ಸಾಲು ಸಾಲು ಸಿನಿಮಾ ಸೋತರೂ ಕುಗ್ಗದ ಬೇಡಿಕೆ: ಬಾಲಿವುಡ್ ನ ಸ್ಟಾರ್ ಕಿಡ್ ಅನನ್ಯಾ ಸಖತ್ ಮಿಂಚಿಂಗ್

Written by Soma Shekar

Published on:

---Join Our Channel---

ಬಾಲಿವುಡ್ ನಲ್ಲಿ ಕೆಲವು ಸ್ಟಾರ್ ಕಿಡ್ ಗಳಿಗೆ ಸಿನಿಮಾಗಳು ಸೋತರೂ ಸಹಾ ಒಂದರ ನಂತರ ಮತ್ತೊಂದು ಎನ್ನುವಂತೆ ಅವಕಾಶಗಳು ಅರಸಿ ಬರುತ್ತಲೇ ಇರುತ್ತವೆ. ಅದೇ ಗಾಡ್ ಫಾದರ್ ಗಳ ನೆರವಿಲ್ಲದೇ ಬಂದವರು ಸೂಪರ್ ಹಿಟ್ ಸಿನಿಮಾ ನೀಡಿದರೂ ಸಹಾ ಹೊಸ ಅವಕಾಶಗಳು ಸಿಗುವುದು ಕಡಿಮೆ ಎಂದೇ ಹೇಳಬಹುದು. ಇನ್ನು ಸ್ಟಾರ್ ಕಿಡ್ ಗಳು ತಮ್ಮ ಸಾಲು ಸಾಲು ಸಿನಿಮಾಗಳು ಮೂಲೆ ಗುಂಪು ಸೇರಿದರೂ ಸಹಾ ತಲೆ ಕೆಡಿಸಿಕೊಳ್ಳದೇ ಬಿಂದಾಸ್ ಆಗಿ ಫೋಟೋ ಶೂಟ್ ಗಳು, ವಿದೇಶ ಪ್ರವಾಸಗಳು ಎಂದು ಖುಷಿಯಿಂದ ಇರುವುದು ಒಂದು ಕಡೆಯಾದರೆ, ಇವರನ್ನು ಅಭಿಮಾನಿಸುವ ದೊಡ್ಡ ಅಭಿಮಾನಿಗಳ ಬಳಗ ಕೂಡಾ ಸದಾ ಇವರನ್ನು ಮೆಚ್ಚುವಲ್ಲಿ ಮುಂದಾಗಿದ್ದಾರೆ.

ಹೀಗೆ ಸಾಲು ಸಾಲು ಸಿನಿಮಾಗಳ ಸೋಲು ಕಂಡರೂ, ವೃತ್ತಿ ಜೀವನದಲ್ಲಿ ಯಾವುದೇ ತೃಪ್ತಿಕರ ಎನಿಸುವ ಯಶಸ್ಸು ಪಡೆಯದೇ ಹೋದರೂ ಸಹಾ ಬಾಲಿವುಡ್ ನಟಿ ಅನನ್ಯ ಪಾಂಡೆ ಆಗಾಗ ತಮ್ಮ ಹಾಟ್ ಅಂಡ್ ಬೋಲ್ಡ್ ಫೋಟೋ ಶೂಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ. ನಟಿ ಅನನ್ಯಾ ಪಾಂಡೆ ಸಿನಿಮಾ ರಂಗಕ್ಕೆ ಎಂಟ್ರಿ ನೀಡಿ ಮೂರು ವರ್ಷಗಳಾಗಿದೆ. ಈ ಮೂರು ವರ್ಷಗಳಲ್ಲಿ ನಟಿ ಯಾವುದೇ ದೊಡ್ಡ ಸಕ್ಸಸ್ ಪಡೆದಿಲ್ಲ. ಹೇಳಿಕೊಳ್ಳುವಂತ ಹಿಟ್ ಸಿನಿಮಾ ಯಾವುದೂ ಮಾಡಿಲ್ಲ. ಮೂರು ವರ್ಷಗಳಲ್ಲಿ ನಟಿ ಐದು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಐದು ಸಿನಿಮಾಗಳಲ್ಲಿ ಯಾವುದೂ ಸಹಾ ಸೂಪರ್ ಹಿಟ್ ಎನಿಸಿಲ್ಲ. ಆದರೂ ನಟಿಗೆ ಬಾಲಿವುಡ್ ನಲ್ಲಿ ಬೇಡಿಕೆ ಕುಗ್ಗಿದೆ ಎನ್ನುವ ಹಾಗಿಲ್ಲ. ಇನ್ನು ಇತ್ತೀಚಿಗೆ ಅನನ್ಯ ಪಾಂಡೆ ವಿಜಯ ದೇವರಕೊಂಡ ಜೊತೆಗೆ ಪ್ಯಾನ್ ಇಂಡಿಯಾ ಸಿನಿಮಾ ಲೈಗರ್ ನಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಆದರೆ ಸಿನಿಮಾ ಹೀನಾಯ ಸೋಲು ಕಂಡಿತ್ತು. ಆ ವೇಳೆ ನಟಿ ವಿದೇಶದಲ್ಲಿ ಪ್ರವಾಸ್ ಮಾಡುತ್ತಾ ಚಿಲ್ ಮೂಡ್ ನಲ್ಲಿದ್ದರು. ಇನ್ನು ಲೈಗರ್ ಸೋಲಿನ ನಂತರ ನಟಿಯನ್ನು ಭರ್ಜರಿ ಟ್ರೋಲ್ ಸಹಾ ಮಾಡಲಾಗಿತ್ತು. ದಕ್ಷಿಣದ ಕೆಲವು ನಿರ್ಮಾಪಕರು ತಮ್ಮ ಸಿನಿಮಾಗಳಿಗೆ ಅನನ್ಯ ಬೇಡ ಎಂದು ನಿರ್ಧರಿಸಿದರು.

ಇನ್ನು ಈಗ ನಟಿ ಅನನ್ಯ ಪಾಂಡೆ ಮತ್ತೆ ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಹೊಸ ಫೋಟೊ ಶೂಟ್ ನ ಅಂದವಾದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಅವು ಭರ್ಜರಿಯಾಗಿ ವೈರಲ್ ಆಗಿದೆ. ಅಭಿಮಾನಿಗಳು ನಟಿಯ ಹೊಸ ಫೋಟೋಗಳಿಗೆ ಮೆಚ್ಚುಗೆಯನ್ನು ನೀಡುತ್ತಿದ್ದಾರೆ. ಅಲ್ಲದೇ ನೆಟ್ಟಿಗರು ನಟಿಯ ಫಿಟ್ನೆಸ್ ಗೆ ಫಿದಾ ಆಗಿದ್ದು ಕಾಮೆಂಟ್ ಗಳ ಮೂಲಕ ನಟಿಯ ಅಂದ ಹಾಗೂ ಫಿಟ್ನೆಸ್ ಅನ್ನು ಹಾಡಿ ಹೊಗಳುತ್ತಿದ್ದಾರೆ.‌ ಪ್ರಸ್ತುತ ಅನನ್ಯ ಪಾಂಡೆ ಡ್ರೀಮ್ ಗರ್ಲ್ 2 ಮತ್ತು ಖೋ ಗಯೆ ಹಮ್ ಕಹಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

Leave a Comment