ಸಿನಿಮಾ‌ನ ಕಸ ಅಂದವನ ಹೊಡೆಯೋಕೆ ಬಾಟಲ್ ಹಿಡಿದು ಹೊರಟ ಫ್ಯಾನ್: ಆದ್ರೆ ಮುಂದೆ ಆಗಿದ್ದೇ ಬೇರೆ!!

Written by Soma Shekar

Published on:

---Join Our Channel---

Balakrishna cinema : ಹೊಸ ಸಿನಿಮಾ ಬಿಡುಗಡೆ ಆದಾಗ ಥಿಯೇಟರ್ ಗಳ ಬಳಿ ಮಾದ್ಯಮಗಳವರು ಪ್ರೇಕ್ಷಕರಿಂದ ಸಿನಿಮಾ ಬಗ್ಗೆ ರಿವ್ಯೂ ಪಡೆಯಲು ಮೈಕ್ ಹಿಡಿದು ನಿಲ್ಲೋದು ಸಾಮಾನ್ಯ. ಆದರೆ ಹಾಗೆ ರಿವ್ಯೂ ನೀಡುವಾಗ ನಡೆದಂತಹ ಒಂದು ವಿಚಿತ್ರ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೌದು, ತೆಲುಗಿನಲ್ಲಿ ಹಿರಿಯ ನಟ ನಂದಮೂರಿ ಬಾಲಕೃಷ್ಣ(Nandamuri Balakrishna) ಅವರು ನಾಯಕನಾಗಿ, ಕನ್ನಡದ ದುನಿಯಾ ವಿಜಯ್(Duniya Vijay) ಅವರು ವಿಲನ್ ಆಗಿ ನಟಿಸಿರುವ, ಗೋಪಿಚಂದ್ ಮಲಿನೇನಿ ನಿರ್ದೇಶನದ ಸಿನಿಮಾ ವೀರ ಸಿಂಹಾ ರೆಡ್ಡಿ(Veera Simha Reddy) ತೆರೆಗೆ ಬಂದಿದ್ದು, ಬಾಲಕೃಷ್ಣ ಅವರ ಫ್ಯಾನ್ಸ್ ಗೆ ಸಿನಿಮಾ ಸಿಕ್ಕಾಪಟ್ಟೆ ಇಷ್ಟವಾಗಿದೆ.‌

ಸಿನಿಮಾ‌ ಬಿಡುಗಡೆಯ ಬೆನ್ನಲ್ಲೇ ಹೈದರಾಬಾದ್ ನ (Hyderabad) ಸಿನಿಮಾ ಥಿಯೇಟರ್ ನಲ್ಲಿ ನಡೆದ ವಿಚಿತ್ರ ಘಟನೆಯೊಂದು ಸಖತ್ ಸುದ್ದಿಯಾಗಿದೆ. ಬೆನಿ ಫಿಟ್ ಶೋ ನ ಫಸ್ಟ್ ಹಾಫ್ ನೋಡಿ ಬಂದ ಅಭಿಮಾನಿ(Balakrishna Fan) ಒಬ್ಬನು ಸಿನಿಮಾ ಬಗ್ಗೆ ಖುಷಿಯಿಂದ ಯೂಟ್ಯೂಬ್ ಚಾನೆಲ್ ಒಂದಕ್ಕೆ ರಿವ್ಯೂ ನೀಡಲು ತೊಡಗಿದ್ದ. ಸಿನಿಮಾ ನ ಭೂತೋ, ನ‌ ಭವಿಷ್ಯತ್ ಎನ್ನುವ ಹಾಗಿದೆ ಎನ್ನುವ ರೇಂಜ್ ನಲ್ಲಿ ಆತ ರಿವ್ಯೂ ಹೇಳುತ್ತಿರುವಾಗಲೇ ಮತ್ತೊಬ್ಬ ಪ್ರೇಕ್ಷಕ ಬಾಲಯ್ಯನ ಅಭಿಮಾನಿಗೆ ಸಿಕ್ಕಾಪಟ್ಟೆ ಕೋಪ ಬರುವಂತೆ ಮಾಡಿದ್ದಾನೆ.

ಹೌದು, ಅಭಿಮಾನಿ ಸಿನಿಮಾ‌ ಬಗ್ಗೆ ಹಾಡಿ ಹೊಗಳುವಾಗಲೇ ಅಲ್ಲಿ ಗೆ ಬಂದ ಬೇರೊಬ್ಬ ವ್ಯಕ್ತಿ, ಸಿನಿಮಾ ಕಸ ಇದ್ದ ಹಾಗೆ ಇದೆ, ಫಸ್ಟ್ ಹಾಫ್ ಕಸ ಎಂದಿದ್ದಾನೆ. ಅದಕ್ಕೆ ಅಭಿಮಾನಿ ಕೋಪದಿಂ‌ದ ಆತನ ಕಡೆಗೆ ನೋಡಿದ್ದು, ಆ ವ್ಯಕ್ತಿ ಏನ್ ಆ ಲುಕ್ ಎಂದು ಕೆಟ್ಟ ಮಾತು ಬೈದು ಹೇಳಿ ಥಿಯೇಟರ್ ಒಳಗೆ ಹೋಗಿದ್ದಾನೆ. ಆದರೆ ಕೋಪಗೊಂಡಿದ್ದ ಫ್ಯಾನ್, ಒಂದು ಕೂಲ್ ಡ್ರಿಂಕ್ ಬಾಟಲ್ ತೆಗೆದುಕೊಂಡು, ಬಂದೆ ಇರಿ ಎಂದು ಸಿನಿಮಾ ಬಗ್ಗೆ‌ ಕೆಟ್ಟದಾಗಿ ಮಾತನಾಡಿದ ವ್ಯಕ್ತಿಯನ್ನು ಬಾಟಲ್ ನಿಂದ ಹೊ ಡೆಯುವಂತೆ‌ ಥಿಯೇಟರ್ ಒಳಗೆ ಹೋಗಿದ್ದು, ಈ ದೃಶ್ಯದ ವೀಡಿಯೋ ಈಗ ವೈರಲ್ ಆಗಿದೆ.

ವರದಿಗಳ ಪ್ರಕಾರ ಅನಂತರ ನಡೆದಿದ್ದು ಮಾತ್ರ ವಿಚಿತ್ರ ಎನಿಸಿದೆ. ಅಷ್ಟು ಕೋಪದಿಂದ ಬಾಟಲ್ ಹಿಡಿದು ಹೋದ ವ್ಯಕ್ತಿ, ನೇರವಾಗಿ ತನ್ನ ಸೀಟ್ ನಲ್ಲಿ ಹೋಗಿ ಕುಳಿತು ಕೂಲ್ ಡ್ರಿಂಕ್ ಕುಡಿದು ಸಿನಿಮಾ ನೋಡಿದ ಎನ್ನಲಾಗಿದೆ. ಆದರೆ ಆತ ಹೊರಗೆ ಮಾತನಾಡಿದ ರೀತಿ, ಬಾಟಲ್ ಹಿಡಿದು ಹೋದ ಸ್ಟೈಲ್ ನೋಡಿ ಬಹುಶಃ ದೊಡ್ಡ ಗಲಾಟೆಯೇ ನಡೆದಿರಬಹುದೆಂದು ನೆಟ್ಟಿಗರು ಊಹಿಸಿದ್ದರು. ಆದರೆ ಅಂತಹುದೇನೂ ನಡೆದಿಲ್ಲ ಎನ್ನುವುದು ಸಮಾಧಾನವನ್ನು ನೀಡುವ ವಿಷಯವಾಗಿದೆ.‌

Leave a Comment