ಲುಂಗಿ ಉಟ್ಟು ಬಂದ ಅಂತ ಸಿನಿಮಾಕ್ಕೆ ಟಿಕೆಟ್ ಕೊಡಲಿಲ್ಲ: ಮುಂದೆ ನಡೀತು ಮೈಂಡ್ ಬ್ಲ್ಯಾಂಕ್ ಆಗೋ ಸೀನ್!!

Written by Soma Shekar

Published on:

---Join Our Channel---

ದಕ್ಷಿಣದ ರಾಜ್ಯಗಳಲ್ಲಿ ಲುಂಗಿ ಮತ್ತು ಪಂಚೆ ಯನ್ನು ಉಡುವುದು ಒಂದು ಸಾಮಾನ್ಯವಾದ ಅಭ್ಯಾಸವಾಗಿದೆ. ಅದರಲ್ಲೂ ಸಾಂಪ್ರದಾಯಿಕ ಉಡುಗೆ ಎಂದು ಬಂದಾಗ ಇಲ್ಲಿ ಮೊದಲ ಆದ್ಯತೆ ಪಂಚೆ. ದಕ್ಷಿಣದ ನಾಲ್ಕು ರಾಜ್ಯಗಳಲ್ಲಿ ಕೂಡಾ ಲುಂಗಿ ಮತ್ತು ಪಂಚೆ ಧರಿಸುವವರ ಸಂಖ್ಯೆ ಹೆಚ್ಚಾಗಿಯೇ ಇದೆ. ಕೇರಳದಲ್ಲಂತೂ ನಮಗೆ ಪಂಚೆ ಉಡುವವರೇ ಹೆಚ್ಚಾಗಿ ಕಾಣುತ್ತಾರೆ. ಇನ್ನು ದಕ್ಷಿಣದ ರಾಜ್ಯಗಳಲ್ಲಿ ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗಗಳಲ್ಲಿ ಲುಂಗಿ ಉಡುವವರ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಮುಖ್ಯವಾಗಿ ಹೊಲ ಗದ್ದೆಗಳಲ್ಲಿ ಕೆಲಸ ಮಾಡುವವರ ಲುಂಗಿಯನ್ನು ಹೆಚ್ಚಾಗಿ ಬಳಸುವುದನ್ನು ನಾವು ಗಮನಿಸಿಯೇ ಇರುತ್ತೇವೆ.

ಹೀಗೆ ದೈನಂದಿನ ಜೀವನದಲ್ಲಿ ಒಂದು ಸಾಮಾನ್ಯ ಉಡುಗೆಯಾಗಿರುವ ಲುಂಗಿಯನ್ನು ತೊಟ್ಟು ಬಂದ ಎಂಬ ಕಾರಣಕ್ಕೆ ಸಿನಿಮಾ ಥಿಯೇಟರ್ ನಲ್ಲಿ ಟಿಕೆಟ್ ಕೊಡದೇ ಕಳುಹಿಸಿರುವ ವಿಲಕ್ಷಣ ಘಟನೆಯೊಂದು ನಡೆದಿದ್ದು, ಈಗ ಈ ಘಟನೆ ದೊಡ್ಡ ಸುದ್ದಿಯಾಗಿದೆ. ಆದರೆ ಈ ಘಟನೆ ನಡೆದಿರುವುದು ನಮ್ಮ ದೇಶದಲ್ಲಿ ಅಲ್ಲ, ನೆರೆಯ ಬಾಂಗ್ಲಾದೇಶದಲ್ಲಿ. ಅದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಜನರು ಇದಕ್ಕೆ ದೊಡ್ಡ ಸಂಖ್ಯೆಯಲ್ಲಿ ಪ್ರತಿಕ್ರಿಯೆ ನೀಡಿರುವುದು ಮಾತ್ರವೇ ಅಲ್ಲದೇ ವಿನೂತನ ಪ್ರತಿಭಟನೆ ನಡೆಸಿದ್ದಾರೆ.

ಲುಂಗಿ ಕಟ್ಟಿಕೊಂಡು ಸಿನಿಮಾ ಥಿಯೇಟರ್ ಗೆ ಬಂದ ಎನ್ನುವ ಕಾರಣಕ್ಕೆ, ಆಗಸ್ಟ್ 6 ರಂದು ಮನ್ ಅಲಿ ಸರ್ಕಾರ್ ಎನ್ನುವ ವ್ಯಕ್ತಿ ಸ್ಟಾರ್ ಮಲ್ಟಿಪ್ಲೆಕ್ಸ್ ನಲ್ಲಿ ಪೋರನ್ ಎನ್ನುವ ಸಿನಿಮಾ ನೋಡಲು ಹೋಗಿದ್ದಾರೆ. ಆದರೆ ಅವರು ಲುಂಗಿ ಧರಿಸಿದ್ದಾರೆ ಎನ್ನುವ ಕಾರಣಕ್ಕೆ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಣೆಗೆ ಟಿಕೆಟ್ ನೀಡಲು ನಿರಾಕರಿಸಲಾಗಿದೆ. ಈ ಘಟನೆಯ ನಂತರ ದೊಡ್ಡ ವಿ ವಾ ದಕ್ಕೆ ಇದು ಕಾರಣವಾಗಿದೆ. ದೊಡ್ಡ ಸಂಖ್ಯೆಯಲ್ಲಿ ಜನರು ಲುಂಗಿ ಕಟ್ಟಿಕೊಂಡು ಥಿಯೇಟರ್ ಕಡೆಗೆ ಹೆಜ್ಜೆ ಹಾಕಿದ್ದಾರೆ. ವಿಷಯ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಕೂಡಲೇ ಚಿತ್ರ ಮಂದಿರದ ಕಡೆಯಿಂದ ಇದಕ್ಕೆ ಸ್ಪಷ್ಟನೆ ಸಹಾ ಹೊರ ಬಂದಿದೆ.

ಥಿಯೇಟರ್ ಆಡಳಿತ ವರ್ಗವು, ಆ ವ್ಯಕ್ತಿಯು ತಪ್ಪಾಗಿ ಅರ್ಥ ಮಾಡಿಕೊಂಡ ಕಾರಣ ಇಷ್ಟೆಲ್ಲಾ ಗೊಂದಲಕ್ಕೆ ಕಾರಣವಾಗಿದೆ. ನಮ್ಮ ಥಿಯೇಟರ್ ನಲ್ಲಿ ವಸ್ತ್ರದ ಆಧಾರದಲ್ಲಿ ತಾರತಮ್ಯ ಮಾಡುವುದಿಲ್ಲ ಎಂದು ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದೆ. ಅಲ್ಲದೇ ಆ ವ್ಯಕ್ತಿಯ ಇಡೀ ಕುಟುಂಬಕ್ಕೆ ಥಿಯೇಟರ್‌ ಗೆ ಆಹ್ವಾನ ನೀಡಿ ಸಿನಿಮಾ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದು,
ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡಲಾಗಿದ್ದು ಣ ಇನ್ನೊಂದು ಟ್ವಿಸ್ಟ್ ಏನಪ್ಪಾ ಅಂದ್ರೆ, ‘ಪೋರನ್’ ಸಿನಿಮಾದ ನಟರಲ್ಲಿ ಒಬ್ಬರಾದ ಸರಿಫುಲ್ ರಾಜ್ ಅವರೊಂದಿಗೆ ಆ ವ್ಯಕ್ತಿ ಸಿನಿಮಾ ವೀಕ್ಷಿಸಿದ್ದಾರೆ.

Leave a Comment