ಸಾನ್ಯಾ ಆಟಕ್ಕೆ ಬ್ರೇಕ್ ಹಾಕಿದ ಪ್ರೇಕ್ಷಕರು: ಬಿಗ್ ಬಾಸ್ ಮನೆಯಿಂದ ಸಾನ್ಯ ಔಟ್, ಕೈ ಹಿಡಿಯದ ಪ್ರೇಕ್ಷಕರು

Written by Soma Shekar

Updated on:

---Join Our Channel---

ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ ಒಂಬತ್ತರಲ್ಲಿ ನವೀನರು ಮತ್ತು ಪ್ರವೀಣರು ಎನ್ನುವವಿಶೇಷ ಕಾನ್ಸೆಪ್ಟ್ ಒಂದನ್ನು ಪರಿಚಯಿಸಲಾಗಿದೆ. ಅದರ ಭಾಗವಾಗಿಯೇ ಓಟಿಟಿ ಬಿಗ್ ಬಾಸ್ ನಿಂದ ನಾಲ್ಕು ಜನ ಸ್ಪರ್ಧಿಗಳು ಆಯ್ಕೆಯಾಗಿ ಟಿವಿ ಬಿಗ್ ಬಾಸ್ ಗೆ ಎಂಟ್ರಿ ಯನ್ನು ನೀಡಿದ್ದಾರೆ. ಹೀಗೆ ಓಟಿಟಿಯಿಂದ ತನ್ನ ಮೋಡಿಯನ್ನು ಮಾಡುತ್ತಾ ಟಿವಿ ಬಿಗ್ ಬಾಸ್ ಗೆ ಎಂಟ್ರಿಯನ್ನು ನೀಡಿದವರು ಸಾನ್ಯಾ ಅಯ್ಯರ್. ‌ಟಿವಿ ಬಿಗ್ ಬಾಸ್ ನಲ್ಲಿ ಸಹಾ ಸಾನ್ಯಾ ಅಯ್ಯರ್ ತಮ್ಮದೇ ರೀತಿಯ ಆಟದಿಂದ, ಮಾತಿನಿಂದ, ರೂಪೇಶ್ ಶೆಟ್ಟಿ ಜೊತೆಗಿನ ಸ್ನೇಹ ಮತ್ತು ಒಡನಾಟದಿಂದ ಸಖತ್ ಸದ್ದು ಮಾಡಿದ್ದರು. ಮನೆಯಲ್ಲಿರುವ ಖಡಕ್ ಸ್ಪರ್ಧಿಗಳಲ್ಲಿ ಸಾನ್ಯ ಅಯ್ಯರ್ ಸಹಾ ಒಬ್ಬರು ಎನ್ನುವುದರಲ್ಲಿ ಎರಡು ಮಾತಿರಲಿಲ್ಲ.

ಹೀಗೆ ಓಟಿಟಿ ಇಂದ ಆರಂಭವಾಗಿ ಟಿವಿ ವರೆಗೂ ಬಂದಿದ್ದ ಸಾನ್ಯ ಅಯ್ಯರ್ ಅವರ ಬಿಗ್ ಬಾಸ್ ಜರ್ನಿ ಇದೀಗ ಟಿವಿ ಬಿಗ್ ಬಾಸ್ ನಲ್ಲಿ ಆರನೇ ವಾರಾಂತ್ಯಕ್ಕೆ ಕೊನೆಯಾಗಿದೆ. ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿದ್ದ ಸೀರಿಯಲ್ ಮೂಲಕ ಪುಟ್ಟ ಗೌರಿಯಾಗಿ ಮನೆ ಮಾತಾಗಿದ್ದ ಸಾನ್ಯ ಅಯ್ಯರ್ ಅವರು ಓಟಿಟಿ ಮತ್ತು ಟಿವಿ ಬಿಗ್ ಬಾಸ್ ನಲ್ಲಿ ಸಖತ್ ಹೈಲೈಟ್ ಆಗಿದ್ದರು. ಟಾಸ್ಕ್ ವಿಚಾರವೇ ಆಗಿರಲಿ, ಮನರಂಜನೆಯ ವಿಚಾರವೇ ಆಗಿರಲಿ ಎಲ್ಲದರಲ್ಲೂ ಸಹಾ ಸಾನ್ಯ ಸೈ ಎನಿಸಿಕೊಂಡಿದ್ದರು. ಅಲ್ಲದೇ ಸಾನ್ಯ ಅವರು ಕನ್ನಡದಲ್ಲಿ ಸ್ಪಷ್ಟವಾಗಿ ಮಾತನಾಡುವುದು ಅನೇಕ ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸಿತ್ತು.

ಆದರೆ ಇದೀಗ ಆರನೇ ವಾರಾಂತ್ಯಕ್ಕೆ ಸಾನ್ಯಾ ಅವರ ಬಿಗ್ ಬಾಸ್ ಜರ್ನಿ ಮುಗಿದಿದೆ. ಟಿವಿ ಬಿಗ್ ಬಾಸ್ ನಲ್ಲಿ ಸಹಾ ಸಾನ್ಯಾ ಒಬ್ಬ ಉತ್ತಮ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು. ಅದರಲ್ಲೂ ವಿಶೇಷವಾಗಿ ಸಾನ್ಯ ಮತ್ತು ರೂಪೇಶ್ ಶೆಟ್ಟಿ ಅವರ ಸ್ನೇಹ ವಿಷಯವಾಗಿ ಹೆಚ್ಚು ಸುದ್ದಿಯಾಗಿದ್ದರು ಸಾನ್ಯಾ. ಓಟಿಟಿಯಲ್ಲಿ ಆರಂಭವಾದ ರೂಪೇಶ್ ಮತ್ತು ಸಾನ್ಯಾ ನಡುವಿನ ಸ್ನೇಹ ಬಿಗ್ ಬಾಸ್ ಮನೆಯಲ್ಲಿ ಇನ್ನಷ್ಟು ಗಟ್ಟಿಯಾಗಿತ್ತು. ಆದರೆ ಈಗ ಸಾನ್ಯಾ ಎಲಿಮಿನೇಟ್ ಆಗಿರುವುದು ಮನೆಯ ಸದಸ್ಯರಿಗೆ, ಅದರಲ್ಲೂ ವಿಶೇಷವಾಗಿ ರೂಪೇಶ್ ಶೆಟ್ಟಿ ಅವರಿಗೆ ದೊಡ್ಡ ಶಾ ಕ್ ಒಂದನ್ನು ನೀಡಿದೆ.

Leave a Comment