹೊಸ ಅಪ್ಡೇಟ್ ನೀಡಿದ್ದಾರೆ.

ಹರಿಪ್ರಿಯಾ ಅವರು ತಮ್ಮ ಪೋಸ್ಟ್ ನಲ್ಲಿ, ನಂಗೆ ಗೊತ್ತು, ನೀವೆಲ್ಲಾ ಸರ್ಪ್ರೈಸ್ ಒಂದನ್ನು ತಿಳಿದುಕೊಳ್ಳಲು ಕುತೂಹಲರಾಗಿದ್ದೀರಿ ಅಂತ ನನಗೆ ಗೊತ್ತು. ಗೆಸ್ ಮಾಡಿ ಏನಿರಬಹುದು ಅಂತ.. ಬರೆದುಕೊಂಡು ತಮ್ಮ ಅಭಿಮಾನಿಗಳನ್ನು ಗೊಂದಲಕ್ಕೀಡು ಮಾಡಿದ್ದು, ಫ್ಯಾನ್ಸ್ ತಲೆಗೆ ಹುಳ ಬಿಟ್ಟಿದ್ದಾರೆ. ನಟಿಯು ಶೇರ್ ಮಾಡಿದ ಪೋಸ್ಟರ್ ನಲ್ಲಿ ಅವರನ್ನು ಕೇಳಿದ ಪ್ರಶ್ನೆಗಳ ನೋಟಿಫಿಕೇಶನ್ ಗಳ ಚಿತ್ರಗಳು ಕಂಡಿದೆ. ಅದರಲ್ಲಿ ನೆಟ್ಟಿಗರು ಹೆಸರೇನು ಮೇಡಂ? ಅನೌನ್ಸ್ ಯಾವಾಗ? ಗುಡ್ ನ್ಯೂಸ್ ? ಎಂದೆಲ್ಲಾ ಕೇಳಿದ್ದಾರೆ.

ನಟಿ ಹಂಚಿಕೊಂಡ ಪೋಸ್ಟ್ ನೋಡಿದ ಮೇಲೆ ಅವರ ಅಭಿಮಾನಿಗಳು ಖುಷಿಯಿಂದ ಕಂಗ್ರಾಜ್ಯುಲೇಶನ್ ಎಂದು ಹೇಳುತ್ತಿದ್ದಾರೆ. ಆದರೆ ಒಂದಷ್ಟು ಜನರು ಬಹುಶಃ ಅವರ ಹೊಸ ಸಿನಿಮಾ ಘೋಷಣೆ ಇರಬೇಕು ಎಂದಿದ್ದಾರೆ. ಇನ್ನೂ ಕೆಲವರು ನೀವು ತಾಯಿ ಆಗ್ತಾ ಇದ್ದೀರಾ? ಎಂದು ಸಹಾ ಪ್ರಶ್ನೆಗಳನ್ನು ಕೇಳಿದ್ದಾರೆ. ಒಟ್ಟಿನಲ್ಲಿ ಸರ್ಪ್ರೈಸ್ ಏನಂತ ನಟಿ ರಿವೀಲ್ ಮಾಡೋವರೆಗೂ ಅಭಿಮಾನಿಗಳು ಅದೇನಂತ ಊಹೆ ಮಾಡಬಹುದಷ್ಟೇ.

Leave a Comment