ಶಿಕ್ಷಣಕ್ಕೆ ವಯಸ್ಸು ಅಡ್ಡಿಯಲ್ಲ: 10 ನೇ ತರಗತಿ ಪರೀಕ್ಷೆ ಬರೆದ 58 ವರ್ಷದ MLA !!

Written by Soma Shekar

Published on:

---Join Our Channel---

ದೇಶದಲ್ಲಿ ಸರ್ವ ಶಿಕ್ಷಣ ಅಭಿಯಾನ ಆರಂಭವಾದಾಗ ಒಂದು ಘೋಷಣೆ ಬಹಳ ಜನಪ್ರಿಯವಾಗಿತ್ತು. “ಕಲಿಕೆಯೆ ವಯಸ್ಸಿನ ಮಿತಿಯಿಲ್ಲ, ಕಲಿಯಲು ಯಾವುದೇ ನಾಚಿಕೆಯ ಅಗತ್ಯವಿಲ್ಲ” ಎಂಬುದಾಗಿ ಕಲಿಕೆಯ ಕಡೆಗೆ, ಅಕ್ಷರಾಭ್ಯಾಸದ ಕಡೆಗೆ ಜನರು ಒಲವು ತೋರಿಸುವಂತೆ, ಜನರಿಗೆ ಶಿಕ್ಷಣಕ್ಕಾಗಿ ಪ್ರೇರಣೆ ನೀಡಲಾಯಿತು. ಈಗ ಈ ಘೋಷಣೆಯನ್ನು ಅಕ್ಷರಶಃ ಸತ್ಯವನ್ನಾಗಿ ಮಾಡುವ ಮೂಲಕ ಅನೇಕರಿಗೆ ಸ್ಪೂರ್ತಿ ಮತ್ತು ಪ್ರೇರಣೆಯಾಗಿದ್ದಾರೆ ಒಡಿಶಾದ ಒಬ್ಬ ಶಾಸಕರು. ಅವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಪಾರವಾದ ಮೆಚ್ಚುಗೆಗಳು ಹರಿದು ಬರುತ್ತಿವೆ.

ಒಡಿಶಾದ ಫೂಲ್ಬನಿಯ ಬಿಜು ಜನತಾ ದಳದ ಶಾಸಕರಾಗಿರುವ ಅಂಗದ್ ಕನ್ಹಾರ್ ಅವರಿಗೆ ಈಗ 58 ವರ್ಷ ವಯಸ್ಸು. 1978 ರಲ್ಲಿ ಇವರು ಕೌಟುಂಬಿಕ ಕಾರಣಗಳಿಂದಾಗಿ ತಮ್ಮ ಶಿಕ್ಷಣವನ್ನು ನಿಲ್ಲಿಸಿದ್ದರು ಅಥವಾ ಅವರು ಶಾಲಾ ಶಿಕ್ಷಣಕ್ಕೆ ವಿದಾಯ ಹೇಳ ಬೇಕಾಯಿತು. ಆದರೆ ಈಗ ಬರೋಬ್ಬರಿ ಸುಮಾರು 40 ವರ್ಷಗಳ ನಂತರ ಅವರು ಮತ್ತೊಮ್ಮೆ ಶಿಕ್ಷಣದ ಕಡೆಗೆ ತಮ್ಮ ಗಮನವನ್ನು ಹರಿಸಿದ್ದಾರೆ. ಮತ್ತೊಮ್ಮೆ ಅವರು ಹತ್ತನೇ ತರಗತಿ ಪರೀಕ್ಷೆಯನ್ನು ತೆಗೆದುಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ.

ಫೂಲ್ಬನಿಯ ಬಿಜು ಜನತಾ ದಳದ ಶಾಸಕರಾದ ಅಂಗದ್ ಕನ್ಹಾರ್ ಅವರು ಮಾದ್ಯಮಿಕ ಶಿಕ್ಷಣ ಬೋರ್ಡ್ ರಾಜ್ಯದಲ್ಲಿ ನಡೆಸುತ್ತಿರುವ ಹತ್ತನೇ ತರಗತಿ ಪರೀಕ್ಷೆಗಳ ಮೊದಲ ಪತ್ರಿಕೆಯ ಪರೀಕ್ಷೆಗೆ ಶುಕ್ರವಾರ ಹಾಜರಾಗಿದ್ದರು. ತಮ್ಮ ಮಕ್ಕಳಿಗಿಂತ ಕಿರಿಯ ವಯಸ್ಸಿನ ಮಕ್ಕಳ ಜೊತೆ ಕುಳಿತು ಅವರು ಪರೀಕ್ಷೆಯನ್ನು ಬರೆದಿದ್ದಾರೆ. ಕನ್ಹಾರ್ ಅವರು ಇಂಗ್ಲೀಷ್ ಭಾಷಾ ಪರೀಕ್ಷೆಗಾಗಿ ಎಕ್ಸಾಂ ಸೆಂಟರ್ ಗೆ ಹಾಜರಾದಾಗ ಅಲ್ಲಿದ್ದ ವಿದ್ಯಾರ್ಥಿಗಳು ಸಹಾ ಅವರನ್ನು ನೋಡಿ ಅಚ್ಚರಿ ಪಟ್ಟಿದ್ದಾರೆ.

ಕನ್ಹಾರ್ ಅವರು ಮಾದ್ಯಮಗಳ ಜೊತೆ ಮಾತನಾಡುತ್ತಾ ಇತ್ತೀಚಿಗಷ್ಟೇ ನನಗೆ 50 ಮತ್ತು ಅದಕ್ಕಿಂತ ಅಧಿಕ ವಯಸ್ಸಿನವರೂ ಪರೀಕ್ಷೆ ಬರೆಯುವ ವಿಚಾರ ತಿಳಿದು ಬಂತು. ಅದಕ್ಕೆ ನಾನು ಸಹಾ ಹತ್ತನೇ ತರಗತಿಯ ಪರೀಕ್ಷೆ ತೆಗೆದುಕೊಳ್ಳಲು ನಿರ್ಧಾರ ಮಾಡಿದೆ. ಕಲಿಕೆಗೆ ವಯಸ್ಸಿನ ಕಾರಣ ಒಡ್ಡುವ ಅವಶ್ಯಕತೆ ಖಂಡಿತ ಇಲ್ಲ ಎಂದಿದ್ದಾರೆ. ಕನ್ಹಾರ್ ಅವರ ಒಬ್ಬ ಸ್ನೇಹಿತರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿದ್ದು ಅವರು ಸಹಾ ಕನ್ಹಾರ್ ಅವರ ಜೊತೆಗೆ ಪರೀಕ್ಷೆ ಬರೆಯುತ್ತಿರುವುದು ವಿಶೇಷವಾಗಿದೆ.

Leave a Comment