ನನಗೊಮ್ಮೆ ಅದನ್ನ ಮುಟ್ಟಲು ಅವಕಾಶ ಕೊಡಿ: ರಾಮ್ ಚರಣ್ ಮುಂದೆ ಶಾರೂಖ್ ಖಾನ್ ಇಟ್ಟ ಬೇಡಿಕೆ

Written by Soma Shekar

Published on:

---Join Our Channel---

ಮೆಗಾ ಪವರ್ ಸ್ಟಾರ್ ರಾಮ್ ಚರಣ್(Ram Charan) ಮತ್ತು ಯಂಗ್ ಟೈಗರ್ ಜೂನಿಯರ್ ಎನ್ ಟಿ ಆರ್(Jr NTR ) ಜೊತೆಯಾಗಿ ನಟಿಸಿ, ಸ್ಟಾರ್ ನಿರ್ದೇಶಕ ರಾಜಮೌಳಿ(Raja Mouli) ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾ ತ್ರಿಬಲ್ ಆರ್(RRR). ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆದ ಸಿನಿಮಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಯನ್ನು ಪಡೆದುಕೊಂಡಿದೆ. ಹಾಲಿವುಡ್ ನ ದಿಗ್ಗಜರ ಮೆಚ್ಚುಗೆಯನ್ನು ಪಡೆದುಕೊಂಡ ತ್ರಿಬಲ್ ಆರ್ ಈಗಾಗಲೇ ಸಾಕಷ್ಟು ಪ್ರಶಸ್ತಿಗನ್ನು ಮುಡಿಗೇರಿಸಿಕೊಂಡು ಬೀಗುತ್ತಿದೆ.‌ ಅದ್ಭುತ ದೃಶ್ಯ ಕಾವ್ಯವಾಗಿ ತ್ರಿಬಲ್ ಆರ್ ಈಗ ಆಸ್ಕರ್ (Oscar) ರೇಸ್ ನಲ್ಲಿ ಸ್ಥಾನವನ್ನು ಪಡೆದುಕೊಂಡಿದೆ.

ಅಲ್ಲದೇ ಈಗಾಗಲೇ ಸಿನಿಮಾದ ನಾಟು ನಾಟು ಹಾಡಿಗೆ ಬೆಸ್ಟ್ ಒರಿಜಿನಲ್ ಸಾಂಗ್(Original song category) ವಿಭಾಗದಲ್ಲಿ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್(Golden Globe) ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಆಸ್ಕರ್ ರೇಸ್(Oscar Race) ನಲ್ಲಿರುವ ತ್ರಿಬಲ್ ಆರ್ ಪ್ರಮೋಷನ್ ಗಾಗಿ ಈಗಾಗಲೇ ನಿರ್ದಶಕ ರಾಜಮೌಳಿ, ನಟರಾದ ಎನ್ ಟಿ ಆರ್ ಮತ್ತು ರಾಮ್ ಚರಣ್ ಹೋಮ್ ಆಫ್ ಹಾಲಿವುಡ್ ನಲ್ಲಿ ಬೀಡು ಬಿಟ್ಟಿದ್ದು, ಅಲ್ಲಿನ ಪ್ರಮುಖರ ಜೊತೆಗೆ ಚಿಟ್ ಚಾಟ್ ಮಾಡುತ್ತಾ ತಮ್ಮ ತ್ರಿಬಲ್ ಆರ್ ಅನ್ನು ಇನ್ನಷ್ಟು ಪ್ರಮೋಟ್ ಮಾಡುತ್ತಿದ್ದಾರೆ.‌ ಇದನ್ನೂ ಓದಿ: ಐತಿಹಾಸಿಕ ಸಾಧನೆ ಮೆರೆದ RRR: ನಾಟು ನಾಟು ಹಾಡಿಗೆ ಅಂತರ್ರಾಷ್ಟ್ರೀಯ ಪ್ರಶಸ್ತಿಯ ಗೌರವ

ನಿನ್ನೆ ಬಾಲಿವುಡ್ ನಟ ಶಾರೂಖ್ ಖಾನ್(Shah Rukh Khan) ಅವರ ಬಹು ನಿರೀಕ್ಷಿತ ಸಿನಿಮಾ ಪಠಾಣ್(Pathan) ನ ಟ್ರೇಲರ್ ಬಿಡುಗಡೆ ಆಗಿದ್ದು, ತನ್ನ ಎಲ್ಲಾ ಬ್ಯುಸಿ ಶೆಡ್ಯೂಲ್ ನ ನಡುವೆಯೇ ನಟ ರಾಮ್ ಚರಣ್ ನಿನ್ನೆ ಪಠಾಣ್ ನ ತೆಲುಗು ಟ್ರೈಲರ್ (Pathan Telugu Trailer) ಅನ್ನು ಬಿಡುಗಡೆ ಮಾಡಿದ್ದಾರೆ. ತ್ರಿಬಲ್ ಆರ್ ಪ್ರಮೋಷನ್ ನಡುವೆಯೂ ಬಿಡುವು ಮಾಡಿಕೊಂಡು ರಾಮ್ ಚರಣ್ ಪಠಾಣ್ ಟ್ರೈಲರ್ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ನಟ ಶಾರೂಖ್ ಖಾನ್ ಟ್ವೀಟ್ ಮಾಡಿ ಧನ್ಯವಾದ ಹೇಳುವ ಜೊತೆಗೆ ರಾಮ್ ಚರಣ್ ಮುಂದೆ ಒಂದು ಬೇಡಿಕೆಯನ್ನು ಸಹಾ ಇಟ್ಟಿದ್ದಾರೆ.

ಶಾರೂಖ್ ಖಾನ್ ಟ್ವೀಟ್(Shah Rukh Khan Tweet) ಒಂದನ್ನು ಮಾಡಿದ್ದು, “ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಗೆ ಧನ್ಯವಾದಗಳು. ನಿಮ್ಮ ತ್ರಿಬಲ್ ಆರ್ ತಂಡವು ಆಸ್ಕರ್ ಪ್ರಶಸ್ತಿಯನ್ನು ಭಾರತಕ್ಕೆ ತಂದರೆ, ಆ ಪ್ರಶಸ್ತಿಯನ್ನು ಮುಟ್ಟಲು ನನಗೊಂದು ಅವಕಾಶವನ್ನು ನೀಡಿ” ಎಂದು ಬರೆದುಕೊಂಡಿದ್ದಾರೆ. ಶಾರೂಖ್ ಖಾನ್ ಮಾಡಿದ ಟ್ವೀಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೆಟ್ಟಿಗರು ಹಾಗೂ ಅಭಿಮಾನಿಗಳು ಇದಕ್ಕೆ ಕಾಮೆಂಟ್ ಗಳನ್ನು ಮಾಡಿ ತಮ್ಮ ಮೆಚ್ಚುಗೆಗಳನ್ನು ಸಹಾ ನೀಡುತ್ತಿದ್ದಾರೆ. ಇದನ್ನೂ ಓದಿ: ಸೋನುನ ಮರೆತ ರಾಕಿ! ಅಮೂಲ್ಯ ಗೌಡ ಜೊತೆಗೆ ರಾಕೇಶ್ ಅಡಿಗ ಸುತ್ತಾಟ: ವೈರಲ್ ಫೋಟೋಗಳು

Leave a Comment