ಸಮಂತಾ ಅನಾರೋಗ್ಯ, ಮಿಡಿಯಿತಾ ಮಾಜಿ ಪತಿಯ ಮನಸ್ಸು: ಸಮಂತಾನ ಭೇಟಿಯಾಗಲಿರುವ ನಾಗಚೈತನ್ಯ?

Written by Soma Shekar

Published on:

---Join Our Channel---

ಟಾಲಿವುಡ್ ಅಂದಗಾತಿ, ದಕ್ಷಿಣದ ಸ್ಟಾರ್ ನಟಿಯೂ ಆಗಿರುವ ಸಮಂತಾ ಆರೋಗ್ಯದ ವಿಚಾರವಾಗಿ ಈಗಾಗಲೇ ಸಾಕಷ್ಟು ಸುದ್ದಿಗಳಾಗಿವೆ. ನಟಿ ಸಮಂತಾ ಮೈಯೋಸಿಟಿಸ್ ಎನ್ನುವಂತಹ ಒಂದು ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ನಟಿಯ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿದೆ ಎನ್ನುವ ಸುದ್ದಿಗಳಾಗಿತ್ತಾದರೂ ನಟಿಯ ಕಾಯಿಲೆಯ ಕುರಿತಾಗಿ ಯಾವುದೇ ಮಾಹಿತಿ ಇರಲಿಲ್ಲ. ಆದರೆ ಇತ್ತೀಚಿಗೆ ನಟಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಆರೋಗ್ಯದ ವಿಚಾರ ಮತ್ತು ಕಾಯಿಲೆಯ ಕುರಿತಾಗಿ ಮಾಹಿತಿಯನ್ನು ಹಂಚಿಕೊಂಡಿದ್ದರು. ಅಭಿಮಾನ ನಟಿಯ ಆರೋಗ್ಯ ಸಮಸ್ಯೆ ಕುರಿತಾಗಿ ತಿಳಿದ ಅಭಿಮಾನಿಗಳು ಬೇಗ ಚೇತರಿಸಿಕೊಳ್ಳುವ ಹಾಗೆ ಶುಭ ಹಾರೈಸುತ್ತಿದ್ದಾರೆ.

ಈಗ ಇವೆಲ್ಲವುಗಳ ಬೆನ್ನಲ್ಲೇ ನಟಿ ಸಮಂತಾ ಅವರ ಆರೋಗ್ಯ ಸಮಸ್ಯೆ ವಿಚಾರ ತಿಳಿದ ನಟಿಯ ಮಾಜಿ ಪತಿ ಟಾಲಿವುಡ್ ನ ಸ್ಟಾರ್ ನಟ ನಾಗಚೈತನ್ಯ ಅವರು ತಮ್ಮ ಮಾಜಿ ಪತ್ನಿಯನ್ನು ಭೇಟಿ ಮಾಡಲಿದ್ದಾರೆ ಎನ್ನುವ ಸುದ್ದಿಯೊಂದು ಈಗ ಹರಿದಾಡುತ್ತಿದೆ. ನಾಗಚೈತನ್ಯ ಜೊತೆಗೆ ವಿಚ್ಛೇದನದ ನಂತರ ಸಮಂತಾ ಅವರನ್ನು ಸಾಕಷ್ಟು ಟೀಕೆ ಮಾಡಲಾಯಿತು. ನಟಿ ಎಲ್ಲಾ ನೋವು, ಸವಾಲುಗಳನ್ನು ಎದುರಿಸಿ, ಸಿನಿಮಾಗಳಲ್ಲಿ ಸಾಕಷ್ಟು ಬ್ಯುಸಿಯಾದರು ಮತ್ತು ಎಲ್ಲೆಲ್ಲೂ ಸಿಕ್ಕಾಪಟ್ಟೆ ಸದ್ದು ಮಾಡಿದರು. ಆದರೆ ಇವೆಲ್ಲವುಗಳ ಬೆನ್ನಲ್ಲೇ ಈಗ ನಟಿ ಮೈಯೊಸಿಟಿಸ್ ಎನ್ನುವ ಕಾಯಿಲೆಗೆ ತುತ್ತಾಗಿದ್ದಾರೆ.

ಸಮಂತಾ ತಮ್ಮ ಕಾಯಿಲೆಯ ಕುರಿತಾಗಿ ಮಾಹಿತಿಯನ್ನು ಹಂಚಿಕೊಂಡ ನಂತರ ಬಹಳಷ್ಟು ಜನ ನಟ, ನಟಿಯರು ಸಮಂತಾಗೆ ಶೀಘ್ರವಾಗಿ ಚೇತರಿಸಿಕೊಳ್ಳುವಂತೆ ಶುಭ ಹಾರೈಸಿದ್ದಾರೆ. ಅಲ್ಲದೇ ಅಕ್ಕಿನೇನಿ ಕುಟುಂಬದಿಂದ ನಟ ಅಖಿಲ್ ಸಹಾ ಸಮಂತಾ ಬೇಗ ಚೇತರಿಸಿಕೊಳ್ಳಲಿ ಎನ್ನುವ ಪೋಸ್ಟ್ ಒಂದನ್ನು ಮಾಡಿದ್ದರು. ಆದರೆ ನಾಗಚೈತನ್ಯ ಮಾತ್ರ ಯಾವುದೇ ರೀತಿಯಲ್ಲಿ ಸಹಾ ಪ್ರತಿಕ್ರಿಯೆ ನೀಡಿರಲಿಲ್ಲ. ಇದು ಸಹಾ ಅನೇಕರಲ್ಲಿ ಪ್ರಶ್ನೆಯೊಂದನ್ನು ಹುಟ್ಟು ಹಾಕಿತ್ತು‌. ನಾಗಚೈತನ್ಯ ಅವರೇಕೆ ಯಾವ ಪ್ರತಿಕ್ರಿಯೆ ನೀಡಿಲ್ಲ ? ಎಂದು ಅನೇಕರು ಪ್ರಶ್ನೆ ಮಾಡಿದ್ದರು.

ಆದರೆ ಈಗ ಇವೆಲ್ಲವುಗಳ ನಡುವೆ ಹೊಸ ಸುದ್ದಿಯೊಂದು ಹರಿದಾಡಿದ್ದು, ಸಮಂತಾ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ನಂತರ ನಾಗಚೈತನ್ಯ ಸಮಂತಾರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ. ಈ ಸುದ್ದಿ ಎಷ್ಟು ನಿಜ ಎನ್ನುವುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲವಾದರೂ, ಟಾಲಿವುಡ್ ಅಂಗಳದಲ್ಲಿ ಈಗ ಈ ಸುದ್ದಿ ಹಾಟ್ ಟಾಪಿಕ್ ಆಗಿ ಎಲ್ಲರ ಗಮನ ಸೆಳೆದಿದ್ದು. ಈ ಸುದ್ದಿಯ ಸತ್ಯಾಸತ್ಯತೆಯು ಏನು ಎನ್ನುವುದನ್ನು ಕಾದು ನೋಡಬೇಕಾಗಿದೆ.

Leave a Comment