ಮಾಜಿ ಮೈದುನನ ಪೋಸ್ಟ್ ಗೆ ಕ್ರೇಜಿ ಕಾಮೆಂಟ್ ಮಾಡಿ ಫ್ಯಾನ್ಸ್ ಗೆ ಶಾಕ್ ಕೊಟ್ಟ ಸಮಂತಾ: ಥ್ರಿಲ್ಲಾದ ಫ್ಯಾನ್ಸ್

Written by Soma Shekar

Published on:

---Join Our Channel---

ಪ್ರಸ್ತುತ ಟಾಲಿವುಡ್ ನ(Tollywood) ಸ್ಟಾರ್ ಹೀರೋಯಿನ್ ಸಮಂತ(Samantha) ಸೋಶಿಯಲ್ ಮೀಡಿಯಾಗಳಲ್ಲಿ ಫುಲ್ ಆ್ಯಕ್ಟೀವ್ ಆಗಿ ಇದ್ದಾರೆ. ಕಳೆದ ಕೆಲವು ಸಮಯದಿಂದ ನಟಿ ಮಯೋಸೈಟಿಸ್ ಸಮಸ್ಯೆಯಿಂದ ಬಳಲುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಅವರು ಸ್ವಲ್ಪ ಸ್ವಲ್ಪವೇ ಸುಧಾರಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ತಮ್ಮ ಬಾಲಿವುಡ್ ವೆಬ್ ಸೀರೀಸ್ (Bollywood web series) ಸಿಟಾಡಲ್(citadel) ಛತ್ರಿಕರಣದಲ್ಲಿ ಭಾಗವಹಿಸಿದ್ದಾರೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಮೋಟಿವೇಶನ್ ಕೋಟ್ಸ್ ಗಳನ್ನು ಹಂಚಿಕೊಳ್ಳುತ್ತಾ, ತಾನು ಎದುರಿಸಿದ ಸಂಕಷ್ಟದ ಪರಿಸ್ಥಿತಿಯ ಕುರಿತಾಗಿ ಪರೋಕ್ಷವಾಗಿ ತಿಳಿಸುತ್ತಿದ್ಸಾರೆ.

ಇದೀಗ ನಟಿ ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಮಾಡಿದ ಒಂದು ಕಾಮೆಂಟ್ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಇದಕ್ಕೆ ಕಾರಣ ನಟಿಯು ಅಕ್ಕಿನೇನಿ ಅಖಿಲ್(Akkineni Akhil) ಸಿನಿಮಾ ಟೀಸರ್ ನೋಡಿ ನೀಡಿದ ಪ್ರತಿಕ್ರಿಯೆಗೆ ಆಗಿದೆ. 2017ರಲ್ಲಿ ಅಕ್ಕಿನೇನಿ ನಾಗ ಚೈತನ್ಯ(Akkineni Naga Chaitanya) ಜೊತೆ ವೈವಾಹಿಕ ಜೀವನಕ್ಕೆ ಅಡೆ ಇಟ್ಟ ಸಮಂತ 2021 ರಲ್ಲಿ ವಿಚ್ಛೇದನದ ಮೂಲಕ ಪತಿಯಿಂದ ದೂರಾದರು. ಇವರಿಬ್ಬರ ನಡುವೆ ಏನಾಯ್ತು ಅನ್ನೋದು ಯಾರಿಗೂ ತಿಳಿದಿಲ್ಲ.

ಆದರೆ ಅವರಿಬ್ಬರೂ ಬೇರೆಯಾಗಿದ್ದು ಮಾತ್ರ ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿತ್ತು. ಈ ಪ್ರೇಮ ಪಕ್ಷಿಗಳು ಮತ್ತೆ ಒಂದಾಗಬೇಕೆಂದು ಅಕ್ಕಿನೇನಿ ಅಭಿಮಾನಿಗಳು ಆಶಿಸುತ್ತಲೇ ಇದ್ದಾರೆ. ಇಂದಿಗೂ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ನೀವಿಬ್ಬರೂ ಒಂದಾಗಿ ಎಂದು ಬಹಳಷ್ಟು ಜನ ಅಭಿಮಾನಿಗಳು ಕಾಮೆಂಟ್ ಮಾಡುವುದನ್ನು ಗಮನಿಸಬಹುದು.
ಈಗ ಇವೆಲ್ಲವುಗಳ ನಡುವೆ ಅಕ್ಕಿನೇನೆ ಕುಟುಂಬದ ಸದಸ್ಯನ ಕುರಿತಾಗಿ ಸಮಂತಾ ಪ್ರತಿಕ್ರಿಯೆ ನೀಡಿರುವುದು ಎಲ್ಲರ ಗಮನ ಸೆಳೆದಿದೆ.

ಅಕ್ಕಿನೇನಿ ಅಖಿಲ್(Akkineni Akhil) ನಟಿಸುತ್ತಿರುವ ಹೊಸ ಚಿತ್ರ ಏಜೆಂಟ್(Agent). ಈ ಸಿನಿಮಾವನ್ನು ಸುರೇಂದರ್ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ಸ್ಪೈ ಆಕ್ಷನ್(Spy Action) ಸಿನಿಮಾ ಆಗಿರುವ ಏಜೆಂಟ್ ಏಪ್ರಿಲ್ 28ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ. ಈಗ ಸಿನಿಮಾಕ್ಕೆ ಸಂಬಂಧಿಸಿದ ಒಂದು ಪವರ್ ಫುಲ್ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಈ ವಿಡಿಯೋವನ್ನು ನಟ ಅಖಿಲ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು ಇದನ್ನು ನೋಡಿ ಅಭಿಮಾನಿಗಳು ಬಹಳ ಖುಷಿ ಪಡುತ್ತಿದ್ದಾರೆ.

ಕಳೆದ ವರ್ಷ ಅಣ್ಣನಿಂದ ದೂರಾಗಿದ್ದರೂ, ಸಮಂತಾ ಹುಟ್ಟು ಹಬ್ಬದ ದಿನ ಅಖಿಲ್ ಶುಭಾಶಯ ತಿಳಿಸಿದ್ದರು. ಅಲ್ಲದೇ ಸಮಂತ ಅವರ ಸಿನಿಮಾಗಳ ಬಗ್ಗೆ ಕಾಮೆಂಟ್ ಮಾಡಿದ್ದರು. ಇತ್ತೀಚೆಗೆ ನಟಿ ಸಮಂತಾ ನಾಯಕಿಯಾಗಿರುವ ಶಾಕುಂತಲಂ (Shakuntalam) ಸಿನಿಮಾದ ಪೋಸ್ಟ್ ಕೂಡಾ ಅಖಿಲ್ ತಮ್ಮ instagram ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದರು. ಇದನ್ನೆಲ್ಲಾ ನೋಡಿದಾಗ ಅಕ್ಕಿನೇನಿ ಕುಟುಂಬದ ಜೊತೆಗೆ ಸಮಂತಾ ಗೆ ಇನ್ನೂ ಕೂಡ ಒಳ್ಳೆಯ ಸಂಬಂಧ ಇದೆ ಎನ್ನುವುದು ಎಲ್ಲರಿಗೂ ಕೂಡ ತಿಳಿದು ಬಂದಿದೆ.

ಈಗ ಅಖಿಲ್ ಶೇರ್ ಮಾಡಿದ ತಮ್ಮ ಸಿನಿಮಾದ ಒಂದು ವೀಡಿಯೋ ಪೋಸ್ಟ್ ಗೆ ಬಹಳ ಕ್ರೇಜಿಯಾಗಿ ಪ್ರತಿಕ್ರಿಯೆ ನೀಡಿರುವ ಸಮಂತಾ, ಬೆಸ್ಟ್ ಮೋಡ್ ಆನ್ ಎಂದು ಹೇಳುತ್ತಾ ಕಾಮೆಂಟ್ ಅನ್ನು ಮಾಡಿದ್ದಾರೆ.‌ನಟಿ ಸಮಂತ(Samantha) ನೀಡಿದ ಪ್ರತಿಕ್ರಿಯೆ ಕಂಡು ನೆಟ್ಟಿಗರು ಬಹಳ ಖುಷಿ ಪಟ್ಟು ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ನಟಿ ಸಮಂತಾ ಪ್ರಸ್ತುತ ವಿಜಯ ದೇವರಕೊಂಡ(Vijaya Devarakonda) ಜೊತೆಗೆ ಖುಷಿ ಸಿನಿಮಾದಲ್ಲಿ ನಟಸುತ್ತಿದ್ದಾರೆ ಮತ್ತು ಹಿಂದಿ ವೆಬ್ ಸಿರೀಸ್ ನಲ್ಲಿ ವರುಣ್ ಧವನ್(Varun Dhavan) ಜೊತೆಗೆ ನಟಿಸುತ್ತಿದ್ದಾರೆ.

Leave a Comment