ಹನುಮಂತನು ಸತಿ ಸಮೇತವಾಗಿ ದರ್ಶನ ನೀಡುವ ಏಕೈಕ ಮಂದಿರ: ಅಕ್ಷರಶಃ ಅದ್ಭುತ ಈ ಕಥೆ !!

Written by Soma Shekar

Published on:

---Join Our Channel---

ವಾಯುಪುತ್ರ, ಅಂಜನೀ ಸುತ, ಶ್ರೀ ರಾಮನ ಬಂಟ ಹನುಮಂತನ ಬಗ್ಗೆ ಹೊಸ ಪರಿಚಯ ನೀಡುವ ಅವಶ್ಯಕತೆ ಖಂಡಿತ ಇಲ್ಲ. ಭಾರತ ಅವನಿಯಲ್ಲಿ ಅಸಂಖ್ಯಾತ ಜನರು ಹನುಮಂತನನ್ನು ದೈವ ಸ್ವರೂಪನಾಗಿ ಅನಂತ ಭಕ್ತಿ, ಶ್ರದ್ಧೆಗಳಿಂದ ಆರಾಧನೆ ಮಾಡುತ್ತಾರೆ. ಹನುಮಂತ ಅಥವಾ ಆಂಜನೇಯನು ಬ್ರಹ್ಮಚಾರಿ ಎನ್ನುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಆದರೆ ವಾಯು ಪುತ್ರ ಹನುಮನ ಪತ್ನಿಯ ದೇವಾಲಯವೊಂದು ನಮ್ಮ ದೇಶದಲ್ಲಿ ಇದ್ದು, ಹನುಮಂತನನ್ನು ಸತಿ ಸಮೇತವಾಗಿ ಪೂಜಿಸುತ್ತಾರೆ ಎಂದರೆ ನಿಮಗೆ ಅಚ್ಚರಿ ಎನಿಸಬಹುದು. ಆದರೆ ಈ ವಿಷಯ ವಾಸ್ತವವಾಗಿದೆ.

ಹಾಗಾದರೆ ಇಂತಹ ವಿಶೇಷವಾದ ಮಂದಿರ ಎಲ್ಲಿದೆ? ಹನುಮಂತನ ಪತ್ನಿ ಯಾರು? ಇಷ್ಟಕ್ಕೂ ಬ್ರಹ್ಮಚಾರಿಯಾದ ಹನುಮಂತನಿಗೆ ಮದುವೆ ಆಗಿತ್ತೇನು? ಎನ್ನುವ ಹತ್ತು ಹಲವು ಪ್ರಶ್ನೆಗಳು ನಿಮ್ಮಲ್ಲಿ ಮೂಡಿದ್ದರೆ ಅದಕ್ಕೆ ಉತ್ತರವನ್ನು ನೀಡಲು ಹೊರಟಿದ್ದೇವೆ. ಕೆಲವು ಪುರಾಣ ಕಥೆಗಳ ಪ್ರಕಾರ ಹನುಮಂತನ ಪತ್ನಿಯ ಹೆಸರು ಸುವರ್ಚಲಾ ದೇವಿ. ಈಕೆ ಸೂರ್ಯನ ಶಕ್ತಿಯಿಂದ ಉದ್ಭವಿಸಿದ ದೇವಿಯಾಗಿದ್ದು, ಈಕೆಯ ಜನ್ಮ ಹಾಗೂ ವಿವಾಹ ಎರಡೂ ರೋಚಕವಾಗಿದೆ.

ಹನುಮಂತನು ಬಾಲ್ಯದಲ್ಲಿ ಸೂರ್ಯ ಭಗವಾನನದಿಂದ ವಿದ್ಯೆಯನ್ನು ಕಲಿಸುತ್ತಿದ್ದನು. ಆಗ ಎಲ್ಲಾ ವಿದ್ಯೆಗಳನ್ನು ಕಲಿಯುವ ಹನುಮಂತನ ಹಾದಿಯಲ್ಲಿ ಒಂದು ತೊಡಕು ಎದುರಾಗುತ್ತದೆ.‌ ಅದೇನೆಂದರೆ ಕೆಲವೊಂದು ಸಿದ್ಧಿಗಳು ಎಂದರೆ ಗೃಹಸ್ಥಾಶ್ರಮ ಪ್ರವೇಶಿಸಿದವರು ಮಾತ್ರವೇ ಕಲಿಯಬೇಕಾದ ನವ ವ್ಯಾಕರಣ ವಿದ್ಯೆಯನ್ನು ಹನುಮಂತನು ಕಲಿಯುವುದು ಸಾಧ್ಯವಿರಲಿಲ್ಲ. ಹನುಮಂತನು ತನ್ನ ವಿದ್ಯಾಭ್ಯಾಸವನ್ನು ಪೂರ್ತಿ ಮಾಡಬೇಕಾದರೆ ವಿವಾಹ ಅನಿವಾರ್ಯ ಎಂದು ಭಾವಿಸಿದ ಸೂರ್ಯನು ತನ್ನ ಶಕ್ತಿಯಿಂದ ಒಬ್ಬ ಯುವತಿಯನ್ನು ಸೃಷ್ಟಿಸಿದ.

ಆ ಯುವತಿಯೇ ಸುವರ್ಚಲಾ ದೇವಿ. ಆಕೆ ಅಯೋನಿಜೆಯಾಗಿದ್ದಳು. ( ಅಂದರೆ ಸ್ತ್ರೀ ಯೋನಿಯಿಂದ ಸಾಮಾನ್ಯ ರೀತಿಯಲ್ಲಿ ಜನ್ಮ ತಳೆದ ಶಿಶುವಾಗಿರಲಿಲ್ಲ ) ಆದರೆ ಹನುಮನು ಸುವರ್ಚಲಾ ದೇವಿಯನ್ನು ಮದುವೆಯಾಗಲು ಒಪ್ಪಲಿಲ್ಲ. ಇದರಿಂದ ತನ್ನ ಬ್ರಹ್ಮಚರ್ಯ ವ್ರತಕ್ಕೆ ಭಂಗವಾಗುತ್ತದೆ ಎಂದು ಹೇಳಿದನು. ಆದರೆ ಸೂರ್ಯನು ತನ್ನ ಗುರುದಕ್ಷಿಣೆಯಾಗಿ ತನ್ನ ಮಗಳನ್ನು ಮದುವೆಯಾಗುವಂತೆ ಒಪ್ಪಿಸಿದ. ವಿದ್ಯೆ ಕಲಿಯುವುದಕ್ಕಾಗಿ ಹನುಮಂತನು ಸಹಾ ಒಪ್ಪಲೇಬೇಕಾಯಿತು‌.

ಆದರೆ ಅನಂತರ ಅಂದರೆ ಮದುವೆಯ ನಂತರ ಸುವರ್ಚಲಾ ದೇವಿಯು ತಪಸ್ಸಿಗೆ ಹೊರಟು ಹೋದಳು. ಆದ್ದರಿಂದಲೇ ಹನುಮಂತನ ಬ್ರಹ್ಮಚರ್ಯಕ್ಕೆ ಯಾವುದೇ ದೋಷ ಬರಲಿಲ್ಲ. ಸುವರ್ಚಲಾ ದೇವಿಯು ಮದುವೆಯ ನಂತರವೇ ತಪಸ್ಸಿಗೆ ಹೊರಟು ಹೋಗಿದ್ದರಿಂದ ಆಕೆಯ ವಿಚಾರವಾಗಿ ಎಲ್ಲೂ ಕೂಡಾ ಅಷ್ಟೊಂದು ಹೇಳಿದ್ದಾರೆ. ಪರಾಶರ ಮುನಿಗಳು ಹನುಮಂತನ ಬಗ್ಗೆ ಬರೆದಿರುವ ಪುಸ್ತಕದಲ್ಲಿ ಸುವರ್ಚಲಾ ದೇವಿಯ ಬಗ್ಗೆ ತಿಳಿಸಲಾಗಿದೆ.

ಇನ್ನು ದೇವಿ ಸುವರ್ಚಲಾ ದೇವಿಯ ಮಂದಿರವೊಂದು ಇದ್ದು, ಇಲ್ಲಿ ಹನುಮಂತನನ್ನು ಸತಿ ಸಮೇತನಾಗಿ ಆರಾಧನೆ ಮಾಡಲಾಗುತ್ತದೆ. ಪ್ರಸ್ತುತ ದೇವಿ ಸುವರ್ಚಲಾ ಮಂದಿರವು ತೆಲಂಗಾಣದ ಖಮ್ಮಂ ಜಿಲ್ಲೆಯ ಪಂದಿಳ್ಳ ಪಲ್ಲಿ ಎನ್ನುವ ಸ್ಥಳದಲ್ಲಿ ಇದ್ದು, ಜನರು ಭಕ್ತಿಯಿಂದ ಇಲ್ಲಿಗೆ ಬಂದು ಸುವರ್ಚಲಾ ದೇವಿಯನ್ನು ಆರಾಧನೆ ಮಾಡುತ್ತಾರೆ. ಹನುಮಂತನು ಸತಿ ಸಮೇತ ವಾಗಿ ದರ್ಶನ ನೀಡುವ ಏಕೈಕ ಮಂದಿರಾ ಇದಾಗಿದೆ ಎನ್ನಲಾಗುತ್ತದೆ.

Leave a Comment