ಶಾರೂಖ್ ನ ನೋಡೋಕೆ ಹೋಗಿ ಜೈಲು ಸೇರಿದ ಫ್ಯಾನ್ಸ್: ಅಡಗಿ ಕುಳಿತು ಪೋಲಿಸರ ಅತಿಥಿಗಳಾದರು!

Written by Soma Shekar

Published on:

---Join Our Channel---

Kannada News : ಸ್ಟಾರ್ ನಟರು(Star Actors) ಎಂದರೆ ಅವರ ಅಭಿಮಾನಿಗಳ ಆರಾಧ್ಯ ದೈವ. ಅಲ್ಲದೇ ತಮ್ಮ ಅಭಿಮಾನ ನಟರನ್ನು ಹೇಗಾದರೂ ಸರಿ ಒಂದು ಸಲ ನೇರವಾಗಿ ಭೇಟಿ ಮಾಡಬೇಕೆನ್ನುವುದು ಅನೇಕರ ಕನಸಾಗಿರುತ್ತದೆ. ಆದರೆ ಈ ಕನಸು ನನಸಾಗುವುದು ಮಾತ್ರ ಕಷ್ಟ ಸಾಧ್ಯ. ಆದರೆ ಇಂತಹ ಕನಸನ್ನು ನನಸು ಮಾಡಿಕೊಳ್ಳಲು ಕೆಲವರು ಯಾವುದೇ ರೀತಿಯ ರಿಸ್ಕ್ ತೆಗೆದುಕೊಳ್ಳಲು ಸಹಾ ಹಿಂಜರಿಯುವುದಿಲ್ಲ. ಅಂತಹುದೇ ಒಂದು ಘಟನೆಯೊಂದು ನಡೆದಿದ್ದು, ದೊಡ್ಡ ಸುದ್ದಿಯಾಗಿದೆ. ಏನಿದು ಸುದ್ದಿ ಅನ್ನೋದಿಕ್ಕೆ ಉತ್ತರ ಇಲ್ಲಿದೆ.

ಗುಜರಾತಿನ ತರಕಾರಿ ಮಾರಾಟಗಾರ ಸಾಹಿರ್ ಪಠಾಣ್(Sahir Pathan) ಮತ್ತು ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುವ ರಾಮ್ ಸ್ವರೂಪ್ ಖುಷ್ವಾಹ (Ram Swaroop Khushwaha) ಇವರಿಬ್ಬರೂ ಕೂಡಾ ಸ್ನೇಹಿತರಾಗಿದ್ದು, ಇಬ್ಬರೂ ಸಹಾ ಬಾಲಿವುಡ್ ನ‌ ಕಿಂಗ್ ಖಾನ್ ಶಾರೂಖ್ ಖಾನ್(Shahrukh Khan) ಅವರ ದೊಡ್ಡ ಅಭಿಮಾನಿಗಳಾಗಿದ್ದಾರೆ. ಇವರಿಬ್ಬರೂ ಪಠಾಣ್ ಸಿನಿಮಾವನ್ನು ನೋಡಿದ ನಂತರ ಶಾರೂಖ್ ಖಾನ್ ಅವರನ್ನು ಹತ್ತಿರದಿಂದ ನೋಡಬೇಕು ಎಂದು ಬಯಸಿದ್ದಾರೆ.

ಇಬ್ಬರೂ ಸ್ನೇಹಿತರು ಶಾರೂಖ್ ಖಾನ್ ಅವರನ್ನು ಭೇಟಿ ಮಾಡುವ ಉದ್ದೇಶದಿಂದ ಮುಂಬೈ ಬಾಂದ್ರಾ (Bandra, Mumbai) ತಲುಪಿದ್ದು, ಶಾರೂಖ್ ಖಾನ್ ಅವರ ಮನ್ನತ್(Mannat) ಬಂಗಲೆಯ ಬಳಿಗೆ ಬಂದಿದ್ದಾರೆ. ಆದರೆ ಅಲ್ಲಿನ ಭದ್ರತಾ ಸಿಬ್ಬಂದಿ ತಮ್ಮನ್ನು ಕಾಂಪೌಂಡ್ ಒಳಗೆ ಬಿಡುವುದಿಲ್ಲ ಎಂದು ಅರ್ಥ ಮಾಡಿಕೊಂಡು, ಹೇಗಾದರೂ ಮಾಡಿ ಒಳಗೆ ಹೋಗಬೇಕು ಎಂದು ಉಪಾಯವನ್ನು ಮಾಡಿದ್ದಾರೆ.

ಇಬ್ಬರೂ ಸಹಾ ಮನ್ನತ್ ಬಂಗಲೆಯ ಕಾಂಪೌಂಡ್ ಗೋಡೆಯ ಮೇಲೆ ಅಳವಡಿಸಲಾಗಿರುವ ಸ್ಕ್ಯಾಫೋಲ್ಡಿಂಗ್ ಅನ್ನು ದಾಟಿ ಮನೆಯೊಳಗೆ ಹೋಗಿದ್ದಾರೆ. ಅನಂತರ ಯಾರ ಕಣ್ಣಿಗೂ ಬೀಳದ ಹಾಗೆ ನಟನ ಮೇಕಪ್ ರೂಮಿನ ಒಳಗೆ ಅಡಗಿ ಕುಳಿತಿದ್ದರು ಎನ್ನಲಾಗಿದೆ. ಗುರುವಾರ ಮುಂಜಾನೆ 3 ರಿಂದ 4 ಗಂಟೆಯ ಅವಧಿಯಲ್ಲಿ ಭದ್ರತಾ ಸಿಬ್ಬಂದಿ ಇವರನ್ನು ಪತ್ತೆ ಹಚ್ಚಿ ತಮ್ಮ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಸಪ್ತಪದಿ ತುಳಿದ ನರೇಶ್ ಪವಿತ್ರಾ: ಅಕ್ರಮ ಇನ್ನು ಸಕ್ರಮ ವೀಡಿಯೋ ಶೇರ್ ಮಾಡಿ ಹರಸಿರೆಂದ ನಟ

ಅನಂತರ ಶಾರೂಖ್ ಖಾನ್ ಅವರ ಪ್ರತಿನಿಧಿಯೊಬ್ಬರು ಬಾಂದ್ರಾ ಪೋಲಿಸ್ ಠಾಣೆಯನ್ನು ಸಂಪರ್ಕಿಸಿದ್ದು, ಈ ಇಬ್ಬರನ್ನೂ ಸಹಾ ಅ ತಿ ಕ್ರ ಮ ಪ್ರವೇಶದ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಬಂಧಿಸಲಾಗಿದೆ(Police arrest SRK fans) ಎಂದು ಪೋಲಿಸ್ ಅಧಿಕಾರಿಯೊಬ್ಬರು ಮಾಹಿತಿಯನ್ನು ನೀಡಿದ್ದಾರೆ. ಈ ಬಗ್ಗೆ ನಟ ಶಾರೂಖ್ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

Leave a Comment