ಸಿನಿಮಾಗಳ ಸೋಲು, ಸ್ಟಾರ್ ನಟನ ಸಿನಿಮಾದಲ್ಲಿ ರಶ್ಮಿಕಾ, ಆದ್ರೆ ನಾಯಕಿಯಾಗಿ ಅಲ್ಲ: ಶಾಕ್ ಆದ ಫ್ಯಾನ್ಸ್

Written by Soma Shekar

Published on:

---Join Our Channel---

ಸ್ಯಾಂಡಲ್ವುಡ್ ಬ್ಯೂಟಿ ರಶ್ಮಿಕಾ ಮಂದಣ್ಣ ಸೌತ್ ಸಿನಿಮಾ ಮಾತ್ರವೇ ಅಲ್ಲದೇ ಬಾಲಿವುಡ್ ನಲ್ಲಿ ಮಿಂಚುತ್ತಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಆದರೆ ಕಳೆದ ಕೆಲವು ದಿನಗಳಿಂದಲೂ ಸಹಾ ನಟಿಯು ಸಿನಿಮಾ ವಿಚಾರವಲ್ಲದೇ ಮೈ ಮೇಲೆ ಎಳೆದುಕೊಂಡಿರುವ ಒಂದು ವಿ ವಾ ದದ ಕಾರಣದಿಂದ ಸುದ್ದಿಯಾಗುತ್ತಿದ್ದಾರೆ ಹಾಗೂ ಕರ್ನಾಟಕದ ಸಿನಿ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈಗ ಇವೆಲ್ಲವುಗಳ ಬೆನ್ನಲ್ಲೇ ರಶ್ಮಿಕಾ ಸುಪ್ರಸಿದ್ಧ ಆಭರಣ ಬ್ರಾಂಡ್ ತನ್ನ ರಾಯಭಾರಿ ಸ್ಥಾನದಿಂದ ರಶ್ಮಿಕಾನ ಕೈ ಬಿಟ್ಟು ಬೇರೆ ನಟಿಯನ್ನು ಕರೆ ತಂದಿರುವ ವಿಚಾರವು ಸಹಾ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈಗ ರಶ್ಮಿಕಾ ವಿಚಾರವಾಗಿ ಮತ್ತೊಂದು ಹೊಸ ಸುದ್ದಿ ಹರಿದಾಡಿದೆ.‌ ನಟಿ ರಶ್ಮಿಕಾ ಬಾಲಿವುಡ್ ಗೆ ಸಿದ್ಧಾರ್ಥ್ ಮಲ್ಹೋತ್ರ ನಾಯಕನಾಗಿರುವ ಮಿಷನ್ ಮಜ್ನು ಸಿನಿಮಾ ಮೂಲಕ ಎಂಟ್ರಿ ನೀಡಿದ್ದರು. ಆದರೆ ಅದಕ್ಕೂ ಮೊದಲು ರಶ್ಮಿಕಾ ಹಿರಿಯ ನಟ ಅಮಿತಾಬ್ ಬಚ್ಚನ್ ಜೊತೆ ನಟಿಸಿದ್ದ ಗುಡ್ ಬೈ ಸಿನಿಮಾ ಮೊದಲು ಬಿಡುಗಡೆ ಕಂಡಿತು. ಆದರೆ ರಶ್ಮಿಕಾ ಅದೃಷ್ಟ ಕೈಕೊಟ್ಟಂತೆ ಗುಡ್ ಬೈ ಸಿನಿಮಾ ಹೀನಾಯ ಸೋಲನ್ನು ಕಂಡಿತು. ಇನ್ನು ರಶ್ಮಿಕಾ ನಾಯಕಿಯಾಗಿರುವ ಮಿಷನ್ ಮಜ್ನು ಸಿನಿಮಾ ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ ಎನ್ನುವುದು ಸಹಾ ಅಧಿಕೃತವಾಗಿದೆ. ಮಿಷನ್ ಮಜ್ನು ಯಶಸ್ಸು ಈಗ ರಶ್ಮಿಕಾಗೆ ಬಹಳ ಮುಖ್ಯ ಎನಿಸಿದೆ.

ಬಾಲಿವುಡ್ ನಲ್ಲಿ ಬಿಡುಗಡೆ ಆದ ಮೊದಲ ಸಿನಿಮಾ ಸೋತಿದೆ. ಇನ್ನು ಇತ್ತೀಚಿಗೆ ಟಾಲಿವುಡ್ ನಲ್ಲಿ ಸಹಾ ನಟಿಯ ಆಡವಾಳ್ಳು ಮೀಕು ಜೋಹಾರ್ಲು ಸಿನಿಮಾ ನೆಲ ಕಚ್ಚಿದೆ. ತೆಲುಗಿನಲ್ಲಿ ಸದ್ಯಕ್ಕೆ ರಶ್ಮಿಕಾ ಕೈಯಲ್ಲಿ ಪುಷ್ಪ 2 ಸಿನಿಮಾ ಮಾತ್ರ ಇದೆ. ತಮಿಳಿನಲ್ಲಿ ವಾರಿಸು ಸಿನಿಮಾದಲ್ಲಿ ನಟಿ ನಾಯಕಿಯಾಗಿದ್ದು ಅದು ಬಿಡುಗಡೆ ಆಗಬೇಕಿದೆ. ಅದು ಬಿಟ್ಟರೆ ನಟಿಯ ದಕ್ಷಿಣದಲ್ಲಿ ಯಾವುದೇ ಹೊಸ ಸಿನಿಮಾ ಮಾಡುತ್ತಿರುವ ಬಗ್ಗೆ ಸುದ್ದಿಯಿಲ್ಲ. ಈಗ ಬಂದಿರುವ ಹೊಸ ಅಪ್ಡೇಟ್ ಒಂದರ ಪ್ರಕಾರ ನಟಿಯು ಹೊಸ ಸಿನಿಮಾ ಒಪ್ಪಿದ್ದಾರೆ ಆದರೆ ನಾಯಕಿಯಾಗಿ ಅಲ್ಲ ಎನ್ನಲಾಗಿದೆ.

ಟಾಲಿವುಡ್ ನ ಸ್ಟಾರ್ ನಟ ಮಹೇಶ್ ಬಾಬು ಪ್ರಸ್ತುತ ತ್ರಿವಿಕ್ರಮ್ ನಿರ್ದೇಶನದ, ಪೂಜಾ ಹೆಗ್ಡೆ ಮತ್ತು ಶ್ರೀಲೀಲಾ ನಾಯಕಿಯಾಗಿರುವ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದು, ಈ ಸಿನಿಮಾದಲ್ಲಿ ಒಂದು ಐಟಂ ಹಾಡಿಗೆ ರಶ್ಮಿಕಾ ಹೆಜ್ಜೆ ಹಾಕಲು ಒಪ್ಪಿಗೆ ನೀಡಿದ್ದಾರೆ. ಟಾಲಿವುಡ್ ನಲ್ಲಿ ಸ್ಟಾರ್ ನಟಿ ಆಗಿರುವ ರಶ್ಮಿಕಾ ಇದೀಗ ಐಟಂ ಸಾಂಗ್ ನಲ್ಲಿ ಸೊಂಟ ಬಳುಕಿಸಲು ಸಜ್ಜಾಗಿರುವುದನ್ನು ನೋಡಿ ಸಿನಿ ಪ್ರಿಯರು ಅಚ್ಚರಿ ಪಡುತ್ತಿದ್ದಾರೆ. ರಶ್ಮಿಕಾಗೆ ಹೊಸ ಆಫರ್ ಗಳು ಬರುತ್ತಿಲ್ಲವೇ, ನಟಿಯ ಸ್ಟಾರ್ ವ್ಯಾಲ್ಯೂ ಕಡಿಮೆಯಾಯಿತೇ? ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ.

Leave a Comment