ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಸಾನ್ಯಾ ರೀ ಎಂಟ್ರಿ? ಏನಿದು ಹೊಸ ಟ್ವಿಸ್ಟ್?

Written by Soma Shekar

Published on:

---Join Our Channel---

ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮವು ಏಳನೇ ವಾರದ ಕೊನೆಯ ಭಾಗಕ್ಕೆ ಬಂದಿದೆ. ಬಿಗ್ ಬಾಸ್ ನ ಈ ಸೀಸನ್ ನ ಅರ್ಧ ಜರ್ನಿ ಮುಗಿಯುತ್ತಾ ಬಂದಿರುವ ಈ ಸಮಯದಲ್ಲಿ ಪ್ರೇಕ್ಷಕರ ಉತ್ಸುಕತೆ ‘ಬಿಗ್ ಬಾಸ್’ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯ ಕಡೆಗೆ ನೆಟ್ಟಿದೆ. ಈ ಸೀಸನ್‌ನಲ್ಲಿ ‘ಬಿಗ್ ಬಾಸ್’ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಯಾವಾಗ ಎಂಟ್ರಿ ಕೊಡ್ತಾರೆ ಎನ್ನುವುದು ಗೊತ್ತಿಲ್ಲವಾದರೂ, ಈಗ ಹೊಸದೊಂದು ಪ್ರಶ್ನೆ ಹುಟ್ಟುಕೊಂಡಿದೆ. ಹೌದು, ಸಾನ್ಯಾ ಅಯ್ಯರ್ ‘ಬಿಗ್ ಬಾಸ್’ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ರೀ ಎಂಟ್ರಿ ಕೊಡ್ತಾರಾ? ಎನ್ನುವ ಒಂದು ದೊಡ್ಡ ಪ್ರಶ್ನೆ ವೀಕ್ಷಕರನ್ನು ಕಾಡಲು ಆರಂಭಿಸಿದೆ. ಪ್ರೇಕ್ಷಕರಿಗೆ ಇಂತಹುದೊಂದು ಅನುಮಾನ ಬರಲು ಕಾರಣವಾದ್ರು ಏನು ಎಂದು ತಿಳಿಯೋಣ ಬನ್ನಿ.

ಬಿಗ್ ಬಾಸ್ ಕನ್ನಡ 9 ರ ಆರನೇ ವಾರದ ಕೊನೆಗೆ ಸಾನ್ಯಾ ಅಯ್ಯರ್ ಎಲಿಮಿನೇಟ್ ಆಗಿ ಮನೆಯಿಂದ ಹೊರ ಬಂದಿದ್ದಾರೆ. ‘ಬಿಗ್ ಬಾಸ್ ಕನ್ನಡ ಓಟಿಟಿ ಒಂದನೇ ಸೀಸನ್ ನಿಂದಲೂ ಸಾನ್ಯಾ ಅಯ್ಯರ್ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು. ಟಿವಿ ಬಿಗ್ ಬಾಸ್ ನಲ್ಲೂ ಸಹಾ ಅವರು ಪ್ರಬಲ ಸ್ಪರ್ಧಿಯಾಗಿ ಮಿಂಚುತ್ತಿರುವಾಗಲೇ, ಅವರು ‘ಬಿಗ್ ಬಾಸ್ ಕನ್ನಡ ಒಂಬತ್ತರ ಆರನೇ ವಾರ ಔಟ್ ಆಗಿದ್ದು ಅವರ ಅಭಿಮಾನಿಗಳಿಗೆ ಶಾ ಕ್ ನೀಡಿತ್ತು. ಸಾನ್ಯಾ ಅಯ್ಯರ್ ಔಟ್ ಆಗಿದ್ದಕ್ಕೆ ಮನೆಯಲ್ಲಿ ಅವರಿಗೆ ಬಹಳ ಹತ್ತಿರವಾಗಿದ್ದ ರೂಪೇಶ್ ಶೆಟ್ಟಿ ಅವರು ಕಣ್ಣೀರು ಹಾಕಿದ್ದರು. ಊಟ ಮಾಡುವಾಗಲೂ ಸಾನ್ಯಾ ನೆನಪು ಕಾಡಿ ಭಾವುಕರಾಗಿದ್ದರು.

ಬಿಗ್ ಬಾಸ್ ಮನೆಯಲ್ಲಿ ಸಾನ್ಯಾ ಅಯ್ಯರ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿರುವ ರೂಪೇಶ್ ಶೆಟ್ಟಿ ‘ಮಿಸ್ ಯೂ ಸಾನ್ಯ’ ಅಂತ ಹಣೆ ಪಟ್ಟಿಯೊಂದನ್ನು ಕಟ್ಟಿಕೊಂಡಿದ್ದಾರೆ. ಅದು ಸಾಲದೆಂಬಂತೆ ಅವರು ತಮ್ಮ ಕೆನ್ನೆಗಳ ಮೇಲೆ ಹೃದಯಾಕಾರದಲ್ಲಿ ಬಣ್ಣ ಹಾಕಿಕೊಂಡಿದ್ದು, ಪ್ರತಿದಿನ ಬಿಗ್ ಬಾಸ್ ಮನೆಯಲ್ಲಿ ಹತ್ತು ಹಲವು ಸಲ ‘ಮಿಸ್ ಯೂ ಸಾನ್ಯ’ ಅಂತ ಹೇಳುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗಲೇ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಸಾನ್ಯಾ ಅಯ್ಯರ್ ಎಂಟ್ರಿ ಕೊಡಬಹುದಾ? ಎಂದು ವೀಕ್ಷಕರು ಊಹೆ ಮಾಡುತ್ತಿರುವುದು ಕಂಡು ಬಂದಿದೆ. ಇವೆಲ್ಲವುಗಳ ನಡುವೆ ಸಾನ್ಯಾ ಇನ್ಸ್ಟಾಗ್ರಾಂ ನಲ್ಲಿ ಮಾಡಿದ ಒಂದು ಪೋಸ್ಟ್ ಗಮನ ಸೆಳೆದಿತ್ತು.

ಹೌದು, ಸಾನ್ಯಾ ಇದು ಯಾರ ಬಾಟೆಲ್ ಎಂದು ಊಹಿಸಿ. ಬೆಸ್ಟ್ ಫ್ರೆಂಡ್‌ ನಿನ್ನನ್ನ ಮತ್ತೆ ನೋಡೋಕೆ ಕಾಯ್ತಿದ್ದೇನೆ, ಎಂದು ರೂಪೇಶ್ ಶೆಟ್ಟಿ ಅವರ ಬಾಟೆಲ್ ಹಿಡಿದು ಸಾನ್ಯಾ ಅಯ್ಯರ್ ತಮ್ಮ ಇನ್ಸ್ಟಾಗ್ರಾಮ್‌ ಸ್ಟೋರೀಸ್‌ನಲ್ಲಿ ವೀಡಿಯೋ ಶೇರ್ ಮಾಡಿಕೊಂಡಿದ್ದರು. ಇದನ್ನು ನೋಡಿ ಜನ ಸಾನ್ಯಾ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಆಗಿ ಹೋಗ್ತಿದ್ದಾರಾ ಎನ್ನುತ್ತಿದ್ದಾರೆ. ಅಲ್ಲದೇ ಸಾನ್ಯಾ ಅವರು ಕೂಡಾ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಯಾವುದೇ ಮಾದ್ಯಮದ ಸಂದರ್ಶನಗಳಲ್ಲಿ ಕಾಣಿಸಿಕೊಂಡಿಲ್ಲ ಎನ್ನುವುದು ಸಹಾ ಗಮನಾರ್ಹ ಎನಿಸಿದೆ..

ಇವೆಲ್ಲವುಗಳು ನಡುವೆಯೇ ಮತ್ತೊಂದು ಕಡೆ, ಸಾನ್ಯಾ ವಾಪಸ್ ಬರಬೇಕು ಎಂದು ಟ್ವಿಟ್ಟರ್‌ನಲ್ಲಿ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿದೆ. ಸಾನ್ಯಾ ಅಯ್ಯರ್ ಅವರನ್ನ ವಾಪಸ್ ‘ಬಿಗ್ ಬಾಸ್’ ಮನೆಗೆ ಕರೆತನ್ನಿ ಎಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ. ಸಾಕಷ್ಟು ಪೋಸ್ಟ್ ಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಹಾಗಾದರೆ ಅಭಿಮಾನಿಗಳ ಈ ಬೇಡಿಕೆ ಈಡೇರುತ್ತಾ? ಸಾನ್ಯಾ ಅಯ್ಯರ್ ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಾರಾ? ಸಾನ್ಯಾ ಬಿಗ್ ಬಾಸ್ ಮನೆಗೆ ಕಮ್ ಬ್ಯಾಕ್ ಮಾಡಬೇಕಾ? ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ.

Leave a Comment