ಸಿನಿಮಾ ಪ್ರಿ ರಿಲೀಸ್ ನಿರೂಪಣೆಗೆ ಸ್ಟಾರ್ ಆ್ಯಂಕರ್ ಸುಮಾ ಪಡೆಯೋ ಸಂಭಾವನೆ ಇಷ್ಟೊಂದಾ? ಶಾಕಿಂಗ್ ಆದ್ರೂ ಸತ್ಯ!!

Written by Soma Shekar

Published on:

---Join Our Channel---

Anchor Suma : ಕಿರುತೆರೆಯ ವಿಷಯ ಬಂದಾಗ ಇಲ್ಲಿ ಪ್ರಸಾರವಾಗುವ ವೈವಿದ್ಯಮಯ ಕಾರ್ಯಕ್ರಮಗಳು ಜನಪ್ರಿಯತೆ ಪಡೆದಿರುತ್ತವೆ. ಈ ಶೋ ಗಳಲ್ಲಿ ನಿರೂಪಣೆ ಮಾಡುವ ನಿರೂಪಕರ ಪಾತ್ರವಂತೂ ಇಲ್ಲಿ ಬಹಳ ಮುಖ್ಯವಾಗಿದೆ‌. ನಿರೂಪಣೆಯ ಮೂಲಕವೇ ಕೆಲವರು ಸಿನಿಮಾ ಸ್ಟಾರ್ ಗಳಷ್ಟೇ ಹೆಸರನ್ನು ಮಾಡಿದ್ದಾರೆ. ಅಂತಹ ಸ್ಟಾರ್ ನಿರೂಪಕಿಯರಲ್ಲಿ ಒಬ್ಬರು ತೆಲುಗು ಕಿರುತೆರೆಯಲ್ಲಿ ಮತ್ತು ಸಿನಿಮಾ ಕಾರ್ಯಕ್ರಮಗಳ ನಿರೂಪಣೆಯಲ್ಲೂ ಎತ್ತಿದ ಕೈ ಎನಿಸಿರುವ ಸ್ಟಾರ್ ನಿರೂಪಕಿ ಸುಮ. ನಿರೂಪಕಿ ಸುಮ(Anchor Suma) ತೆಲುಗಿನಲ್ಲಿ ಸಿನಿಮಾ‌ ನಟ ನಟಿಯರಷ್ಟೇ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.

ಸುಮ ಮೂಲತಃ ಕೇರಳದವರು(Kerala), ಆದರೆ ಅವರು ತೆಲುಗು ಭಾಷೆಯ ಮೇಲೆ ಪಡೆದಿರುವ ಹಿಡಿತ, ನಿರರ್ಗಳವಾಗಿ ಮಾತನಾಡುವ ಪರಿ ಅವರ ಶ್ರಮಕ್ಕೆ ಸಾಕ್ಷಿಯಾಗಿದೆ. ಅಲ್ಲದೇ ಸಮಯಕ್ಕೆ ಅನುಗುಣವಾಗಿ ಡೈಲಾಗ್ ಗಳನ್ನು ಹೇಳುವ ಮೂಲಕವೂ, ಹಾಸ್ಯ ಚಟಾಕಿಗಳನ್ನು ಹಾರಿಸುವ ಮೂಲಕವೂ ಜನರ ಗಮನ ಸೆಳೆಯುತ್ತಾರೆ. ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮಗಳಿಗೆ(Pre release event) ಸುಮ ಅವರ ನಿರೂಪಣೆಗೆ ಮೊದಲ ಆದ್ಯತೆ ನೀಡುತ್ತಾರೆ.

ಸುಮ ನಿರೂಪಣೆ(Suma Anchoring) ಮಾಡುವುದಾದರೆ ಯಾವುದೇ ಸಮಸ್ಯೆ ಎರುವುದಿಲ್ಲ ಎನ್ನುವುದು ಆಯೋಜಕರ ಆಲೋಚನೆ ಆಗಿದೆ. ಏಕೆಂದರೆ ಸುಮ ಅವರಿಗೆ ಬಹುತೇಕ ಸಿನಿಮಾಗಳ ನಟ,ನಟಿಯರು, ನಿರ್ಮಾಪಕ, ನಿರ್ದೇಶಕರ ಪರಿಚಯ,ಮಾಹಿತಿ ಇರುವುದರಿಂದ ನಿರೂಪಣೆಯಲ್ಲಿ ಅಚ್ಚು ಕಟ್ಟಾಗಿ ಮಾಡುತ್ತಾರೆ ಎನ್ನುವ ಭರವಸೆ ಅವರಿಗೆ ಇದೆ. ಆದ್ದರಿಂದಲೇ ಸುಮ ಅವರಿಗೆ ಮೊದಲ ಆದ್ಯತೆ ನೀಡುತ್ತಾರೆ.

ಟಿವಿಯಲ್ಲೂ ಸಹಾ ಕೆಲವು ಶೋ ಗಳ ನಿರೂಪಣೆ ಮಾಡುವ ಸುಮ ಸಿಕ್ಕಾಪಟ್ಟೆ ಬ್ಯುಸಿ ಇರುವ ನಿರೂಪಕಿ ಆಗಿದ್ದಾರೆ. ತೆಲುಗಿನಲ್ಲಿ ಒಂದರ್ಥದಲ್ಲಿ ಸುಮ ನಿರೂಪಣೆಯಲ್ಲಿ ಏಕಸ್ವಾಮ್ಯ ಸಾಧಿಸಿದ್ದು, ಅನೇಕರು ಸುಮ ಹೊಸ ಪ್ರತಿಭೆಗಳಿದೆ ದೊಡ್ಡ ಅಡ್ಡಗಾಲು ಎಂದು ಟೀಕೆ ಮಾಡುವುದು ಸಹಾ ಆಗಾಗ ನಡೆಯುತ್ತಲೇ ಇರುತ್ತದೆ. ಸುಮ ಇರುವವರೆಗೆ ಬೇರೆ ಅವರಿಗೆ ಅವಕಾಶ ದಕ್ಕುವುದಿಲ್ಲ ಎಂದು ಸಹಾ ಆ ರೋ ಪ ಮಾಡಕಾಗಿದೆ.

ಆದರೆ ಇದೇ ವೇಳೆ ಸುಮ ಅಭಿಮಾನಿಗಳು ಮಾತ್ರ, ಮಾತೃಭಾಷೆಯಲ್ಲದ ಭಾಷೆ ಕಲಿತು, ಅದರ ಮೇಲೆ ಹಿಡಿತ ಸಾಧಿಸಿ, ಜನ ಮೆಚ್ಚುಗೆ ಪಡೆದಿರುವುದರಿಂದಲೇ ಅವರು ಇಷ್ಟೊಂದು ಬೇಡಿಕೆ ಪಡೆದಿದ್ದಾರೆ. ಇತ್ತೀಷಿನ ನಿರೂಪಕಿಯರು ದೇಹ ಪ್ರದರ್ಶನ ಮಾಡುತ್ತಾರೆಯೇ ಹೊರತು ಸರಿಯಾಗಿ ಭಾಷೆಯನ್ನು ಬಳಸೋಕು ಬರಲ್ಲ ಎಂದು ಸುಮ ಪರವಾಗಿ ಮಾತನಾಡುತ್ತಾರೆ.

ಹೀಗೆ ಅಪಾರ ಅಭಿಮಾನವನ್ನು ಪಡೆದುಕೊಂಡಿರುವ, ಬಹು ಬೇಡಿಕೆಯ ನಿರೂಪಕಿ ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮವೊಂದರ ನಿರೂಪಣೆಗೆ ಪಡೆಯುವ ಸಂಭಾವನೆ ಎಷ್ಟು ಎನ್ನುವ ವಿಚಾರ ಈಗ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಸುಮ ಸಂಭಾವನೆ ಕೇಳಿದರೆ ಖಂಡಿತ ಎಲ್ಲರಿಗೂ ಅಚ್ಚರಿಯನ್ನು ಮೂಡಿಸುತ್ತಿದೆ. ಹಾಗಾದರೆ ಸುಮ ಪಡೆಯುವ ಸಂಭಾವನೆ ಎಷ್ಟು ತಿಳಿಯೋಣ ಬನ್ನಿ.

ಸದಾ ಬ್ಯುಸಿಯಿರುವ ನಿರೂಪಕಿ ಸುಮಾ ಅವರನ್ನು ಪ್ರಿ ರಿಲೀಸ್ ಗೆ ಕರೆಸಲು ಹಲವು ದಿನಗಳ ಮೊದಲೇ ಮಾತನಾಡಬೇಕೆನ್ನಲಾಗಿದೆ. ನಿರೂಪಕಿ ಸುಮ ಒಂದು ಪ್ರಿ ರಿಲೀಸ್ ನಿರೂಪಣೆ ಮಾಡಲು ಬರೋಬ್ಬರಿ ಮೂರು ಲಕ್ಷ ರೂಪಾಯಿಗಳ ಸಂಭಾವನೆ ಪಡೆಯುತ್ತಾರೆ. ಅಲ್ಲದೇ ಕೆಲವು ವಿಶೇಷ ಸಂದರ್ಭಗಳಲ್ಲಾದರೆ ಅವರು ಐದು ಲಕ್ಷದವರೆಗೆ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.‌

Leave a Comment