ಫಿರಾನ ಮೀನುಗಳು ಸೃಷ್ಟಿಸಿದ ತಲ್ಲಣ: ನದಿಯಲ್ಲಿ ಕಾಲಿಟ್ಟರೆ ಬದುಕಿ ಬರೋದೇ ಕಷ್ಟ, ಜನರಲ್ಲಿ ಆತಂಕ

Written by Soma Shekar

Updated on:

---Join Our Channel---

ಮೀನಿನ ಪ್ರಬೇಧಗಳಲ್ಲಿ ಸರ್ವಭಕ್ಷಕ ಎನಿಸಿರುವ ಹಾಗೂ ವಿಶ್ವದಲ್ಲಿ ಅತಿ ವಿಶಿಷ್ಟ ಆದರೆ ಅದೇ ಸಮಯದಲ್ಲಿ ಅತಿ ಅ ಪಾ ಯ ಕಾರಿ ಎನಿಸಿರುವ ಮೀನಿನ ಪ್ರಬೇಧವೆಂದರೆ ಅದು ಫಿರಾನಾ ಮೀನುಗಳು. ಈ ಮೀನುಗಳು ಮನುಷ್ಯರ ಮೇಲೆ ಸಹಾ ದಾಳಿಯಿಡುವ ಸಾಮರ್ಥ್ಯವನ್ನು ಪಡೆದುಕೊಂಡಿವೆ ಎನ್ನುವುದು ನಿಜ. ಪೆರುಗ್ವೆಯಲ್ಲಿ ಈ ಫಿರಾನಾ ಮೀನುಗಳು ತಮ್ಮ ಹಾವಳಿಯನ್ನು ಆರಂಭಿಸಿದ್ದು, ಇವು ಈಗಾಗಲೇ ನಾಲ್ಕು ಜನರನ್ನು ಬಲಿ ಪಡಿದಿವೆಯಂದೂ ಹಾಗೂ ಸುಮಾರು 20 ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿವೆಯೆಂದು ವರದಿಯಾಗಿದೆ.

ಫಿರಾನಾ ಮೀನುಗಳ ಈ ಹಾವಳಿ ಅಲ್ಲಿ ಆ ತಂ ಕ ದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ ಎನ್ನಲಾಗಿದೆ. ಇತ್ತೀಚಿಗಷ್ಟೇ 49 ವರ್ಷದ ವ್ಯಕ್ತಿಯೊಬ್ಬರು ಪೆರುಗ್ವೆಯ ನದಿಯಲ್ಲಿ ಈಜಾಡಲು ಹೋಗಿ ಮೃತರಾಗಿದ್ದರು. ಮೃತ ವ್ಯಕ್ತಿಯ ದೇಹದ ಮರಣೋತ್ತರ ಪರೀಕ್ಷೆಯ ನಂತರ ಅವರ ಸಾವು ಫಿರಾನಾ ಮೀನುಗಳ ಧಾ ಳಿ ಯಿಂದ ಉಂಟಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೇ ಆ ವ್ಯಕ್ತಿಯ ದೇಹದ ಮೇಲೆ ಈ ಮೀನುಗಳು ನಡೆಸಿದ ದಾ ಳಿಯ ಗುರುತುಗಳು ಸಹಾ ಇದೆ ಎಂದು ಹೇಳಲಾಗಿದೆ.

ಮತ್ತೊಂದು ಘಟನೆಯಲ್ಲಿ ಯುವಕನೊಬ್ಬ ನೀರಿಗೆ ಇಳಿದಾಗ ಮೀನುಗಳು ಆತನನ್ನು ಒಳಗೆ ಎಳೆದುಕೊಂಡಿದ್ದವು ಎನ್ನಲಾಗಿದೆ. ಆತನ ಪೋಷಕರು ಮಗ ಮನೆಗೆ ಬಾರದ್ದನ್ನು ಕಂಡು ಪೋಲಿಸರಿಗೆ ದೂರು ನೀಡಿದ ಮೇಲೆ ಆತನನ್ನು ಪತ್ತೆ ಹೆಚ್ಚುವ ಕಾರ್ಯ ನಡೆದಿತ್ತು. ಆದರೆ ಸಾಕಷ್ಟು ಸಮಯದ ನಂತರ ಮನೆಗೆ ಬಂದ ಯುವಕ ಮೀನಿನ ಧಾ ಳಿಯಿಂದ ತಪ್ಪಿಸಿಕೊಂಡು ಬಂದ ಘಟನೆಯನ್ನು ವಿವರಿಸಿದ್ದಾನೆ ಎನ್ನಲಾಗಿದೆ.

ಪೆರುಗ್ವೆಯ ನದಿ ತೀರದಲ್ಲಿ ಹೀಗೆ ಜನರು ನಾಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಜನರಲ್ಲಿ ಒಂದು ಭ ಯ ಹಾಗೂ ಆ ತಂ ಕ ಉಂಟಾಗಿದೆ. ನದಿಯಿಂದ ಮೀನಿನ ದಾ ಳಿ ಗೆ ತುತ್ತಾಗಿ ಸಾವನ್ನಪ್ಪಿದ ನಾಲ್ಕು ಮೃ ತ ದೇಹಗಳನ್ನು ನದಿಯಿಂದ ಹೊರಗೆ ತೆಗೆಯಲಾಗಿದೆಯೆಂದು ತಿಳಿದು ಬಂದಿದೆ. ಟೆಬ್ಯುಕರಿ ನದಿಯ ತೀರದಲ್ಲಿ ಸಹಾ ಇಂತಹುದೇ ಘಟನೆಗಳು ದಾಖಲಾಗಿತ್ತಿವೆ ಎನ್ನುವ ಸುದ್ದಿಗಳು ಕೂಡಾ ವರದಿಯಾಗಿದೆ.

Leave a Comment