ಲವ್, ಡೇಟ್ ವಿಚಾರಕ್ಕೆ ಸಿಡಿದೆದ್ದ ರಶ್ಮಿಕಾ: ಸೈಲೆಂಟ್ ಆಗಿದ್ದ ನಟಿ, ವೈಲೆಂಟ್ ಆಗಿದ್ದು ಕಂಡು ಬೆಚ್ಚಿ ಬಿದ್ದ ಇಂಡಸ್ಟ್ರಿ

Written by Soma Shekar

Published on:

---Join Our Channel---

ಇತ್ತೀಚಿನ ದಿನಗಳಲ್ಲಿ ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ವಿಜಯ ದೇವರಕೊಂಡ ಮತ್ತು ರಶ್ಮಿಕಾ ನಡುವೆ ಪ್ರೇಮ ಅರಳಿತ್ತು, ಆದರೆ ಅನಂತರ ಅವರ ನಡುವೆ ಬ್ರೇಕಪ್ ಆಗಿದ್ದು, ಅವರಿಬ್ಬರೂ ಈಗ ಕೇವಲ ಸ್ನೇಹಿತರಂತೆ ಇದ್ದಾರೆ ಎನ್ನುವ ಸುದ್ದಿಗಳು ಹರಿದಾಡುವ ಮೂಲಕ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದವು. ಆದರೆ ಈ ವಿಚಾರವಾಗಿ ನಟಿ ರಶ್ಮಿಕಾ ಮಂದಣ್ಣ ಅಷ್ಟಾಗಿ ಪ್ರತಿಕ್ರಿಯೆ ನೀಡಿರಲಿಲ್ಲ. ಬಾಲಿವುಡ್ ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿಯು ಇದೀಗ ಮೊಟ್ಟ ಮೊದಲ ಬಾರಿಗೆ ಈ ವಿಚಾರವಾಗಿ ಅಸಮಾಧಾನಗೊಂಡು ಸಂದರ್ಶನವೊಂದರಲ್ಲಿ ತಮ್ಮ ಸಿಟ್ಟನ್ನು ವ್ಯಕ್ತಪಡಿಸಿದ್ದಾರೆ.

ರಶ್ಮಿಕ ಮಾತನಾಡುತ್ತಾ, ನಾನು ವರ್ಷಕ್ಕೆ ಐದು ಸಿನಿಮಾಗಳನ್ನು ಮಾಡುತ್ತೇನೆ, ಆದರೆ ನಿಮಗೆಲ್ಲ ನಾನು ಯಾರ ಜೊತೆ ಡೇಟ್ ಮಾಡುತ್ತೇನೆ? ನನ್ನ ವೈಯಕ್ತಿಕ ಜೀವನ ಹೇಗಿದೆ ? ಎನ್ನುವ ಕಡೆ ಆಸಕ್ತಿ ಇದೆ. ನಾವು ಕಲಾವಿದರು, ನಮ್ಮ ಮೇಲೆ ಎಲ್ಲರ ಗಮನ ಇರುತ್ತದೆ. ನನ್ನ ಬಗ್ಗೆ ತಿಳಿದುಕೊಳ್ಳಲು ಎಲ್ಲರಿಗೂ ಕುತೂಹಲ ಇರುತ್ತದೆ ಎನ್ನುವುದು ನನಗೆ ಗೊತ್ತಿದೆ. ನನ್ನ ವೃತ್ತಿಜೀವನ ಪ್ರಾರಂಭವಾದಾಗಿನಿಂದಲೂ ಇದೇ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ. ಅವಳು ಇವನ ಜೊತೆ ಇದ್ದಾಳೆ, ಅವಳು ಅವನು ಜೊತೆ ಕಾಣಿಸಿಕೊಂಡಳು ಎನ್ನುವ ಮಾತುಗಳು ಕೇಳಿ ಬರುತ್ತವೆ.

ನಾವು ಪಬ್ಲಿಕ್ ಫಿಗರ್ಸ್, ನಮ್ಮ ಬಗ್ಗೆ ನೀವು ಮಾತನಾಡಬಹುದು, ನೆಗೆಟಿವ್ ಮಾತನಾಡಿ. ಆದರೆ ಕೆಲವರು ನಮ್ಮ ವೃತ್ತಿಜೀವನದ ಬಗ್ಗೆ ಏನೂ ಮಾತನಾಡುವುದಿಲ್ಲ, ಆದರೆ ಅದನ್ನು ಬಿಟ್ಟು ಉಳಿದ ಎಲ್ಲವನ್ನೂ ಮಾತನಾಡುತ್ತಾರೆ. ನೀವು ನಮ್ಮ ಬಗ್ಗೆ ಮಾತನಾಡುತ್ತೀರಿ, ಮಾತನಾಡಿ ಆದರೆ ನಾನು ಹೇಳುವ ತನಕ ಜಡ್ಜ್ ಮೆಂಟ್ ಮಾಡಬೇಡಿ ಎನ್ನುವ ಮಾತುಗಳನ್ನು ಹೇಳುವ ಮೂಲಕ ಪರೋಕ್ಷವಾಗಿ ರಶ್ಮಿಕ ಮಂದಣ್ಣ ತಮ್ಮ ಹಾಗೂ ವಿಜಯ್ ದೇವರಕೊಂಡ ಕುರಿತಾಗಿ ಹರಿದಾಡುತ್ತಿರುವ ವಿಷಯಗಳ ಬಗ್ಗೆ ಮೊದಲ ಬಾರಿಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಗೀತಾ ಗೋವಿಂದಂ ಸಿನಿಮಾದಲ್ಲಿ ರಶ್ಮಿಕಾ ಹಾಗೂ ವಿಜಯ ದೇವರಕೊಂಡ ಜೋಡಿಯಾಗಿ ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡರು. ಈ ಸಿನಿಮಾದಲ್ಲಿ ಇವರ ನಡುವಿನ ಕೆಮಿಸ್ಟ್ರಿ ಗೆ ಅಭಿಮಾನಿಗಳು ಫಿದಾ ಆಗಿದ್ದರು. ಅನಂತರ ಡಿಯರ್ ಕಾಮ್ರೇಡ್ ಸಿನಿಮಾದಲ್ಲಿ ಮತ್ತೊಮ್ಮೆ ಈ ಜೋಡಿ ಪ್ರೇಕ್ಷಕರ ಮೇಲೆ ಜಾದೂ ಮಾಡಿತ್ತು. ಇನ್ನು ಇವರಿಬ್ಬರ ನಡುವಿನ ಸ್ನೇಹ, ಆತ್ಮೀಯತೆ ಕಂಡು ಸಹಜವಾಗಿಯೇ ಇಬ್ಬರ ನಡುವೆ ಏನೋ ಇದೆ ಎನ್ನುವುದು ಸುದ್ದಿಗಳಾದವು. ಆದರೆ ರಶ್ಮಿಕಾ ಮತ್ತು ವಿಜಯ ದೇವರಕೊಂಡ ಅದರ ಬಗ್ಗೆ ಹೆಚ್ಚು ಮಾತನಾಡಲಿಲ್ಲ. ಆದರೆ ಕಾಫಿ ವಿತ್ ಕರಣ್ ಶೋ ನಲ್ಲಿ ವಿಜಯ್ ದೇವರಕೊಂಡ ಭಾಗವಹಿಸಿದ ನಂತರ ಇವರ ಸುದ್ದಿ ಮತ್ತೊಮ್ಮೆ ಸದ್ದು ಮಾಡುತ್ತಿದೆ.

Leave a Comment