ಮೊದಲ ಮಗುವಿನ ನಿರೀಕ್ಷೆಯಲ್ಲಿ ಸಲಿಂಗ ದಂಪತಿ: ಖುಷಿಯಲ್ಲಿ ಮಾಡಿಸಿದ್ರು ಹೊಸ ಫೋಟೋ ಶೂಟ್

Written by Soma Shekar

Published on:

---Join Our Channel---

2019 ರಲ್ಲಿ ವೈವಾಹಿಕ ಜೀವನಕ್ಕೆ ಅಡಿಯಿಟ್ಟಿದ್ದ ಭಾರತೀಯ ಅಮೆರಿಕನ್ ಮೂಲದ ಸಲಿಂಗ ದಂಪತಿ (Homo couple ) ಇದೀಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದು, ತಾವು ಮಗುವಿನ ನಿರೀಕ್ಷೆಯಲ್ಲಿ ಇರುವ ಸಂಭ್ರಮದ ಸಂದರ್ಭದಲ್ಲಿ ವಿಶೇಷವಾದ ಫೋಟೋ ಶೂಟ್ ಒಂದನ್ನು ಮಾಡಿಸಿದ್ದು, ಈ ಫೋಟೋ ಶೂಟ್ ನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ವೈವಿದ್ಯಮಯ ಎನಿಸುವ ಪ್ರತಿಕ್ರಿಯೆಗಳು ಹಾಗೂ ಮೆಚ್ಚುಗೆಗಳು ಸಹಾ ಹರಿದು ಬರುತ್ತಿವೆ.

ಅಮಿತ್ ಶಾ(Amit Shah) ಮತ್ತು ಆದಿತ್ಯ ಮದಿರಾಜು(Aditya Madiraju) ಹೆಸರಿನ ಇಂಡೋ ಅಮೆರಿಕನ್ ಸಲಿಂಗ ಪ್ರೇಮಿಗಳು 2019 ರಲ್ಲಿ ಬಹಳ ಅದ್ದೂರಿಯಾಗಿ ಮದುವೆ ಮಾಡಿಕೊಂಡು ವೈವಾಹಿಕ ಜೀವನಕ್ಕೆ ಅಡಿಯಿಟ್ಟಿದ್ದರು. ಅವರ ಮದುವೆ ವಿಚಾರ ಹೊರ ಬಂದಾಗ ಅದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡಿತ್ತು. ಫೋಟೋಗಳು ವೈರಲ್ ಆಗಿದ್ದರು.

ಈಗ ವಿವಾಹದ ನಾಲ್ಕು ವರ್ಚಗಳ ನಂತರ ಈ ಸಲಿಂಗ ದಂಪತಿ ತಮ್ಮ ಜೀವನದಲ್ಲಿ ಇನ್ನೊಂದು ಹಂತಕ್ಕೆ ಅಡಿಯಿಡಲು ಸಜ್ಜಾಗಿದ್ದಾರೆ. ಹೌದು, ಈ ಸಲಿಂಗ ದಂಪತಿ ಈಗ ತಮ್ಮ‌ ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಹಳ ಖುಷಿಯಲ್ಲಿದ್ದು, ಮೇ ತಿಂಗಳಲ್ಲಿ ಅವರ ಜೀವನಕ್ಕೆ ಮಗುವಿನ ಆಗಮನ ಆಗಲಿದೆ ಎನ್ನಲಾಗಿದೆ. ಈ ವಿಚಾರದ ಅನೇಕರಿಗೆ ಅಚ್ಚರಿ ಮೂಡಿಸಿದೆ.

ಸಲಿಂಗ ದಂಪತಿಯಾದ ಇವರಿಗೆ ಮಗು ಹೇಗೆ? ಎನ್ನುವುದು ಅನೇಕರ ಪ್ರಶ್ನೆಯಾಗಿದೆ. ಸಲಿಂಗ ದಂಪತಿಯಾದ ಅಮಿತ್ ಮತ್ತು ಆದಿತ್ಯ ಈ ಬಗ್ಗೆ ಯೋಚಿಸಿದಾಗ ಅವರಿಗೆ ಹೊಳೆದಿದ್ದು ಐವಿಎಫ್ ವಿಧಾನದ ಮೂಲಕ ಮಗುವನ್ನು ಪಡೆಯುವುದಾಗಿತ್ತು. ಅವರ ಈಗ ಅದೇ ಮಾರ್ಗದಲ್ಲಿ ಮಗುವನ್ನು ಪಡೆಯುತ್ತಿದ್ದಾರೆ ಎನ್ನುವುದು ಸತ್ಯ.

ದಾನಿಗಳ ಅಂಡಾಶಯದಿಂದ ಅವರು ಈಗ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. 2016 ರಲ್ಲಿ ಸ್ನೇಹಿತರ ಮೂಲಕ ಪರಿಚಯವಾಗಿದ್ದ ಅಮಿತ್ ಮತ್ತು ಆದಿತ್ಯ 2019 ರಲ್ಲಿ ನ್ಯೂ ಜೆರ್ಸಿಯಲ್ಲಿ ಬಹಳ ಅದ್ದೂರಿಯಾಗಿ, ಹಿಂದೂ ಸಂಪ್ರದಾಯದಂತೆ ವಿವಾಹ ಜೀವನಕ್ಕೆ ಅಡಿಯಿಟ್ಡಿದ್ದರು. ಆಗ ಅವರ ಸ್ನೇಹಿತರು, ಕುಟುಂಬದವರು ಮದುವೆಯಲ್ಲಿ ಹಾಜರಿದ್ದರು.

ಅಮಿತ್ ಮತ್ತು ಆದಿತ್ಯ ತಾವು ಪಡೆಯಲಿರುವ ಮಗುವನ್ನು ಸಲಿಂಗ ಪೋಷಕರಂತೆ ಅಲ್ಲ ಬದಲಾಗಿ ಸಾಮಾನ್ಯ ಪೋಷಕರ ಹಾಗೆ ತಮ್ಮ‌ ಮಗುವನ್ನು ಸಾಮಾನ್ಯ ಮಕ್ಕಳ ಹಾಗೆಯೇ ಬೆಳೆಸುವುದಾಗಿ ಅವರು ಹೇಳಿದ್ದಾರೆ. ಅವರ ಹೊಸ ಫೋಟೋ ಶೂಟ್ ಈಗ ಬಹಳಷ್ಟು ಜನರ ಗಮನವನ್ನು ಸೆಳೆದು ವೈರಲ್ ಆಗುತ್ತಿದೆ.

Leave a Comment