ಸ್ನೇಹಿತನ ಮದುವೆಗೆ ವಾರೆವ್ಹಾ ಅನ್ನೋ ಉಡುಗೊರೆ: ವಾದ್ಯ, ಮೆರವಣಿಗೆ ಜೊತೆ ಬಂತು ಉಡುಗೊರೆ!!

Written by Soma Shekar

Published on:

---Join Our Channel---

ಮದುವೆ ಎಂದ ಮೇಲೆ ಅಲ್ಲಿ ಸಡಗರ, ಸಂಭ್ರಮದ ಜೊತೆಗೆ ಮತ್ತೊಂದು ಪ್ರಮುಖ ಆಕರ್ಷಣೆ ಏನು ಎನ್ನುವುದಾದರೆ ಅದು ಸಂಬಂಧಿಕರು ಹಾಗೂ ಸ್ನೇಹಿತರಿಂದ ವಧು, ವರನಿಗೆ ಸಿಗುವ ಉಡುಗೊರೆಗಳಾಗಿರುತ್ತವೆ. ಆಪ್ತರು,‌ ಸಂಬಂಧಿಕರು ಮದುವೆ ಎಂದ ಕೂಡಲೇ ಏನು ಉಡುಗೊರೆ ನೀಡಬೇಕು ಎಂದು ಆಲೋಚನೆ ಮಾಡಲು ಆರಂಭಿಸಿ ಬಿಡುತ್ತಾರೆ. ಸಾಮಾನ್ಯವಾಗಿ ಒಡವೆಗಳು, ದೇವರ ವಿಗ್ರಹಗಳು, ಅಲಂಕಾರಿಕ ವಸ್ತುಗಳು, ರಾಧಾ ಕೃಷ್ಣ ಬೊಂಬೆಗಳಂತಹವುಗಳನ್ನು ಮದುವೆಯಲ್ಲಿ ಉಡುಗೊರೆಯಾಗಿ ನೀಡುವುದನ್ನು ನಾವೆಲ್ಲರೂ ನೋಡಿದ್ದೇವೆ.

ಇವೆಲ್ಲವುಗಳ ನಡುವೆ ಇತ್ತೀಚಿನ ದಿನಗಳಲ್ಲಿ ಕೆಲವರು ಸ್ನೇಹಿತರ ಮದುವೆಯಲ್ಲಿ ಫನ್ನಿ ಉಡುಗೊರೆಗಳನ್ನು ಸಹಾ ನೀಡುತ್ತಾರೆ. ಇಂತಹ ಫನ್ನಿ ಸನ್ನಿವೇಶಗಳ ವೀಡಿಯೋಗಳು ಸಹಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಎಲ್ಲರ ಗಮನವನ್ನು ಸಹಾ ಸೆಳೆಯುವುದನ್ನು ನಾವು ನೋಡಿದ್ದೇವೆ. ಅದರಲ್ಲಿ ಕೆಲವು ವೀಡಿಯೋಗಳು ನಮಗೆ ಅಚ್ಚರಿಯನ್ನು ಉಂಟು ಮಾಡುತ್ತವೆ. ಆದರೆ ಈಗ ಸೋಶಿಯಲ್ ಮೀಡಿಯಾಗಳಲ್ಲಿ ಒಂದು ವಿಶೇಷ ವೀಡಿಯೋ ವೈರಲ್ ಆಗಿದ್ದು, ಮದುವೆಗಾಗಿ ಸ್ನೇಹಿತರು ನೀಡಿದ ಉಡುಗೊರೆ ಕಂಡು ನೆಟ್ಟಿಗರು ಶಾ ಕ್ ಆಗಿದ್ದಾರೆ.

ಹಾಗಾದರೆ ಏನೀ ಉಡುಗೊರೆಯ ವಿಶೇಷ ಎನ್ನುವಿರಾ? ಬನ್ನಿ ಹೇಳ್ತೀವಿ. ಈ ವೈರಲ್ ವೀಡಿಯೋದಲ್ಲಿ ಸ್ನೇಹಿತನ ಮದುವೆಗೆ ಅವರ ಸ್ನೇಹಿತರ ದಂಡು ಬರೋಬ್ಬರಿ 200 ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಉಡುಗೊರೆ ನೀಡಿದ ವಿಧಾನ ಕೂಡಾ ಬಹಳ ವಿಶೇಷವಾಗಿದೆ ಎನ್ನುವುದು ಬಹಳ ಕುತೂಹಲವನ್ನು ಕೆರಳಿಸಿರುವ ವಿಷಯವಾಗಿದೆ. ಈ ಮದುವೆ ನಡೆದಿರುವುದು ತಮಿಳುನಾಡಿನ ವಿರುದುನಗರ ಜಿಲ್ಲೆಯ ಸಾದೂರು ಸಮೀಪದ ಎದುರುಕೋಟಾದಲ್ಲಿ.

ಎದುರುಕೋಟಾದ ಮುತ್ತುಲತ್ಸುಮಿ ದಂಪತಿಯ ಮಗ ನವನೀತ್ ಚೆನ್ನೈ ನಲ್ಲಿ ಉದ್ಯೋಗ ಮಾಡುತ್ತಿದ್ದು, ಆತನಿಗೆ ಎದುರುಕೋಟಾದ ಮೀನಾಕ್ಷಿಪುರರ ಅನಿತ ಎನ್ನುವವರೊಂದಿಗೆ ವಿವಾಹ ನಿಶ್ಚಯವಾಗಿತ್ತು. ಈ ವೇಳೆ ಮದುವೆಗೆ ಬಂದ ವರನ ಸ್ನೇಹಿತರು ಸುಮಾರು 200 ಪುಸ್ತಕಗಳನ್ನು ಪ್ಲೇಟ್ ಗಳಲ್ಲಿ ಅಲಂಕರಿಸಿ ಇಟ್ಟುಕೊಂಡು, ಮಂಗಳ ವಾದ್ಯಗಳ ಜೊತೆಗೆ ಮೆರವಣಿಗೆಯಲ್ಲಿ ತಂದು ವರ ನಿಗೆ ಉಡುಗೊರೆ ನೀಡಿದ್ದು, ಪುಸ್ತಕಗಳ ಮೆರವಣಿಗೆ ನೋಡಿ ಜನ ಅಚ್ಚರಿ ಪಟ್ಟಿದ್ದಾರೆ.

Leave a Comment