ಸೈಕ್ ನವಾಜ್ ಸೋತಿದ್ದೆಲ್ಲಿ? ಬಿಗ್ ಬಾಸ್ ಪ್ರೇಕ್ಷಕರಿಗೆ ನವಾಜ್ ಆಟ 2ನೇ ವಾರಕ್ಕೆ ಸಾಕಾಯ್ತಾ?

Written by Soma Shekar

Published on:

---Join Our Channel---

ಬಿಗ್ ಬಾಸ್ ಕನ್ನಡ ಸೀಸನ್ ಒಂಬತ್ತು ಎರಡನೇ ವಾರಾಂತ್ಯಕ್ಕೆ ಬಂದು ತಲುಪಿದೆ. ವೀಕೆಂಡ್ ಎಂದರೆ ಪ್ರೇಕ್ಷಕರಿಗೆ ಸಾಕಷ್ಟು ಕುತೂಹಲ ಉಂಟು ಮಾಡುವ ವಿಷಯ ಎಂದರೆ ನಾಮಿನೇಟ್ ಆಗಿ ಮನೆಯಿಂದ ಯಾರು ಹೊರಗೆ ಬರಲಿದ್ದಾರೆ ಎನ್ನುವುದಾಗಿರುತ್ತದೆ. ಬಿಗ್ ಬಾಸ್ ವರ್ಷಗಳು ಕಳೆದ ಹಾಗೆ ಮಾಡಿಕೊಂಡ ಒಂದಷ್ಟು ಬದಲಾವಣೆಗಳ ಕಾರಣದಿಂದಾಗಿ ಈಗಿನ ಸೀಸನ್ ಗಳಲ್ಲಿ ಕೇವಲ ಸೆಲೆಬ್ರಿಟಿಗಳು ಮಾತ್ರವೇ ಅಲ್ಲದೇ ಸೋಶಿಯಲ್ ಮೀಡಿಯಾಗಳ ಮೂಲಕ ಸಂಚಲನ ಸೃಷ್ಟಿಸಿದ ವ್ಯಕ್ತಿಗಳು, ಸೋಶಿಯಲ್ ಮೀಡಿಯಾಗಳಲ್ಲಿ ಜನಪ್ರಿಯತೆ ಪಡೆದುಕೊಂಡ ಪ್ರತಿಭಾವಂತರಿಗೂ ಸಹಾ ಬಿಗ್ ಬಾಸ್ ಮನೆಯೊಳಕ್ಕೆ ಸ್ಪರ್ಧಿಗಳಾಗಿ ಪ್ರವೇಶಿಸುವ ಅವಕಾಶವನ್ನು ಕಲ್ಪಿಸಲಾಗುತ್ತಿದೆ. ಈ ಬಾರಿ ಈ ಹಿನ್ನೆಲೆಯಲ್ಲಿ ಸಿನಿಮಾ ರಿವ್ಯೂಗಳನ್ನು ತನ್ನದೇ ಸ್ಟೈಲ್ ನಲ್ಲಿ ನೀಡಿ ಫೇಮಸ್ ಆಗಿರುವ ಸೈಕ್ ನವಾಜ್ ಬಿಗ್ ಬಾಸ್ ಸ್ಪರ್ಧಿಯಾಗಿ ಮನೆ ಪ್ರವೇಶ ಮಾಡಿದ್ದರು.

ಹೊರಗೆ ಸಿನಿಮಾ ರಿವ್ಯೂ ಗಳನ್ನು ನೀಡುತ್ತಾ ಸಖತ್ ಆ್ಯಕ್ಟೀವ್ ಆಗಿದ್ದ ನವಾಜ್ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದ ಎರಡು ಮೂರು ದಿನಗಳ ಕಾಲ ಮೌನಕ್ಕೆ ಜಾರಿದಂತೆ ಕಂಡಿದ್ದು ಸುಳ್ಳಲ್ಲ. ಅಲ್ಲದೇ ಮೊದಲ ವಾರದಲ್ಲಿ ಜೋಡಿ ಟಾಸ್ಕ್ ನ ಭಾಗವಾಗಿ ನವಾಜ್ ಅರುಣ್ ಸಾಗರ್ ಅವರ ಜೋಡಿಯಾಗಿದ್ದ ಕಾರಣ ಒಂದು ವಾರ ಹೆಚ್ಚು ಸಮಯವನ್ನು ಅರುಣ್ ಸಾಗರ್ ಜೊತೆಗೇ ಕಳೆದ ನವಾಜ್ ಮನೆಯ ಅನ್ಯ ಸದಸ್ಯರ ಜೊತೆಗೆ ಅಷ್ಟಾಗಿ ಬೆರೆಯಲಿಲ್ಲ. ಬಹುಶಃ ಅವರೆಲ್ಲಾ ಸೆಲೆಬ್ರಿಟಿಗಳು ಎನ್ನುವ ಹಿಂಜರಿಕೆ ನವಾಜ್ ಮನಸ್ಸಿನಲ್ಲಿ ಇತ್ತೇನೋ. ಅಲ್ಲದೇ ಅರುಣ್ ಸಾಗರ್ ಅವರು ನವಾಜ್ ನನ್ನು ಕಂಟ್ರೋಲ್ ಮಾಡುತ್ತಿದ್ದಾರೆ ಎನ್ನುವಂತೆ ಕೆಲವು ಕಡೆ ಕಂಡಿತ್ತು.

ಆದರೆ ದಿನ ಕಳೆದ ಹಾಗೆ ನವಾಜ್ ಮನೆಯ ಅನ್ಯ ಸದಸ್ಯರ ಜೊತೆಗೆ ಬರೆಯಲು ಪ್ರಾರಂಭಿಸಿದ್ದರು. ಅದರಲ್ಲೂ ವಿಶೇಷವಾಗಿ ನವಾಜ್ ಐಶ್ವರ್ಯ ಪಿಸ್ಸೆ ಅವರಿಗೆ ಪ್ರಪೋಸ್ ಮಾಡಿದ ವಿಚಾರ ದೊಡ್ಡಮಟ್ಟದಲ್ಲಿ ಸದ್ದು-ಸುದ್ದಿ ಗಳಾದವು. ಇದು ಪ್ರೇಕ್ಷಕರ ಗಮನವನ್ನು ಸೆಳೆದಿತ್ತು. ನವಾಜ್ ಹೇಳಿದಂತಹ ಕೆಲವು ವಿಚಾರಗಳಿಗೆ ಮೊದಲ ವಾರಂತ್ಯದಲ್ಲಿ ಕಿಚ್ಚ ಸುದೀಪ್ ಅವರು ನವಾಜ್ ಗೆ ಬಂದಷ್ಟು ಸಲಹೆ ಸೂಚನೆಗಳನ್ನು ನೀಡಿದ್ದರು. ಆದರೆ ಮನೆಯಲ್ಲಿ ಟಾಸ್ಕ್ ಗಳ ವಿಚಾರದಲ್ಲಿ ನವಾಜ್ ಅದೇಕೋ ಹಿಂದುಳಿದರು. ಮನೆಯ ಎಲ್ಲ ಸದಸ್ಯರ ಜೊತೆಗೆ ಬೆರೆಯುವ, ಮಾತನಾಡುವ ದೃಶ್ಯಗಳು ಹೆಚ್ಚಾಗಿ ಕಾಣಲಿಲ್ಲ.

ಹೊರಗಡೆ ರಿವ್ಯೂ ನೀಡುತ್ತಾ ಭರ್ಜರಿ ಮಾತನಾಡುತ್ತಿದ್ದ ಹುಡುಗ ಬಿಗ್ ಬಾಸ್ ಮನೆಯಲ್ಲಿ ಹೇಗೆಲ್ಲಾ ಆಟ ಆಡುತ್ತಾನೆ ಎನ್ನುವ ನಿರೀಕ್ಷೆಗಳು ಖಂಡಿತಾ ಪ್ರೇಕ್ಷಕರಿಗೆ ಬಹಳವಿತ್ತು. ಮನೆಯ ಸದಸ್ಯರಿಗೆ ನವಾಜ್ ಸ್ವಲ್ಪ ಸ್ವಲ್ಪವೇ ಹತ್ತಿರವಾಗುತ್ತಿದ್ದರು. ಆದರ ಪ್ರೇಕ್ಷಕರಿಗೆ ಯಾವ ವಿಷಯದಲ್ಲಿ ನವಾಜ್ ಯಾವ ಇಷ್ಟವಾಗಲಿಲ್ಲವೋ ಗೊತ್ತಿಲ್ಲ. ಆದರೆ ಈ ವಾರ ನಾಮಿನೇಟ್ ಆಗಿದ್ದ ಸದಸ್ಯರಲ್ಲಿ ಪ್ರೇಕ್ಷಕರಿಂದ ಕಡಿಮೆ ಓಟುಗಳನ್ನು ಪಡೆದ ಕಾರಣ ನವಾಜ್ ಬಿಗ್ ಬಾಸ್ ಮನೆಯಿಂದ ಹೊರ ಬರುವಂತೆ ಆಗಿದೆ. ಎರಡು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ನವಾಜ್ ಜರ್ನಿ ಈ ವಾರಾಂತ್ಯಕ್ಕೆ ಕೊನೆಯಾಗಿದೆ.

ಆದರೆ ಅಲ್ಪ ಸಮಯದಲ್ಲೇ ಸಿನಿಮಾಗಳಿಗೆ ರಿವ್ಯೂ ನೀಡುತ್ತಾ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡು, ಬಿಗ್ ಬಾಸ್ ಕನ್ನಡದ ಸೀಸನ್ ಒಂಬತ್ತಕ್ಕೆ ಅವಕಾಶವನ್ನು ದಕ್ಕಿಸಿಕೊಂಡಿದ್ದು ನವಾಜ್ ಅವರಿಗೆ ಸಿಕ್ಕಂತಹ ಬಹುದೊಡ್ಡ ಅವಕಾಶ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ನವಾಜ್ ಎಲಿಮಿನೇಟ್ ಆಗಿ ಹೊರಬಂದಿರುವುದು ಅವರನ್ನು ಇನ್ನಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ನೋಡಬೇಕು ಎಂದುಕೊಂಡಿದ್ದ ಅವರನ್ನು ಮೆಚ್ಚಿದ್ದ ಪ್ರೇಕ್ಷಕರಿಗೆ ಮಾತ್ರ ಈಗ ನಿರಾಸೆ ಉಂಟಾಗಿದೆ. ಆದರೆ ಪ್ರೇಕ್ಷಕರು ಊಹಿಸಿದ್ದ ಮಟ್ಟಕ್ಕೆ ನವಾಜ್ ತಲುಪಲು ಎಲ್ಲೋ ಒಂದು ಕಡೆ ಎಡವಿದ್ದಾರೆ‌. ಬಹುಶಃ ಅದೇ ಕಾರಣದಿಂದ ನವಾಜ್ ಎಲಿಮಿನೇಷನ್ ಎದುರಿಸಿದ್ದಾರೆ.

Leave a Comment