ಶಾರೂಖ್ ಗೆದ್ದು, ಸೂಪರ್ ಸ್ಟಾರ್ ಆದ ಅದೇ ಪಾತ್ರಕ್ಕೆ ಈಗ ವಿಜಯ ದೇವರಕೊಂಡ: ಶಾಕಿಂಗ್ ಸುದ್ದಿ!

Written by Soma Shekar

Published on:

---Join Our Channel---

ಬಾಲಿವುಡ್ ನಲ್ಲಿ ನಟ ಶಾರೂಖ್ ಖಾನ್ ಇಂದು ಸ್ಟಾರ್ ನಟ, ಅವರಿಗೆ ದೇಶ, ವಿದೇಶಗಳಲ್ಲಿ ದೊಡ್ಡ ಅಭಿಮಾನಿಗಳ ಬಳಗವಿದೆ. ಕಿಂಗ್ ಖಾನ್ ಎನ್ನುವ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಶಾರುಖ್ ಖಾನ್ ಗೆ ಇಂತಹುದೊಂದು ಸ್ಟಾರ್ ಪಟ್ಟಕ್ಕೆ ಕಾರಣವಾದ ಸಿನಿಮಾ ದಿಲ್ವಾಲೇ ದುಲ್ಹನಿಯಾ ಲೇ ಜಾಯೆಂಗೆ ( DDLJ )ಎನ್ನುವುದರಲ್ಲಿ ಎರಡು ಮಾತಿಲ್ಲ. ಬಾಲಿವುಡ್ ಸಿನಿಮಾ ಇತಿಹಾಸದಲ್ಲಿ ಹೊಸ ದಾಖಲೆಗಳನ್ನು ಬರೆದು, ವರ್ಷಗಳ ಕಾಲ ಯಶಸ್ವಿ ಪ್ರದರ್ಶನ ಕಂಡ ಸಿನಿಮಾ ಆಗಿತ್ತು DDLJ. ಬಾಲಿವುಡ್ ನ ಎವರ್ ಗ್ರೀನ್ ಸಿನಿಮಾಗಳಲ್ಲಿ ಇದು ಸಹಾ ಒಂದಾಗಿದೆ. ಈ ಸಿನಿಮಾವನ್ನು ನೋಡಿ ಶಾರೂಖ್ ಮತ್ತು ಕಾಜೋಲ್ ಅಭಿಮಾನಿಗಳಾದವರು ಅಸಂಖ್ಯಾತ ಮಂದಿ.

ದಶಕಗಳ ಹಿಂದೆ ಸಖತ್ ಸೌಂಡ್ ಮಾಡಿದ್ದ ಈ ಸಿನಿಮಾದ ವಿಚಾರ ಈಗ ಏಕೆ? ಎನ್ನುವುದಾದರೆ ಖಂಡಿತ ಅದಕ್ಕೊಂದು ಕಾರಣವಿದೆ. ಟಾಲಿವುಡ್ ನ ರೌಡಿ ಹೀರೋ ಎನ್ನುವ ಹೆಸರನ್ನು ಪಡೆದಿರುವ ನಟ ವಿಜಯ ದೇವರಕೊಂಡ ಬಾಲಿವುಡ್ ಗೆ ಎಂಟ್ರಿ ನೀಡಲು ಮಾಡಿದ ಮೊದಲ ಸಿನಿಮಾ ಲೈಗರ್ ಹೀನಾಯ ಸೋಲನ್ನು ಕಂಡಿದೆ. ಆದರೆ ಸಿನಿಮಾ ಬಿಡುಗಡೆಗೆ ಮೊದಲು ಮಾಡಿದ ಸದ್ದಿನಲ್ಲೇ ನಟನಿಗೆ ಬಾಲಿವುಡ್ ನಟಿಯರಿಂದ ಹಿಡಿದು, ಅದೆಷ್ಟೋ ಜನ ಯುವತಿಯರು ಫಿದಾ ಆಗಿದ್ದಾರೆ. ನಟನ ಫೀಮೇಲ್ ಫಾಲೋಯಿಂಗ್ ದುಪ್ಪಟ್ಟಾಗಿದೆ. ಲೈಗರ್ ಸೋತರೂ ವಿಜಯ ದೇವರಕೊಂಡ ಚಾರ್ಮ್ ಕಡಿಮೆಯಾಗಿಲ್ಲ.

ಈಗ ಬಾಲಿವುಡ್ ನ ಪ್ರಮುಖ ನಿರ್ಮಾಣ ಸಂಸ್ಥೆ ಆಗಿರುವ ಯಶ್ ರಾಜ್ ಫಿಲ್ಮ್ಸ್ ನಟ ವಿಜಯ ದೇವರಕೊಂಡ ಅವರನ್ನು ನಾಯಕನನ್ನಾಗಿ ಮಾಡಿ, ಅಂದು ಬಾಲಿವುಡ್ ನಲ್ಲಿ ಸೂಪರ್ ಡೂಪರ್ ಹಿಟ್ ಆಗಿ ಶಾರೂಖ್ ವೃತ್ತಿ ಜೀವನದಲ್ಲೊಂದು ಮೈಲಿಗಲ್ಲು ಎನಿಸಿರುವ ದಿಲ್ವಾಲೆ ದುಲ್ಹನಿಯಾ ಲೇಜಾಯೆಂಗೆ ಸಿನಿಮಾದ ರೀಮೇಕ್ ಮಾಡಲು ಸಜ್ಜಾಗಿದೆ ಎನ್ನುವ ಸುದ್ದಿಯೊಂದು ಹೊರ ಬಂದಿದೆ. ಶಾರೂಖ್ ಖಾನ್ ನಟಿಸಿದ್ದ ಪಾತ್ರದಲ್ಲಿ ವಿಜಯ ದೇವರಕೊಂಡ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಕೇಳಿ ನಟನ ಅಭಿಮಾನಿಗಳು ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ.

ಆದರೆ DDLJ ರಿಮೇಕ್ ಕುರಿತಾಗಿ ಸಿನಿಮಾ ನಿರ್ಮಾಣ ಸಂಸ್ಥೆಯಾಗಿರುವ ಯಶ್ ರಾಜ್ ಫಿಲ್ಮ್ಸ್ ಅಥವಾ ನಟ ವಿಜಯ ದೇವರಕೊಂಡ ಯಾವುದೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ. ಆದ್ದರಿಂದ ಇದು ನಿಜವಾದ ಸುದ್ದಿಯಲ್ಲ, ಕೇವಲ ಗಾಳಿ ಸುದ್ದಿಯಷ್ಟೇ ಎಂದು ಹೇಳಲಾಗುತ್ತಿದೆ. ಆದರೆ ಕೆಲವರು ಬೆಂಕಿಯಿಲ್ಲದೇ ಹೊಗೆಯಾಡುವುದಿಲ್ಲ. ಅಧಿಕೃತ ಘೋಷಣೆ ಸಹಾ ಶೀಘ್ರದಲ್ಲೇ ಆದರೂ ಅದರಲ್ಲಿ ಅಚ್ಚರಿಯೇನಿಲ್ಲ ಎಂದು ಹೇಳುತ್ತಿದ್ದಾರೆ. ಈ ಸುದ್ದಿ ಎಷ್ಟು ನಿಜ ಎನ್ನುವುದನ್ನು ತಿಳಿಯಲು ಸ್ವಲ್ಪ ದಿನಗಳ ಕಾಲ ಕಾಯಲೇಬೇಕಾಗಿದೆ.

Leave a Comment