ಸತ್ತ ಮಗಳ ನೆನಪಲ್ಲಿ ಈ ತಂದೆ ಮಾಡಿದ ಕೆಲಸಕ್ಕೆ ಭಾವುಕರಾದ ನೆಟ್ಟಿಗರು: ಈ ತಂದೆ ಮಾಡಿದ್ದೇನು?

Written by Soma Shekar

Published on:

---Join Our Channel---

ಹೆತ್ತವರು ತಮ್ಮ ಮಕ್ಕಳ ಮೇಲೆ ಸಾಕಷ್ಟು ಪ್ರೀತಿಯನ್ನು ಇಟ್ಟುಕೊಂಡಿರುತ್ತಾರೆ. ಅವರು ಮಕ್ಕಳಿಗಾಗಿ ತಮ್ಮ ಜೀವನವನ್ನು ಸವೆಸುತ್ತಾ, ಏನೆಲ್ಲಾ ಕಷ್ಟಗಳು ಎದುರಾದರೂ ಸಹಾ ತಮ್ಮ ಮಕ್ಕಳು ಸುಖವಾಗಿರಬೇಕು ಮತ್ತು ಅವರ ಭವಿಷ್ಯ ಉಜ್ವಲವಾಗಿ ಇರಬೇಕು ಎಂದು ಆಶಿಸುತ್ತಾರೆ. ಅದಕ್ಕಾಗಿ ಅವರು ಸಾಕಷ್ಟು ಸಂಕಷ್ಟಗಳನ್ನು ಎದುರಾದರೂ ಚಿಂತೆ ಮಾಡುವುದಿಲ್ಲ. ಆದರೆ ಇಂತಹ ತಂದೆ ತಾಯಿಯರಿಂದ ಅವರ ಮಕ್ಕಳು ಶಾಶ್ವತವಾಗಿ ದೂರವಾದರೆ ಅದು ಪೋಷಕರ ಕನಸನ್ನು ನುಚ್ಚು ನೂರು ಮಾಡುವುದು ಮಾತ್ರವೇ ಅಲ್ಲದೇ, ತಂದೆ ತಾಯಿಗೆ ಮರೆಯಲಾಗದ ನೋವನ್ನು ಉಳಿಸಿ ಹೋಗುತ್ತದೆ. ಆ ನೋವಿನಿಂದ ಅವರು ಹೊರ ಬರಲು ವರ್ಷಗಳೇ ಕಳೆದು ಹೋಗುತ್ತವೆ.

ಇಂತಹುದೇ ಒಂದು ಘಟನೆಯಲ್ಲಿ ಮಗಳ ಮೇಲೆ ಬಹಳಷ್ಟು ಪ್ರೀತಿಯನ್ನು ಇಟ್ಟುಕೊಂಡಿದ್ದ ತಂದೆಯೊಬ್ಬರಿಗೆ ವಿಧಿ ಆಡಿದ ಆಟದಲ್ಲಿ ಮಗಳನ್ನು ಶಾಶ್ವತವಾಗಿ ಕಳೆದುಕೊಂಡಿದ್ದಾರೆ. ಮಗಳನ್ನು ಕಳೆದುಕೊಂಡ ಆ ತಂದೆಗೆ ಮಗಳನ್ನು ಮರೆಯುವುದು ಅಸಾಧ್ಯವಾದ ಮಾತಾಗಿದೆ. ಅದಕ್ಕೆ ಆ ತಂದೆ ತಮ್ಮ ಮಗಳ ಮೂರ್ತಿಯನ್ನು ಸ್ಥಾಪಿಸಿ, ದೇವಸ್ಥಾನವನ್ನು ನಿರ್ಮಾಣ ಮಾಡಿ, ಪ್ರತಿದಿನವೂ ತಪ್ಪದೇ ಮಗಳ ಮೂರ್ತಿಯನ್ನು ಪೂಜೆ ಮಾಡಿಕೊಂಡು ಬರುತ್ತಿದ್ದಾರೆ. ಇಂತಹುದೊಂದು ಮನ ಮುಟ್ಟುವ ಮತ್ತು ಭಾವನಾತ್ಮಕ ಘಟನೆಯೊಂದು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ನಡೆದು ಬಂದಿದ್ದು, ಈ ವಿಷಯ ಕೇಳಿ ನೆಟ್ಟಿಗರು ಅಚ್ಚರಿ ಪಡುವ ಜೊತೆಗೆ ಮೆಚ್ಚುಗೆ ನೀಡಿದ್ದಾರೆ.

ವೆಂಕಟಾಚಲಂ ಮಂಡಲದ ಕಾಕುಟೂರಿನ ಚೆಂಚಯ್ಯ ಮತ್ತು ಲಕ್ಷ್ಮಮ್ಮ ದಂಪತಿಗೆ ಒಟ್ಟು ಐದು ಜನ ಮಕ್ಕಳು. ಅವರ ನಾಲ್ಕನೇ ಮಗಳ ಹೆಸರು ಸುಬ್ಬಲಕ್ಷ್ಮಮ್ಮ. ಈಕೆ ಹುಟ್ಟಿದ ನಂತರ ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸಿತು ಎನ್ನಲಾಗಿದ್ದು, ಅದಕ್ಕೆ ತಂದೆ ತಾಯಿ ಇಬ್ಬರಿಗೂ ಸಹಾ ಮಗಳ ಮೇಲೆ ಒಂದು ವಿಶೇಷವಾದ ಪ್ರೀತಿ ಇತ್ತು ಎನ್ನಲಾಗಿದೆ. ಮಗಳಿಗೆ ಅರಣ್ಯ ಇಲಾಖೆಯಲ್ಲಿ ಕೆಲಸ ಸಿಕ್ಕಿದಾಗ ಆ ತಂದೆ ತಾಯಿ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ ಅವರ ಈ ಸಂತೋಷ ವಿಧಿಗೆ ಇಷ್ಟ ಇರಲಿಲ್ಲ ಏನೋ ಎನ್ನುವಂತೆ ಅವರ ಜೀವನದಲ್ಲಿ ಒಂದು ಅಹಿತಕರ ಘಟನೆ ನಡೆದೇ ಹೋಗಿತ್ತು.

2011 ರಲ್ಲಿ ನಡೆದಂತಹ ಒಂದು ಭೀ ಕ ರ ರಸ್ತೆ ಅ ಫ ಘಾ ತ ವೊಂದರಲ್ಲಿ ಸುಬ್ಬಲಕ್ಷ್ಮಮ್ಮ ಇಹಲೋಕವನ್ನು ತ್ಯಜಿಸಿದಳು. ಈ ಘಟನೆಯ ನಂತರ ಅವರ ಇಡೀ ಕುಟುಂಬದಲ್ಲಿ ನೋವಿನ ಛಾಯೆ ಆವರಿಸಿತ್ತು. ಹೀಗಿರಬೇಕಾದರೆ ಒಂದು ದಿನ ಚೆಂಚಯ್ಯ ಅವರ ಕನಸಿನಲ್ಲಿ ಮಗಳು ಕಾಣಿಸಿಕೊಂಡಳಂತೆ. ಆಕೆಯ ಆಸೆಯಂತೆ ತಾನು ಮಗಳಿಗಾಗಿ ದೇವಸ್ಥಾನವನ್ನು ಕಟ್ಟಿಸಿದ್ದಾಗಿ ಹೇಳಿದ್ದಾರೆ. ಚೆಂಚಯ್ಯ ಅವರು ಪ್ರತಿದಿನ ಮಗಳ ಮೂರ್ತಿಗೆ ಪೂಜೆಯನ್ನು ತಪ್ಪದೇ ಮಾಡಿಕೊಂಡು ಬರುತ್ತಿದ್ದಾರೆ. ಅವರ ಈ ಕಾರ್ಯ ಸುದ್ದಿಯಾದ ಮೇಲೆ ಸೋಶಿಯಲ್ ಮೀಡಿಯಾಗಳಲ್ಲಿ ಮೆಚ್ಚುಗೆಗಳು ಹರಿದು ಬರುತ್ತಿವೆ.

Leave a Comment