ವಿದೇಶದಲ್ಲಿ ಮಾರ್ದನಿಸಿದ ದೈವದ ದನಿ: ಅಮೆರಿಕಾದಲ್ಲಿ ಇತಿಹಾಸ ಸೃಷ್ಟಿಸಲು ಸಜ್ಜಾದ ಕಾಂತಾರ

Written by Soma Shekar

Published on:

---Join Our Channel---

ದೇಶದೆಲ್ಲೆಡೆ ಪ್ರಚಂಡ ಯಶಸ್ಸಿನ ಸುನಾಮಿ ಯನ್ನು ಸೃಷ್ಟಿಸಿರುವ ಕಾಂತಾರ ಸಿನಿಮಾ ಈಗಾಗಲೇ ಇಲ್ಲಿ ದಾಖಲೆಗಳನ್ನು ಬರೆದಿದೆ. ಅದರ ಜೊತೆಗೆ ಮತ್ತಷ್ಟು ಹೊಸ ದಾಖಲೆಗಳನ್ನು ಬರೆಯಲು ಕಾಂತಾರ ಸಿನಿಮಾ ಮುನ್ನುಗ್ಗುತ್ತಿದೆ. ಈಗ ಇವೆಲ್ಲವುಗಳ ಬೆನ್ನಲ್ಲೇ ಕಾಂತಾರ ಹೊಸ ಮೈಲಿಗಲ್ಲನ್ನು ಸ್ಥಾಪನೆ ಮಾಡಿ ಅಬ್ಬರಿಸಿದೆ. ಹೌದು, ಈಗಾಗಲೇ ಕರ್ನಾಟಕದಲ್ಲಿ ಆರಂ‌ಭವಾದ ಕಾಂತಾರದ ಅಲೆಯು, ಡಬ್ಬಿಂಗ್ ಮೂಲಕ ಸುನಾಮಿಯಂತೆ ಅನ್ಯ ರಾಜ್ಯಗಳ ಬೆಳ್ಳಿ ತೆರೆಯ ಮೇಲೆ ಅಬ್ಬರಿಸಿ ಸಾಮಾನ್ಯ ಜನರು ಮಾತ್ರವೇ ಅಲ್ಲದೇ ಸಿನಿಮಾ ಸೆಲೆಬ್ರಿಟಿಗಳನ್ನು ಕೂಡಾ ದಂಗಾಗಿಸುವಂತೆ ಮಾಡಿದೆ. ಸಿನಿಮಾದ ಪ್ರಚಂಡ ಯಶಸ್ಸು ಕಂಡು ಇಡೀ ಭಾರತೀಯ ಚಿತ್ರರಂಗ ನಿಬ್ಬೆರಗಾಗಿದೆ.

ಕಾಂತಾರ ಈಗ ದೇಶದಲ್ಲಿ ಮಾತ್ರವೇ ಅಲ್ಲದೇ ವಿದೇಶಗಳಲ್ಲಿ ಕೂಡಾ ತನ್ನ ಪ್ರಾಬಲ್ಯವನ್ನು ಮೆರೆಯುತ್ತಿದೆ. ಕಾಂತಾರ ದೈವದ ಗಗ್ಗರ ದನಿ ಈಗ ವಿದೇಶಗಳಲ್ಲಿ ಸಹಾ ಮಾರ್ದನಿಸುತ್ತಿದ್ದು, ಕಾಂತಾರ ಈಗ ಅಮೆರಿಕಾದಲ್ಲೊಂದು ಹೊಸ ದಾಖಲೆಯನ್ನೇ ಬರೆದಿದೆ. ಹೌದು, ಅಮೆರಿಕಾದ ಬಾಕ್ಸಾಫೀಸಿನಲ್ಲಿ ಕಾಂತಾರ ಮಾಡಿರುವ ದಾಖಲೆ ಈಗ ಎಲ್ಲೆಡೆ ಸುದ್ದಿಯಾಗಿದೆ. ಕಾಂತಾರ ಸಿನಿಮಾ ಅಮೆರಿಕಾದಲ್ಲಿ ಒಂದು ಮಿಲಿಯನ್ ಡಾಲರ್ ಅಂದ್ರೆ ಸುಮಾರು ಎಂಟೂವರೆ ಕೋಟಿ ರೂಪಾಯಿಗಳ ಗಳಿಕೆಯನ್ನು ಕಂಡಿದೆ. ಅಮೆರಿಕಾದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಕನ್ನಡ ಸಿನಿಮಾ ಆಗಿ ಕಾಂತಾರ ಹೊರ ಹೊಮ್ಮಿದೆ.

ಇನ್ನೂ ಎರಡು ದಿನಗಳಲ್ಲಿ ಕಾಂತಾರ ಇನ್ನೊಂದು ಮಿಲಿಯನ್ ಡಾಲರ್ ಗಳ ಗಳಿಕೆಯನ್ನು ಮಾಡಲಿದೆ ಎನ್ನುವ ನಿರೀಕ್ಷೆ ಇದ್ದು, ಸಿನಿಮಾ ಅಮೆರಿಕಾದ ನೆಲದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಲು ಸಜ್ಜಾಗಿದೆ. ಇನ್ನು ನಮ್ಮ ಕರ್ನಾಟಕದ ವಿಚಾರಕ್ಕೆ ಬಂದರೆ ಕನ್ನಡ ನೆಲದಲ್ಲಿ ಕೆಜಿಎಫ್-2 ಸಿನಿಮಾ ಬರೆದ ದಾಖಲೆಯನ್ನು ಇನ್ನು ಕೆಲವೇ ದಿನಗಳಲ್ಲಿ ಮುರಿದು ಕಾಂತಾರ ಮತ್ತೊಂದು ಹೊಸ ದಾಖಲೆ ಬರೆಯಲಿದೆ. ಈಗ ಕನ್ನಡ ಸಿನಿಮಾ ರಂಗದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾಗಳಲ್ಲಿ ಮೊದಲ ಎರಡು ಸ್ಥಾನಗಳನ್ನು ಕೆಜಿಎಫ್-2 ಮತ್ತು ಕೆಜಿಎಫ್ 1 ಸಿನಿಮಾ ಗಳು ಪಡೆದುಕೊಂಡಿವೆ.

ಇನ್ನೂ ಕೆಲವೇ ದಿನಗಳಲ್ಲಿ ಕಾಂತಾರ ಕೆಜಿಎಫ್ ನ ಈ ದಾಖಲೆಯನ್ನು ಅಳಿಸಿ, ಹೊಸ ದಾಖಲೆಯನ್ನು ಬರೆದು ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಕೆಯನ್ನು ಕಂಡ ಸಿನಿಮಾಗಳಲ್ಲಿ ಮೊದಲನೇ ಸ್ಥಾನಕ್ಕೆ ಏರಲು ಸಜ್ಜಾಗಿದೆ‌. ಕಾಂತಾರ ಸಿನಿಮಾದ ಅಬ್ಬರಕ್ಕೆ ಇಡೀ ದೇಶವೇ ರೋಮಾಂಚನಗೊಂಡಿದೆ. ಸಿನಿ ಪ್ರೇಮಿಗಳು ಸಿನಿಮಾ ನೋಡಿ ರೋಮಾಂಚನಗೊಂಡಿದ್ದಾರೆ. ಕಾಂತಾರ ಸಿನಿಮಾ ನೋಡಿದ ಅನ್ಯ ಭಾಷಿಗರು ಸಹಾ ಇದೊಂದು ಅದ್ಭುತ ಅನುಭವ ಎಂದು ಹೇಳುತ್ತಿದ್ದಾರೆ. ಒಟ್ಟಾರೆ ಕಾಂತಾರದ ಮೋಡಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

Leave a Comment