ವೇದಿಕೆ ಮೇಲೆ ಹಿರಿಯ ನಟಿಯಿಂದ ಕಂಗನಾಗೆ ಅವಮಾನ: ತೀವ್ರ ಮುಜುಗರಕ್ಕೀಡಾದ ನಟಿ ಕಂಗನಾ

Written by Soma Shekar

Published on:

---Join Our Channel---

ಬಾಲಿವುಡ್ ನಲ್ಲಿ ತನ್ನ ಹೇಳಿಕೆಗಳಿಂದಲೇ ಸದ್ದು ಮಾಡುವ ನಟಿ ಕಂಗನಾ ರಣಾವತ್ ಮತ್ತು ಹಿರಿಯ ನಟಿ, ಅಮಿತಾಬ್ ಬಚ್ಚನ್ ಅವರ ಪತ್ನಿ ಜಯಾ ಬಚ್ಚನ್ ನಡುವೆ ನಡೆದಿದ್ದ ಮಾತಿನ ಚಕಮಕಿಯನ್ನು ಬಾಕಿವುಡ್ ಮಾತ್ರವೇ ಅಲ್ಲ, ಇಡೀ ದೇಶದ ಸಿನಿ ಪ್ರಿಯರು ಇನ್ನೂ ಮರೆತಿಲ್ಲ. ಯುವ ನಟ ಸುಶಾಂತ್ ಸಿಂಗ್ ಸಾವಿನ ನಂತರ ನಟಿ ಕಂಗನಾ ರಣಾವತ್ ಇಡೀ ಬಾಲಿವುಡ್ ಅನ್ನು ಟಾರ್ಗೆಟ್ ಮಾಡಿಕೊಂಡಿದ್ದರು. ಬಾಲಿವುಡ್ ನಲ್ಲಿನ ಮಾ ಫಿ ಯಾ, ವಂಶಪಾರಂಪರಿಕ ವಾರಸತ್ವ, ಇನ್ನಿತರೆ ವಿಚಾರಗಳನ್ನು ಖಂಡಿಸುತ್ತಾ ನಟಿಯು ಬಾಲಿವುಡ್ ಮ ನಟ, ನಟಿಯರನ್ನು ಸಹಾ ದೂ ಷ ಣೆ ಮಾಡಿದ್ದರು. ಇಡೀ ಬಾಲಿವುಡ್ ಕೆಲವರ ಕೈಯಲ್ಲಿ ಕೈಗೊಂಬೆಯಾಗಿದೆ ಎಂದಿದ್ದ ಕಂಗನಾ, ಆ ಕೆಲವರು ತಮ್ಮ ಮಕ್ಕಳನ್ನು ಮಾತ್ರ ಬೆಳೆಸುತ್ತಿದ್ದಾರೆ ಎಂದು ಆ ರೋ ಪ ಮಾಡಿದ್ದರು.

ಕಂಗನಾ ಮಾಡಿದ ಆ ರೋ ಪಗಳು ಹಾಗೂ ಕೇಳಿದ ಪ್ರಶ್ನೆಗಳು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಕಂಗನಾ ಮಾತಿನಿಂದ ಕೆರಳಿದ್ದ ನಟಿ ಜಯಾ ಬಚ್ಚನ್ ಅವರು ಕಂಗನಾ ಮಾತಿಗೆ ನಯಾ ಪೈಸೆ ಬೆಲೆಯಿಲ್ಲ ಎಂದು ತಮ್ಮ ಸಿಟ್ಟನ್ನು ಹೊರಹಾಕಿದ್ದರು. ಹಿರಿಯ ನಟಿಯ ಮಾತಿಗೆ ಕಂಗನಾ ಸಹಾ ಬಹಳ ಖಡಕ್ಕಾಗಿಯೇ ತಿರುಗೇಟು ನೀಡಿದ್ದರು. ಇವರಿಬ್ಬರ ಮಾತಿನ ಸಮರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೆಲ್ಲಾ ನಡೆದ ನಂತರ ಇದೇ ಮೊದಲ ಬಾರಿಗೆ ಕಂಗನಾ ರಣಾವತ್ ಮತ್ತು ಜಯಾ ಬಚ್ಚನ್ ಇಬ್ಬರೂ ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಿದ್ದಾರೆ. ನಟಿ ಕಂಗನಾ ಅವರ ಊಂಚಾಯಿ ಸಿನಿಮಾದ ಸ್ಪೆಷಲ್ ಸ್ಕ್ರೀನ್ ವೇಳೆ ಈ ನಟಿಯರು ಎದುರಾಗಿದ್ದಾರೆ.

ಒಂದೇ ವೇದಿಕೆಯಲ್ಲಿ ಜಯಾ ಬಚ್ಚನ್ ಮತ್ತು ಕಂಗನಾ ಮುಖಾಮುಖಿಯಾಗಿದ್ದಾರೆ. ಆದರೆ ಈ ವೇಳೆ ಜಯಾ ಬಚ್ಚನ್ ಅವರು ಕಂಗನಾ ಕಡೆಗೆ ಕಣ್ಣೆತ್ತಿಯೂ ನೋಡಿಲ್ಲ ಮತ್ತು ಅಲ್ಲಿಂದ ಮುಂದೆ ನಡೆದಿದ್ದಾರೆ. ಹಿರಿಯ ನಟ ಅನುಪಮ್ ಖೇರ್ ಅವರು ಕಂಗನಾ ಕುರಿತಾಗಿ ಏನೋ ಹೇಳಲು ಜಯಾ ಬಚ್ಚನ್ ಅವರ ಬಳಿ ಪ್ರಯತ್ನವನ್ನು ಮಾಡಿದರು ಆದರೆ ಜಯಾ ಅದಕ್ಕೆ ಆಸ್ಪದವನ್ನು ನೀಡದೇ ಕಂಗನಾರನ್ನು ದಾಟಿ ಮುಂದೆ ಹೋಗಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನಟಿ ಕಂಗನಾಗೆ ಇದು ತೀವ್ರ ಮುಜುಗರವನ್ನು ಉಂಟು ಮಾಡಿದ್ದು, ಟ್ರೋಲ್ ಸಹಾ ಆಗುತ್ತಿದೆ.

ಜಯಾ ಅವರನ್ನು ಕಂಗನಾ ಮುಗುಳ್ಳಗುತ್ತಾ ನೋಡುತ್ತಿದ್ದರೂ ಜಯಾ ಬಚ್ಚನ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೇ ನಿರ್ಲಕ್ಷ್ಯ ಮಾಡಿದ್ದಾರೆ. ಕಂಗನಾ ಹೆಸರು ಕೇಳಿದರೂ ಜಯಾ ಬಚ್ಚನ್ ಅದರ ಕಡೆಗೆ ಗಮನ ನೀಡದೇ ಮುಂದೆ ಸಾಗಿದ್ದು ಎಲ್ಲರಿಗೂ ಅಚ್ಚರಿ ಯನ್ನು ಉಂಟು ಮಾಡುತ್ತಿದೆ. ಈ ವೀಡಿಯೋ ನೋಡಿದ ಮೇಲೆ ಕಂಗನಾ ಮೇಲಿನ ಕೋಪ ಜಯಾ ಬಚ್ಚನ್ ಅವರಿಗೆ ಇನ್ನೂ ಇಳಿದಿಲ್ಲ ಎನ್ನುವುದು ಬಹಳ ಸ್ಪಷ್ಟವಾಗಿ ಕಾಣುತ್ತಿದೆ. ಕಂಗನಾ ವಿ ರೋ ಧಿಗಳಿಗೆ ನಟಿಯನ್ನು ಭರ್ಜರಿ ಟ್ರೋಲ್ ಮಾಡಲು ಒಂದು ಉತ್ತಮ ಅವಕಾಶ ಈಗ ದಕ್ಕಿದಂತಾಗಿದೆ.

Leave a Comment