ಲೌಡ್ ಸ್ಪೀಕರ್ ನಲ್ಲಿ ಅಜಾನ್: ಮುಂಬೈನ ಇಸ್ಲಾಂ ಧಾರ್ಮಿಕ ಮುಖಂಡರ ಸಂಚಲನ ನಿರ್ಣಯ, ಹರಿದು ಬಂತು ವ್ಯಾಪಕ ಮೆಚ್ಚುಗೆ

Written by Soma Shekar

Published on:

---Join Our Channel---

ದೇಶದ ಹಲವು ಭಾಗಗಳಲ್ಲಿ ಲೌಡ್ ಸ್ಪೀಕರ್ ಗಳ ಮೂಲಕ ಇಸ್ಲಾಂ ಧರ್ಮವರು ಅಜಾನ್ ಕೂಗುವ ವಿಷಯದ ಕುರಿತಾಗಿ ಸಾಕಷ್ಟು ಚರ್ಚೆಗಳು ವಿಮರ್ಶೆಗಳು ನಡೆಯುತ್ತಿದೆ. ಅಲ್ಲದೇ ಈ ವಿಚಾರವು ಈಗಾಗಲೇ ಕೆಲವು ರಾಜ್ಯಗಳಲ್ಲಿ ದೊಡ್ಡ ಮಟ್ಟದ ವಿ ವಾ ದಗಳನ್ನು ಸಹ ಹುಟ್ಟು ಹಾಕಿದೆ. ಈಗ ಇವೆಲ್ಲವುಗಳ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಮುಸ್ಲಿಂ ಧರ್ಮದ ಧಾರ್ಮಿಕ ಹಿರಿಯರು ಒಂದು ಮಹತ್ವದ ನಿರ್ಣಯವನ್ನು ತೆಗೆದುಕೊಂಡಿದ್ದಾರೆ. ಅವರು ತೆಗೆದುಕೊಂಡಿರುವ ಸಂಚಲನ ನಿರ್ಣಯದ ವಿಚಾರವಾಗಿ ಸಾಕಷ್ಟು ಮೆಚ್ಚುಗೆಗಳು ಹರಿದುಬರುತ್ತಿದೆ.

ಮಹಾರಾಷ್ಟ್ರದ ಇಸ್ಲಾಂ ಧಾರ್ಮಿಕ ಹಿರಿಯರು ಒಂದು ಮಹತ್ವದ ನಿರ್ಣಯವನ್ನು ಮಾಡಿದ್ದು, ಅದರ ಅನುಸಾರವಾಗಿ ಇನ್ನು ಮುಂದೆ ದಕ್ಷಿಣ ಮುಂಬೈನಲ್ಲಿ ಯಾವುದೇ ಮಸೀದಿಗಳಲ್ಲೂ ಮುಂಜಾನೆಯ ವೇಳೆಯಲ್ಲಿ ಲೌಡ್ ಸ್ಪೀಕರ್ ಬಳಕೆ ಮಾಡಬಾರದು ಎಂದು ನಿರ್ಧಾರವನ್ನು ಮಾಡಿದ್ದಾರೆ. ಮುಂಬೈನ ಮಹಮ್ಮದ್ ಅಲಿ ರೋಡ್, ಮದನ್ ಪುರ, ನಾಗ್ಪಡ, ಹಾಗೂ ಮುಸ್ಲಿಮರು ಅಧಿಕವಾಗಿ ಇರುವಂತಹ ಪ್ರದೇಶಗಳ 26 ಮಸೀದಿಗಳ ಧಾರ್ಮಿಕ ಹಿರಿಯರು ಸುನ್ನಿ ಬಡಿ ಮಸೀದಿಯಲ್ಲಿ ಸಮಾವೇಶಗೊಂಡು ಈ ವಿಷಯವಾಗಿ ಒಮ್ಮತದ ನಿರ್ಣಯವನ್ನು ಕೈಗೊಂಡಿದ್ದಾರೆ.

ಮುಂಜಾನೆ ಅಜಾನ್ ಅನ್ನು ಲೌಡ್ ಸ್ಪೀಕರ್ ಗಳ ಮೂಲಕ ಪಠಿಸುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಎಲ್ಲಾ ಮಸೀದಿಗಳಲ್ಲೂ ಸಹಾ ಸುಪ್ರೀಂಕೋರ್ಟ್ ನೀಡಿರುವ ಸೂಚನೆಯನ್ನು ಅನುಸರಿಸಲು ಮುಂದಾಗಿದ್ದಾರೆ. ರಾತ್ರಿ 10 ಗಂಟೆಯಿಂದ ಮುಂಜಾನೆ 6 ಗಂಟೆಯವರೆಗೂ ಅಜಾನ್ ಕೂಗಲು ಲೌಡ್ ಸ್ಪೀಕರ್ ಗಳನ್ನು ಬಳಕೆ ಮಾಡುವುದಿಲ್ಲ ಎನ್ನುವ ಸಂಚಲನ ನಿರ್ಣಯವನ್ನು ಮಾಡಿದ್ದಾರೆ. ಈ ವಿಷಯ ಇದೀಗ ಸುದ್ದಿಯಾಗಿದ್ದು ಎಲ್ಲರ ಗಮನವನ್ನು ಸೆಳೆಯುತ್ತಿದೆ.

Leave a Comment