ಶಾಕಿಂಗ್!! ಮುಗಿಯಿತು ಬಿಗ್ ಬಾಸ್ ನ ಫಸ್ಟ್ ಎಲಿಮಿನೇಷನ್: ಬಿಗ್ ಬಾಸ್ ಮನೆಯಿಂದ ಹೊರ ಬಂದ ಸ್ಪರ್ಧಿ ಇವರೇ

Written by Soma Shekar

Published on:

---Join Our Channel---

ಬಿಗ್ ಬಾಸ್ ಕನ್ನಡ ಮೊದಲ ವಾರದ ಕಳೆಯುತ್ತಾ ಬಂದಿದೆ. ಈ ಬಾರಿ ಕನ್ನಡ ಬಿಗ್ ಬಾಸ್ ಸೀಸನ್ 9 ರಲ್ಲಿ ಪ್ರವೀಣರು ಮತ್ತು ನವೀನರ ನಡುವೆ ಆಟ ಜೋರಾಗಿಯೇ ನಡೆದಿದೆ. ನಿನ್ನೆ ವಾರಾಂತ್ಯದ ಎಪಿಸೋಡ್ ನಲ್ಲಿ ನಿರೂಪಕ ಕಿಚ್ಚ ಸುದೀಪ್ ಅವರು ಮನೆಯ ಸದಸ್ಯರಿಗೆ ಒಂದಷ್ಟು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಆದರೆ ಇವೆಲ್ಲವುಗಳ ನಡೆದ ಪ್ರೇಕ್ಷಕರನ್ನು ಕಾಡುವ ಪ್ರಶ್ನೆ ವಾರಾಂತ್ಯದಲ್ಲಿ ಯಾರು ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರಗೆ ಬರುತ್ತಾರೆ ಎನ್ನುವುದು. ಈ ವಿಚಾರವಾಗಿ ಪ್ರೇಕ್ಷಕರು ಸಾಕಷ್ಟು ಕುತೂಹಲದಿಂದ ಕಾರ್ಯಕ್ರಮವನ್ನು ವೀಕ್ಷಣೆ ಮಾಡುತ್ತಿರುತ್ತಾರೆ.

ಹಾಗಾದರೆ ಬಿಗ್ ಬಾಸ್ ಮನೆಯಲ್ಲಿರುವ ಒಟ್ಟು ಹದಿನೆಂಟು ಮಂದಿ ಸದಸ್ಯರಲ್ಲಿ ಮೊದಲನೇ ವಾರ ಯಾವ ಸ್ಪರ್ಧಿಯು ಎಲಿಮಿನೇಟ್ ಆಗಿ ಹೊರ ಬರಲಿದ್ದಾರೆ ಎನ್ನುವ ಪ್ರೇಕ್ಷಕರ ಪ್ರಶ್ನೆಗೆ ಇದೀಗ ಉತ್ತರ ದೊರೆತಿದೆ. ಬಿಗ್ ಬಾಸ್ ಮನೆಯಲ್ಲಿ ಮೊದಲ ಎಲಿಮಿನೇಶನ್ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಪ್ರವೀಣರು ಮತ್ತು ನವೀನರ ನಡುವಿನ ಸ್ಪರ್ಧೆಯಲ್ಲಿ ಮೊದಲ ವಾರಾಂತ್ಯದಲ್ಲಿ ನವೀನರ ತಂಡದಿಂದಲೇ ಒಬ್ಬರು ಎಲಿಮಿನೇಟ್ ಆಗಿದ್ದಾರೆ. ಈ ಮೂಲಕ ಒಬ್ಬ ಸ್ಪರ್ಧಿಯ ಬಿಗ್ ಬಾಸ್ ಪಯಣವು ಮೊದಲನೇ ವಾರದ ಕೊನೆಗೆ ಅಂತ್ಯವಾಗಿದೆ. ಹಾಗಾದರೆ ಆ ಸ್ಪರ್ಧಿ ಯಾರು? ಬಿಗ್ ಬಾಸ್ ಮನೆಯಿಂದ ಹೊರ ಬಂದ ಸದಸ್ಯ ಯಾರು? ಅದಕ್ಕೆ ಉತ್ತರ ಇಲ್ಲಿದೆ.

ಈ ಬಾರಿ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದ ಸ್ಪರ್ಧಿಗಳಲ್ಲಿ ಬೈಕ್ ರೇಸರ್ ಆಗಿ ವಿಶ್ವ ಮಟ್ಟದಲ್ಲಿ ಮೋಟಾರ್ ಸ್ಪೋರ್ಟ್ಸ್ ಮಹಿಳಾ ಕ್ಯಾಟಗರಿಯಲ್ಲಿ ಗೆದ್ದಿರುವ ಪ್ರಥಮ ಭಾರತೀಯ ಮಹಿಳೆ ಎನ್ನುವ ಹೆಗ್ಗಳಿಕೆ ಪಡೆದಿರುವ ಐಶ್ವರ್ಯ ಪಿಸ್ಸೆ ಅವರು ಕೂಡಾ ಒಬ್ಬರಾಗಿದ್ದರು. ಈಗ ಬಂದಿರುವ ಮಾಹಿತಿಗಳ ಪ್ರಕಾರ ಐಶ್ವರ್ಯ ಪಿಸ್ಸೆ ಅವರಿಗೆ ಕಡಿಮೆ ಓಟುಗಳು ಬಂದಿರುವ ಕಾರಣ ಆದರೂ ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಐಶ್ವರ್ಯ ಪಿಸ್ಸೆ ಅವರ ಬಿಗ್ ಬಾಸ್ ಜರ್ನಿ ಮುಕ್ತಾಯವಾಗಿದೆ.

Leave a Comment