ಶಿವಾಜಿ ರೂಪದಲ್ಲಿ ಬಂದ್ರು ಹಿಗ್ಗಾ ಮುಗ್ಗಾ ಟ್ರೋಲಾದ ಅಕ್ಷಯ್ ಕುಮಾರ್: ಈ ಬಾರಿ ನೆಟ್ಟಿಗರು ಟ್ರೋಲ್ ಮಾಡಿದ್ದೇಕೆ?

Written by Soma Shekar

Published on:

---Join Our Channel---

ಬಾಲಿವುಡ್ ನಟ (Bollywood actor) ಅಕ್ಷಯ್ ಕುಮಾರ್ (Akshay Kumar) ಗೆ ಅದೇಕೋ ಅದೃಷ್ಟ ಸರಿಯಿಲ್ಲ. ಇತ್ತೀಚಿಗೆ ನಟನ ಯಾವ ಸಿನಿಮಾಗಳು ಸಹಾ ಯಶಸ್ಸನ್ನು ಪಡೆಯುತ್ತಿಲ್ಲ. ಸಾಲು ಸಾಲು ಸಿನಿಮಾಗಳು ಸೋಲಿನ ಹಾದಿ ಹಿಡಿಯುತ್ತಿವೆ. ಒಂದು ಕಡೆ ಸಿನಿಮಾಗಳ ಸೋಲಾದರೆ ಮತ್ತೊಂದು ಕಡೆ ನಟ ಅಕ್ಷಯ್ ಕುಮಾರ್ ಹಿಗ್ಗಾ ಮುಗ್ಗಾ ಟ್ರೋಲ್ (Akshay Kumar Troll) ಸಹಾ ಆಗುತ್ತಿದ್ದಾರೆ. ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿಸುವ ನಟ ಸೂಕ್ತವಾದ ಸಿದ್ಥತೆಗಳನ್ನು ಮಾಡಿಕೊಳ್ಳುತ್ತಿಲ್ಲವೇನೋ ಎನ್ನುವ ಪ್ರಶ್ನೆ ಸಹಾ ಮೂಡುತ್ತಿದೆ. ಇನ್ನು ಇದೀಗ ನಟ ಮರಾಠಿ ಸಿನಿಮಾ (Marathi cinema) ಇಂಡಸ್ಟ್ರಿ ಗೆ ಅಡಿಯಿಟ್ಟಿದ್ದಾರೆ.

ಕೆಲವೇ ದಿನಗಳ ಹಿಂದೆಯಷ್ಟೇ ಅಕ್ಷಯ್ ಕುಮಾರ್ (Akshay Kumar) ನಟಿಸುತ್ತಿರುವ ಮರಾಠಿ ಸಿನಿಮಾ ವೇಡಾತ್ ಮರಾಠೆ ವೀರ್ ದೌಡಲೇ ಸಾಥ್ ಸಿನಿಮಾದಲ್ಲಿ ನಟನ ಫಸ್ಟ್ ಲುಕ್ (first look) ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಛತ್ರಪತಿ ಶಿವಾಜಿ (Chatrapathi Shivaji) ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಈ ಪೋಸ್ಟರ್ ಬಿಡುಗಡೆ ಆದ ಮೇಲೆ ಮತ್ತೊಮ್ಮೆ ನಟ ಹಿಗ್ಗಾ ಮುಗ್ಗಾ ಟ್ರೋಲ್ ಆಗುತ್ತಿದ್ದಾರೆ. ನಟನ ಫಸ್ಟ್ ಲುಕ್ ಅನ್ನು ನೋಡಿದ ನೆಟ್ಟಿಗರು ಅದರಲ್ಲಿನ ತಪ್ಪುಗಳನ್ನು ತೋರಿಸುತ್ತಾ ವ್ಯಂಗ್ಯ ಮಾಡಲು ಮುಂದಾಗಿದ್ದಾರೆ.

ಛತ್ರಪತಿ ಶಿವಾಜಿ ಲುಕ್ (Shivaji look) ನಲ್ಲಿ ಬಂದ ಅಕ್ಷಯ್ ಕುಮಾರ್ ಅನ್ನು ನೋಡಿದ ನೆಟ್ಟಿಗರು ಇದನ್ನು ನೋಡಿ, ಈ ಲುಕ್ ನಲ್ಲಿ ನಮಗೆ ಹಿಂದಿನ ಮತ್ತೊಂದು ನಟ ಶರತ್ ಕೇಲ್ಕರ್ (Sharath Kelkar) ಅವರನ್ನು ನೆನಪಿಸುತ್ತಿದೆ ಎ‌ಂದಿದ್ದೂ,, ಅಕ್ಷಯ್ ಕುಮಾರ್ ಈ ಪಾತ್ರಕ್ಕೆ ಸೂಕ್ತ ಆಯ್ಕೆಯಲ್ಲ ಎಂದು ಕಾಮೆಂಟ್ ಗಳನ್ನು ಮಾಡಿದ್ದಾರೆ. ವಯಸ್ಸಾಗಿರುವ ನಟ ಅವರ ವಯಸ್ಸಿಗೆ ತಕ್ಕಂತೆ ಪಾತ್ರಗಳನ್ನು ಆಯ್ಕೆ ಮಾಡಬೇಕು, ವಿರೋಚಿತ ಪಾತ್ರಗಳ ಅಯ್ಕೆ ಮಾಡಿ ಎಡವುತ್ತಿದ್ದಾರೆ ಎಂದು ನೆಟ್ಟಿಗರು ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಇನ್ನು ನಟ ಹಂಚಿಕೊಂಡ ಸಣ್ಣ ವೀಡಿಯೋದಲ್ಲಿ ಕಂಡಿರುವ ಜೂಮರ್ (ದೀಪಗಳ ಅಲಂಕಾರಿಕ ತೂಗು ನಿರ್ಮಾಣ) ಅನ್ನು ವಿದ್ಯುತ್ ಬಲ್ಬ್ ಗಳಿಂದ ಅಲಂಕಾರ ಮಾಡಿರುವುದು ಬಹಳ ಸ್ಪಷ್ಟವಾಗಿ ಕಂಡಿದೆ. ಇದನ್ನು ನೋಡಿದ ನೆಟ್ಟಿಗರು ಶಿವಾಜಿ (Shivaji) ಕಾಲದಲ್ಲಿ ಬಲ್ಬುಗಳು ಇತ್ತಾ? ಆ ಕಾಲದಲ್ಲಿ ಬಲ್ಬ್ ಕಂಡು ಹಿಡಿದಿದ್ದು ಯಾರು? ಎಂದಿದ್ದಾರೆ. ನಟ ಸಿನಿಮಾ ಮಾಡುವಾಗ ಸ್ವಲ್ಪ ರೀಸರ್ಚ್ ಮಾಡಬೇಕಿತ್ತು ಎಂದು ಸಹಾ ವ್ಯಂಗ್ಯ ಮಾಡಿದ್ದಾರೆ. ಈ ಹಿಂದೆ ನಟ ಪೃಥ್ವಿರಾಜ್ ಚೌಹಾಣ್ ಪಾತ್ರ ಮಾಡಿದಾಗಲೂ ಸಹಾ ಹಿಗ್ಗಾ ಮುಗ್ಗ ಟ್ರೋಲ್ ಆಗಿದ್ದರು.

Leave a Comment