ವಾಸ್ತು ಪ್ರಕಾರ ಲಾಫಿಂಗ್ ಬುದ್ಧನ ಮೂರ್ತಿ ನಮ್ಮ ನೂರು ಸಮಸ್ಯೆಗಳಿಗೆ ನೀಡುತ್ತೆ ಪರಿಹಾರ! ಏನಿದರ ಮಹತ್ವ??

Written by Soma Shekar

Published on:

---Join Our Channel---

ವಾಸ್ತು ಶಾಸ್ತ್ರದ ವಿಚಾರ ಬಂದಾಗ ಇಲ್ಲಿ ಫೆಂಗ್ ಶೂಯಿಗೆ ಕೂಡಾ ಬಹಳಷ್ಟು ಜನರು ಅಧಿಕ ಮಹತ್ವವನ್ನು ನೀಡುತ್ತಾರೆ. ಈ ವಾಸ್ತು ಕೂಡಾ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇನ್ನು ಇದರಲ್ಲಿ ಲಾಫಿಂಗ್ ಬುದ್ಧ ಮೂರ್ತಿಗೆ ವಿಶೇಷವಾದ ಮಹತ್ವವನ್ನು ನೀಡಲಾಗಿದೆ. ಈ ಮೂರ್ತಿಯನ್ನು ಸುಖ, ಶಾಂತಿ, ನೆಮ್ಮದಿ ಮತ್ತು ಸಮೃದ್ಧಿಯ ಸಂಕೇತವೆಂದು ನಂಬಲಾಗಿದೆ. ನಂಬಿಕೆಗಳ ಪ್ರಕಾರ ಲಾಫಿಂಗ್ ಬುದ್ಧನ ಮೂರ್ತಿ ಮನೆಯಲ್ಲಿ ಇದ್ದರೆ ಅದರಿಂದ ಅನೇಕ ಸಮಸ್ಯೆಗಳು ದೂರಾಗುತ್ತವೆ ಎಂದು ಹೇಳಲಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಪಾಂಡಿತ್ಯ ಪಡೆದವರು ಮನೆಯಲ್ಲಿ ಈ ಲಾಫಿಂಗ್ ಬುದ್ಧ ಮೂರ್ತಿ ಯನ್ನು ಇಡುವುದರಿಂದ ಆಗುವ ಲಾಭಗಳು ಅಥವಾ ಪ್ರಯೋಜನಗಳ ಬಗ್ಗೆ ಸಾಕಷ್ಟು ವಿಷಯಗಳನ್ನು ತಿಳಿಸಿದ್ದಾರೆ. ಅಲ್ಲದೇ ಅವುಗಳನ್ನು ನಿರ್ದಿಷ್ಟವಾದ ಸ್ಥಳದಲ್ಲಿ ಇಡುವುದರಿಂದ ಅದರಿಂದ ಶುಭ ಫಲಗಳು ಸಿಗುತ್ತವೆ ಎನ್ನಲಾಗಿದೆ. ಹಾಗಾದರೆ ಲಾಫಿಂಗ್ ಬುದ್ಧನ ಮೂರ್ತಿ ಇಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ ಬನ್ನಿ.

ಅಂಗಡಿ ಅಥವಾ ಕಛೇರಿಯಲ್ಲಿ ಎರಡೂ ಕೈ ಮೇಲೆ ಎತ್ತಿರುವ ಲಾಫಿಂಗ್ ಬುದ್ಧನ ಮೂರ್ತಿಯನ್ನು ಇಡುವುದರಿಂದ ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ದಿನಕಳೆದಂತೆ ನಿವಾರಣೆಯಾಗುವುದು. ಮನೆಯಲ್ಲಿ ನಕಾರಾತ್ಮಕ ಶಕ್ತಿಗಳನ್ನು ಓಡಿಸಲು ಡ್ರ್ಯಾಗನ್ ಮೇಲೆ ಕುಳಿತಿರುವ ಲಾಫಿಂಗ್ ಬುದ್ಧನ ಮೂರ್ತಿಯನ್ನು ಇಡಬೇಕು ಎನ್ನಲಾಗಿದೆ. ಕುಟುಂಬದ ಸದಸ್ಯರ ನಡುವೆ ಉತ್ತಮ ಬಾಂಧವ್ಯ ನೆಲೆಸಲು ಕೈಯಲ್ಲಿ ಬಟ್ಟಲು ಹಿಡಿದಿರುವ ಲಾಫಿಂಗ್ ಬುದ್ಧನ ಮೂರ್ತಿ ಇಡಬೇಕು.

ಜೀವನದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಬಯಸುವುದೇ ಆದರೆ ಮನೆಯಲ್ಲಿ ಇಡಲು ಧ್ಯಾನದಲ್ಲಿ ಇರುವ ಲಾಫಿಂಗ್ ಬುದ್ಧನ ಮೂರ್ತಿಯನ್ನು ತಂದು ಇಡಿ. ಇದು ಮನಸ್ಸಿನ ಒತ್ತಡವನ್ನು ಸಾಕಷ್ಟು ಕಡಿಮೆ ಮಾಡುತ್ತದೆ ಎನ್ನಲಾಗಿದೆ. ಈ ಮೂರ್ತಿಯನ್ನು ಅದ್ಯಯನ ಕೊಠಡಿ, ಮಲಗುವ ಕೋಣೆ ಮತ್ತು ಪ್ರಾರ್ಥನಾ ಮಂದಿರದಲ್ಲಿ ಇಡಬಹುದಾಗಿದೆ. ಬೆನ್ನ ಮೇಲೆ ಚೀಲವನ್ನು ಹೊತ್ತಿರುವ ಲಾಫಿಂಗ್ ಬುದ್ಧನ ಮೂರ್ತಿ ಅದೃಷ್ಟ ಮತ್ತು ಸಂಪತ್ತಿನ ಪ್ರತೀಕ ಎನ್ನಲಾಗಿದೆ.

ವಾಸ್ತು ಶಾಸ್ತ್ರದ ಪ್ರಕಾರ ಲಾಫಿಂಗ್ ಬುದ್ಧನ ಮೂರ್ತಿಯನ್ನು ಮನೆಯಲ್ಲಿ ಪೂರ್ವ ದಿಕ್ಕಿನಲ್ಲಿ ಇಡುವುದು ಉತ್ತಮ ಎನ್ನಲಾಗಿದೆ. ಇನ್ನು ಕಛೇರಿಯಲ್ಲಿ ಇಡುವುದಾದರೆ ನಿಮ್ಮ ಡೆಸ್ಕ್ ಅಥವಾ ಟೇಬಲ್ ನ ಮೇಲೆ ಅದನ್ನು ಇಟ್ಟುಕೊಳ್ಳುವುದರಿಂದ ಉತ್ತಮ ಫಲಿತಾಂಶಗಳು ಸಿಗುತ್ತವೆ ಎಂದು ಹೇಳಲಾಗಿದೆ. ನಂಬಿಕೆಯ ಮೇಲೆ ನಿಂತಿರುವ ಈ ವಿಚಾರದಲ್ಲಿ ಅನೇಕರು ಇದನ್ನು ಆಚರಣೆಗೆ ತಂದಿದ್ದಾರೆ ಎನ್ನುವುದು ಸಹಾ ವಾಸ್ತವ.

Leave a Comment