ಪಠಾಣ್ ದೇಶಭಕ್ತಿಯ ಸಿನಿಮಾ: ಟೀಕಿಸಿದವರಿಗೆ ತಿರುಗೇಟು ಕೊಟ್ಟ ಶಾರೂಖ್ ಹೇಳಿದ್ದೇನು?

Written by Soma Shekar

Published on:

---Join Our Channel---

Shah Rukh Khan : ಬಾಲಿವುಡ್ ನ ಬಿಡುಗಡೆಗೆ ಸಜ್ಜಾಗಿರುವ ಪಠಾಣ್ (Pathan) ಸಿನಿಮಾ ಇದೀಗ ಎಲ್ಲೆಲ್ಲೂ ಚರ್ಚೆಯ ವಿಷಯವಾಗಿ ಮಾರ್ಪಟಾಗಿದೆ. ಅದರಲ್ಲೂ ಸಿನಿಮಾದ ಹಾಡಿನಲ್ಲಿ ನಟಿ ದೀಪಿಕಾ (Deepika Padukone) ಧರಿಸಿದ ಕೇಸರಿ ಬಣ್ಣದ ಬಿ ಕಿ ನಿ ಈಗ ದೇಶದಲ್ಲಿ ಜನರ ದೇಶ ಭಕ್ತಿಯನ್ನು, ಧರ್ಮ ಗೌರವವನ್ನು ಸಹಾ ಪ್ರಶ್ನೆ ಮಾಡುವ ಮಟ್ಟಕ್ಕೆ ಬೆಳೆದಾಗಿದೆ. ಈ ಸಿನಿಮಾದಲ್ಲಿ ಬೇಷರಮ್ ರಂಗ್ (Besharam Rung) ಅಂದರೆ ನಾಚಿಕೆಯಿಲ್ಲದ ಬಣ್ಣ ಎಂದು ಸಾಹಿತ್ಯ ಇದ್ದು, ಅಲ್ಲಿ ಕೇಸರಿಯನ್ನು ಬಳಸಿರುವುದು ಉದ್ದೇಶಪೂರ್ವಕವಾಗಿ ಆಗಿದ್ದು, ಅದು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವನ್ನು ಉಂಟು ಮಾಡುವ ಕೆಲಸವನ್ನು ಮಾಡಲಾಗಿದೆ ಎಂದು ಅನೇಕರು ಆ ರೋ ಪವನ್ನು ಮಾಡುತ್ತಾ, ಸಿನಿಮಾ ಬ್ಯಾನ್ ಗಾಗಿ ಆಗ್ರಹಿಸುತ್ತಿದ್ದಾರೆ.

ಈಗ ಎದ್ದಿರುವ ಎಲ್ಲಾ ಪ್ರಶ್ನೆಗಳು, ಉದ್ಭವಿಸಿರುವ ವಿ ವಾ ದ ಕ್ಕೆ ಉತ್ತರ ನೀಡುವಂತೆ ಹಾಗೂ ತಮ್ಮ ಪಠಾಣ್ ಸಿನಿಮಾ ವಿ ರೋ ಧ ಮಾಡುತ್ತಿರುವವರಿಗೆ ಸಹಾ ಉತ್ತರವನ್ನು ನೀಡುವಂತಹ ಕೆಲಸವನ್ನು ನಟ ಶಾರೂಖ್ ಖಾನ್ (Shah Rukh Khan) ಮಾಡಿದ್ದಾರೆ. ಪಠಾಣ್ ಸಿನಿಮಾದ ಕುರಿತಾಗಿ ಎಲ್ಲೆಲ್ಲೂ ವಿ ರೋ ಧವನ್ನು ವ್ಯಕ್ತ ಮಾಡುತ್ತಿರುವವರಿಗೆ ಶಾರೂಖ್ ತಿರುಗೇಟು ನೀಡುವ ಪ್ರಯತ್ನವನ್ನು ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯ ಆಗಿರುವ ನಟ ಶಾರೂಖ್ ಖಾನ್ ಅವರು ಟ್ವಿಟರ್ (Shahrukh Tweet) ನಲ್ಲಿ ಅಭಿಮಾನಿಗಳ ಜೊತೆಗೆ ನಡೆಸಿದ ಸಂವಾದದ ವೇಳೆಯಲ್ಲಿ ಸಿನಿಮಾ ಕುರಿತಾಗಿ ಹೇಳಿದ ವಿಚಾರ ಈಗ ಸದ್ದು ಮಾಡಿದೆ.

ಇದನ್ನೂ ಓದಿ: ಏನೇ ಇರಲಿ ನಾನು ಪಠಾಣ್ ನೋಡ್ತೀನಿ: ಪಠಾಣ್ ಸಿನಿಮಾ ಬಗ್ಗೆ ಕನ್ನಡ ನಟನ ಬಹಿರಂಗ ಮಾತು

ನೆಟ್ಟಿಗರೊಬ್ಬರ ಪ್ರಶ್ನೆಗೆ ಉತ್ತರಿಸಿದ ನಟ, ಪಠಾಣ್ ಸಹಾ ಒಂದು ದೇಶಭಕ್ತಿಯನ್ನು (Patriotic) ಸಾರುವ ಸಿನಿಮಾ ಆಗಿದೆ. ಆದರೆ ಅದು ಆ್ಯಕ್ಷನ್ ರೀತಿಯಲ್ಲಿ ಸಾಗುತ್ತದೆ ಎಂದಿದ್ದಾರೆ. ಇಲ್ಲಿಯವರೆಗೆ ಪಠಾಣ್ (Pathan) ಸಿನಿಮಾವನ್ನು ಕೇಸರಿ ಬಣ್ಣಕ್ಕೆ ಮಾಡಿದ ಅ ಪ ಮಾನ, ಧಾರ್ಮಿಕ ಭಾವನೆಗಳಿಗೆ ಧ ಕ್ಕೆ ತರುವ ಪ್ರಯತ್ನ ಮತ್ತು ಈ ಸಿನಿಮಾ ಅ ಶ್ಲೀ ಲ ಎಂದೆಲ್ಲಾ ಟೀಕೆಗಳನ್ನು ಮಾಡಿದವರಿಗೆ ಈಗ ಶಾರೂಖ್ ತಮ್ಮ ಸಿನಿಮಾ ದೇಶಭಕ್ತಿಯ ಸಿನಿಮಾ ಎಂದು ಹೇಳುವ ಮೂಲಕ ಮಾತಿನಲ್ಲೇ ಚಾಟಿ ಬೀಸಿ ತಿರುಗೇಟು ನೀಡಿದ್ದಾರೆ. ನಟ ಶಾರೂಖ್ (Shahrukh) ಮಾಡಿರುವ ಟ್ವೀಟ್ ಈಗ ವೈರಲ್ ಆಗಿದೆ.

Leave a Comment