ಶೃತಿ ಹಾಸ‌ನ್ ಮುಖಕ್ಕೆ ಏನಾಯ್ತು? ನಟಿಯ ಹೊಸ ಫೋಟೋ ನೋಡಿ ನೆಟ್ಟಿಗರು, ಫ್ಯಾನ್ಸ್ ಶಾ ಕ್

Written by Soma Shekar

Published on:

---Join Our Channel---

ದಕ್ಷಿಣ ಸಿನಿಮಾ ರಂಗದ ಸ್ಟಾರ್ ನಟಿಯರಲ್ಲಿ ಒಬ್ಬರು ಶೃತಿ ಹಾಸನ್. ಹಿರಿಯ ನಟ ಕಮಲ ಹಾಸನ್ ಅವರ ನಟನೆಯ ವಾರಸುದಾರಳಾಗಿ ಸಿನಿಮಾ ರಂಗಕ್ಕೆ ಎಂಟ್ರಿ ನೀಡಿದ ಶೃತಿ ಹಾಸನ್ ಬಹಳ ಕಡಿಮೆ ಸಮಯದಲ್ಲಿಯೇ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ನಟಿಸಿ, ಸ್ಟಾರ್ ನಟಿಯ ಪಟ್ಟವನ್ನು ಪಡೆದುಕೊಂಡರು. ಸ್ವಲ್ಪ ಸಮಯ ಸಿನಿಮಾಗಳಿಂದ ಒಂದು ಸಣ್ಣ ಬ್ರೇಕ್ ಪಡೆದಿದ್ದ ನಟಿಯು ನಂತರ ಕ್ರಾಕ್ ಸಿನಿಮಾದ ಮೂಲಕ ಮತ್ತೆ ಸಿನಿ ರಂಗಕ್ಕೆ ರೀ ಎಂಟ್ರಿ ನೀಡಿದ್ದಾರೆ. ರೀ ಎಂಟ್ರಿಯಲ್ಲಿ ಮತ್ತೊಂದು ಹಿಟ್ ಪಡೆದ ನಟಿಗೆ ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶಗಳನ್ನು ಅರಸಿ ಬರುತ್ತಿವೆ. ಪ್ರಸ್ತುತ ತೆಲುಗಿನ ಯಂಗ್ ರೆಬೆಲ್ ಸ್ಟಾರ್ ಖ್ಯಾತಿಯ ನಟ ಪ್ರಭಾಸ್ ಅವರ ಸಲಾರ್ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಇನ್ನು ಸಲಾರ್ ಮಾತ್ರವೇ ಅಲ್ಲದೇ ಶೃತಿ ಹಾಸನ್ ಅವರು ಮೆಗಾಸ್ಟಾರ್ ಚಿರಂಜೀವಿ ಅವರ ಹೊಸ ಸಿನಿಮಾ ವಾಲ್ಟೇರ್ ವೀರಯ್ಯ ಮತ್ತು ಮತ್ತೊಬ್ಬ ಹಿರಿಯ ನಟ ನಂದಮೂರಿ ಬಾಲಕೃಷ್ಣ ಅವರ ಹೊಸ ಸಿನಿಮಾ ವೀರಸಿಂಹಾರೆಡ್ಡಿ ಸಿನಿಮಾದಲ್ಲೂ ಸಹಾ ಶೃತಿ ಹಾಸನ್ ಅವರೇ ನಾಯಕಿಯಾಗಿರುವುದು ವಿಶೇಷವಾಗಿದೆ. ತೆಲುಗಿನ ದಿಗ್ಗಜ ನಾಯಕರಿಗೆ ನಾಯಕಿಯಾಗಿ ನಟಿಸುವ ಮೂಲಕ ತನ್ನ ಬೇಡಿಕೆ ಇನ್ನೂ ಕುಗ್ಗಿಲ್ಲ ಎನ್ನುವುದನ್ನು ಶೃತಿ ಹಾಸನ್ ಸಾಬೀತು ಮಾಡಿದ್ದಾರೆ. ಹೊಸ ಸಿನಿಮಾಗಳ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ನಟಿ ಇದೀಗ ತಮ್ಮ ಅಭಿಮಾನಿಗಳಿಗೆ ಶಾ ಕ್ ನೀಡಿದ್ದಾರೆ.

ಸದಾ ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿರುವ ಮೂಲಕ ನಟಿ ಶೃತಿ ಹಾಸನ್ ಅವರು ತಮ್ಮ ಅಭಿಮಾನಿಗಳೊಂದಿಗೆ ಟಚ್ ನಲ್ಲಿ ಇರುತ್ತಾರೆ. ಆದರೆ ಈಗ ನಟಿ ತಮ್ಮ ಲೇಟೆಸ್ಟ್ ಫೋಟೋ ಒಂದನ್ನು ಹಂಚಿಕೊಂಡು ಅಭಿಮಾನಿಗಳಿಗೆ ಶಾ ಕ್ ನೀಡಿದ್ದಾರೆ. ನಟಿಯು ಜ್ವರ ಮತ್ತು ಸೈನಸ್ ಸಮಸ್ಯೆಗಳಿಂದ ಬಳಲುತ್ತಿದ್ದಾರಂತೆ.‌ ಬ್ಯಾ ಡ್ ಡೇ, ಬ್ಯಾ ಡ್ ಹೇರ್ ನೊಡನೆ ನನ್ನ ಸೆಲ್ಫಿ ಹೀಗಿರುತ್ತೆ. ಇದನ್ನು ಸಹಾ ನೀವು ಸ್ವೀಕರಿಸುವಿರಿ ಮತ್ತು ಇಷ್ಟಪಡುವಿರಿ ಎಂದು ಭಾವಿಸುವಿರಿ ಎಂದು ಕೆಲವು ಫೋಟೋ ಗಳನ್ನು ನಟಿಯು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ನಟಿ ಶೇರ್ ಮಾಡಿದ ಫೋಟೋದಲ್ಲಿ ಅವರ ಮುಖ ಊದಿಕೊಂಡಿದ್ದು, ಬಳಲಿದಂತೆ ಕಾಣುತ್ತಿದೆ. ಪ್ರಸ್ತುತ ಅಂತರ್ಜಾಲದಲ್ಲಿ ಈ ಫೋಟೊ ವೈರಲ್ ಆಗುತ್ತಿದೆ. ಫೋಟೋ ನೋಡಿದ ನೆಟ್ಟಿಗರು ಶಾ ಕ್ ಆಗಿದ್ದಾರೆ. ಅಲ್ಲದೇ ಬಹಳಷ್ಟು ಜನರು ಶೃತಿ ಏನಾಯ್ತು? ಹೀಗೆ ಆಗಿದ್ದೀರಿ ಏಕೆ? ಎಂದೆಲ್ಲಾ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಶೃತಿ ಅವರು ಕಳೆದ ಎರಡು ವರ್ಷಗಳಿಂದಲೂ ಡೂಡಲ್ ಆರ್ಟಿಸ್ಟ್ ಶಂತನು ಹಜಾರಿಕಾ ಅವರೊಡನೆ ಡೇಟಿಂಗ್ ಮಾಡುತ್ತಿದ್ದು, ಶಂತನು ಜೊತೆಗೆ ಮುಂಬೈನಲ್ಲೇ ನೆಲೆಸಿದ್ದಾರೆ ಶೃತಿ ಹಾಸನ್ ಅವರು.

Leave a Comment