ನಾಚಿಕೆ ಬಿಡಿ ಎಂದು ಬೇಷರಂ ರಂಗ್ ಸಾಂಗ್ ಗೆ ಸೈಜ್ ಪ್ಲಸ್ ಮಾಡೆಲ್ ಡ್ಯಾನ್ಸ್ ಅಬ್ಬರ: ಸಿಕ್ತು ದೀಪಿಕಾ ಪಡುಕೋಣೆ ಮೆಚ್ಚುಗೆ

Written by Soma Shekar

Published on:

---Join Our Channel---

ಶಾರೂಖ್ ಖಾನ್ (Shah Rukh Khan) ದೀಪಿಕಾ ಪಡುಕೋಣೆ (Deepika Padukone) ಅಭಿನಯದ ಪಠಾಣ್(Pathan) ಸಿನಿಮಾದ ಬೇಷರಮ್ ರಂಗ್ (Besharam Rung) ಹಾಡು ಬಿಡುಗಡೆ ಆಗಿ, ದೊಡ್ಡ ಸಂಚಲನದ ಜೊತೆಗೆ ವಿ ವಾ ದವನ್ನು ಸಹಾ ಸೃಷ್ಟಿಸಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಒಂದು ಕಡೆ ವಿ ವಾ ದಗಳಿಗೆ ಕಾರಣವಾಗಿದ್ದರೂ, ಮತ್ತೊಂದು ಕಡೆ ಈ ಹಾಡಿಗೆ ಫಿದಾ ಆಗಿರುವ ಸಿನಿ ಪ್ರೇಮಿಗಳು ಹಾಗೂ ಅನ್ಯರು ರೀಲ್ಸ್ ವೀಡಿಯೋಗಳನ್ನು ಮಾಡಿ ಈ ಹಾಡಿಗೆ ಹೆಜ್ಜೆ ಹಾಕುತ್ತಾ ಎಲ್ಲರ ಗಮನವನ್ನು ಸೆಳೆಯುತ್ತಿದ್ದಾರೆ. ಈಗ ಪ್ಲಸ್ ಸೈಜ್ ನ ಸೋಶಿಯಲ್ ಮೀಡಿಯಾ ಇನ್ಫ್ಲೂಯೆನ್ಸರ್ (influencer) ಒಬ್ಭಾಕೆ ಕೂಡಾ ರೀಲ್ಸ್ ವೀಡಿಯೋ ಮೂಲಕ ಸುದ್ದಿಯಾಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ತನ್ವಿ ಗೀತಾ ರವಿಶಂಕರ್(Tanvi Geeta Ravishankar) ಹೆಸರಿನ ಮಹಿಳೆಯೊಬ್ಬರು ಪಠಾಣ್ (Pathan) ಸಿನಿಮಾದ ಬೇಷರಮ್ ರಂಗ್ ಹಾಡಿಗೆ ಹೆಜ್ಜೆ ಹಾಕಿದ್ದು, ಆಕೆ ಪ್ಲಸ್ ಸೈಜ್ ಆಗಿದ್ದರೂ ಕೂಡಾ ತನ್ನ ಡ್ಯಾನ್ಸ್ ಮೂವ್ ಗಳ ಮೂಲಕ ನೆಟ್ಟಿಗರಿಗೆ ಅಚ್ಚರಿ ಯನ್ನು ಮೂಡಿಸಿದ್ದಾರೆ. ತನ್ವಿ ಅವರಿಗೆ ಇನ್ಸ್ಟಾಗ್ರಾಂ ನಲ್ಲಿ 153K ಅಂದರೆ ಸುಮಾರು ಒಂದೂವರೆ ಲಕ್ಷ ಹಿಂಬಾಲಕರನ್ನು ಪಡೆದುಕೊಂಡಿದ್ದಾರೆ. (photo instagram/@thechubbytwirler)

ಈಗಾಗಲೇ ಜನಪ್ರಿಯತೆ ಪಡೆದಿರುವ ವೈರಲ್ ಹಾಡು ಬೇಷರಮ್ ರಂಗ್ ನ ಹುಕ್ ಸ್ಟೆಪ್ ಹಾಕುತ್ತಾ, ಡ್ಯಾನ್ಸ್ ರೀಕ್ರಿಯೇಟ್ ಮಾಡಲು ತನ್ವಿ ಪ್ರಯತ್ನವನ್ನು ಮಾಡಿದ್ದಾರೆ. ಪರ್ಪಲ್ ಬಣ್ಣದ ಬಿಕಿನಿ ಧರಿಸಿದ ತನ್ವಿ ಸಮುದ್ರ ತೀರದಲ್ಲಿ ಬಿಂದಾಸ್ ಆಗಿ ಡ್ಯಾನ್ಸ್ ಮಾಡುವುದನ್ನು ನಾವು ಅವರ ಫೋಟೋಗಳು ಮತ್ತು ವೀಡಿಯೋದಲ್ಲಿ ನೋಡಬಹುದಾಗಿದ್ದು, ತನ್ವಿ ಗೆ ಮೆಚ್ಚುಗೆಗಳು ಹರಿದು ಬರುತ್ತಿವೆ. (photo instagram/@thechubbytwirler)

ವೀಡಿಯೋ ಶೇರ್ ಮಾಡಿಕೊಂಡ ತನ್ವಿ, ನಿರ್ಲಜ್ಜರಾಗಿರಿ, ನಿಮಗೆ ಇಷ್ಟವಾದ ಕೆಲಸವನ್ನು ಮಾಡುವಾಗ, ನಿಮ್ಮಿಷ್ಟದ ಬಟ್ಟೆ ಧರಿಸಿ, ನಿಮ್ಮಿಷ್ಟದಂತೆ ಬದುಕುವಾಗ ಅದು ಬೇರೆಯವರ ದೃಷ್ಟಿಯಲ್ಲಿ ನಿರ್ಲಜ್ಜೆ ಎನಿಸಿದರೆ ಅದರಲ್ಲಿ ಯಾವ ಸಮಸ್ಯೆ ಸಹಾ ಇಲ್ಲ. ನಾವು 2023 ಕ್ಕೆ ಅಡಿಯಿಟ್ಟಿದ್ದೇವೆ. ಇಲ್ಲಿ ನಿರ್ಲಜ್ಜರಾದವರು ಮಾತ್ರವೇ ಕಾಣುತ್ತಾರೆ ಎಂದು ಬೋಲ್ಡ್ ಆಗಿ ಬರೆದುಕೊಂಡಿದ್ದಾರೆ. (photo instagram/@thechubbytwirler)

ಪ್ಲಸ್ ಸೈಜ್ ನ ಈ ಪ್ರಭಾವಿ ಸೋಶಿಯಲ್ ಮೀಡಿಯಾ ಸ್ಟಾರ್ ಬೇಷರಮ್ ರಂಗ್ ಹಾಡಿಗೆ ದೀಪಿಕಾ ಪಡುಕೋಣೆಯ ಹಾಗೆ ಹಾಟ್ ಹಾಟ್ ಆಗಿ ಮಾಡಿದ ನೃತ್ಯವನ್ನು ನೋಡಿ ನೆಟ್ಟಿಗರು ಬಹಳ ಇಷ್ಟ ಪಟ್ಟಿದ್ದು 75 ಸಾವಿರಕ್ಕೂ ಅಧಿಕ ಮೆಚ್ಚುಗೆ ಗಳು ಹರಿದು ಬಂದಿದ್ದು, ಲಕ್ಷಗಳ ಸಂಖ್ಯೆಯಲ್ಲಿ ವೀಡಿಯೋ ವೀಕ್ಷಣೆಯನ್ನು ಪಡೆದುಕೊಂಡು ಭರ್ಜರಿಯಾಗಿ ವೈರಲ್ ಆಗುತ್ತಿದೆ. (photo instagram/@thechubbytwirler)

ವಿಶೇಷ ಏನೆಂದರೆ ತನ್ವಿ(Tanvi) ಶೇರ್ ಮಾಡಿದ ಈ ವೀಡಿಯೋಗೆ ಸ್ಟಾರ್ ನಟಿ ದೀಪಿಕಾ ಪಡುಕೋಣೆ (Deepika Padukone) ಸಹಾ ಮೆಚ್ಚುಗೆಯನ್ನು ನೀಡಿದ್ದಾರೆ. ತನ್ವಿ ವೀಡಿಯೋ ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ ಅದು ಭರ್ಜರಿಯಾಗಿ ವೈರಲ್ ಆಗಿದೆ. ಇನ್ನು ನೆಟ್ಟಿಗರು ತನ್ವಿ ಗೆ, ನೀವು ಫೆಂಟಾಸ್ಟಿಕ್, ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದೀರಾ, ನೀವು ಅನೇಕರಿಗೆ ಸ್ಪೂರ್ತಿ, ನಿಮ್ಮ ಧೈರ್ಯಕ್ಕೆ ಮೆಚ್ಚಲೇಬೇಕು ಎಂದೆಲ್ಲಾ ಕಾಮೆಂಟ್ ಗಳನ್ನು ಮಾಡಿದ್ದಾರೆ. (photo instagram/@thechubbytwirler)

Leave a Comment