ತುಳು ಜನ ಹೆಣ್ಣನ್ನು ಗೌರವಿಸುತ್ತಾರೆ: ಸಾನ್ಯಾ ಜೊತೆಗಿನ ಆ ಘಟನೆಗೆ ರೂಪೇಶ್ ಶೆಟ್ಟಿ ಕೊಟ್ಟ ಕ್ಲಾರಿಟಿ

Written by Soma Shekar

Published on:

---Join Our Channel---

ಕನ್ನಡ ಬಿಗ್ ಬಾಸ್ ಸೀಸನ್(Kannada Big Boss) ಒಂಬತ್ತು ಮುಗಿದಾಗಿದೆ. ರೂಪೇಶ್ ಶೆಟ್ಟಿ(Roopesh Shetty) ವಿನ್ನರ್ ಆಗಿದ್ದಾರೆ. ಓಟಿಟಿಯಿಂದ ಟಿವಿ ಬಿಗ್ ಬಾಸ್ ವರೆಗೂ ಸಕ್ಸಸ್ ಫುಲ್ ಜರ್ನಿ ಮಾಡಿದ ರೂಪೇಶ್ ಶೆಟ್ಟಿ ಅವರ ಬಿಗ್ ಬಾಸ್ ಆಟದಲ್ಲಿ ಒಮ್ಮೆ ಕ್ಯಾಪ್ಟನ್ ರೂಮಿನಲ್ಲಿ ಆರ್ಯವರ್ಧನ್ ಗುರೂಜಿ (Aryavardhan Guruji), ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಅಯ್ಯರ್(Sanya Iyyer) ಬೆಡ್ ಮೇಲೆ ಮಲಗಿ ಮಾತನಾಡಿದ ವಿಷಯ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಶೋ ನಿರೂಪಕ ಕಿಚ್ಚ ಸುದೀಪ್ ಅವರು ಖಾರವಾಗಿಯೇ ಇದಕ್ಕೆ ಪ್ರತಿಕ್ರಿಯೆ ನೀಡಿ ರೂಪೇಶ್ ಶೆಟ್ಟಿಗೆ ಬುದ್ಧಿ ಮಾತನ್ನು ಹೇಳಿ ಎಚ್ಚರಿಕೆಯನ್ನು ಸಹಾ ನೀಡಿದ್ದರು.

ಈಗ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ರೂಪೇಶ್ ಶೆಟ್ಟಿ(Roopesh Shetty) ಈ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದಾರೆ. ಈ ಘಟನೆ ನಡೆದಿದ್ದು ಮೂರನೇ ವಾರದಲ್ಲಿ. ಓಟಿಟಿಗೆ ಕಾಲಿಟ್ಟಾಗ ಮನೆಯಲ್ಲಿ ಕ್ಯಾಮೆರಾಗಳಿದೆ ಎಂದು ಮೊದಲ ಎರಡು ವಾರ ಕಾನ್ಷಿಯಸ್ ಆಗಿರುತ್ತೇವೆ. ಹೊರಗೆ ಜನ ನೋಡಿರ್ತಾರೆ ಅಂತ ತಲೆಯಲ್ಲಿ ಇರುತ್ತದೆ. ಹೊಸ ದಿನ ಆರಂಭವಾದಾಗ, ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆಗೆ ಹೊಂದಿಕೊಂಡ ಮೇಲೆ ಹೊರಗಡೆ ಪ್ರಪಂಚದ ಬಗ್ಗೆ ಮರೆತು ಬಿಡ್ತೀವಿ. ಜನ ನೋಡ್ತಾ ಇದ್ದಾರೆ ಅನ್ನೋದನ್ನು ಮರೆತು ಬಿಡ್ತೀವಿ ಎಂದು ಸಂದರ್ಶನದಲ್ಲಿ ರೂಪೇಶ್ ಶೆಟ್ಟಿ ಹೇಳಿದ್ದಾರೆ.

ಸುದೀಪ್ ಸರ್(Kichcha Sudeep) ಆ ವಿಚಾರವನ್ನು ಹೇಳಿದಾಗ ಶಾ ಕ್ ಆಗಿತ್ತು. ಟಾಸ್ಕ್ ಸಮಯದಲ್ಲಿ ಬ್ಲೈಂಡ್ ಕ್ಲೋಸ್ ಆದಾಗ ಮಾತ್ರ ಕ್ಯಾಪ್ಟನ್ ರೂಮ್ ಬಾತ್ ರೂಮ್ ಬಳಸಬಹುದು. ಅಲ್ಲಿ ನಾವು ಬೆಡ್ ಬಳಸಿದ್ದು ತಪ್ಪು. ಸುದೀಪ್ ಸರ್ ಯಾಕೆ ಖಾರವಾಗಿ ಯಾಕೆ ಹೇಳಿದ್ರು ಎಂದರೆ ನನ್ನ ಫೋಕಸ್ ಆ ಕಡೆ ಇರಬೇಕು ಎಂದು. ನಾನು ಎಮೋಷನಲ್ ಪರ್ಸನ್ ಆಗಿರೋದ್ರಿಂದ ಏನೇನೋ ಆಲೋಚನೆ ಮಾಡುತ್ತೇನೆ. ನಾನು ತುಳು ಬೆಲ್ಟ್ ನಿಂದ ಬಂದವನು. ಅಲ್ಲಿ ಜನರು ಸಂಪ್ರದಾಯ ಆಚರಣೆಗೆ ಎಷ್ಟು ಬೆಲೆ ಕೊಡುತ್ತಾರೆಂದು ನಿಮಗೆ ತಿಳಿದಿದೆ.

ರೂಪೇಶ್ ಅಲ್ಲ, ರಾಕೇಶ್ ಗೆಲ್ಲಬೇಕಿತ್ತು: ಬಿಗ್ ಬಾಸ್ ಮುಗಿದ ಮೇಲೆ ಹೊರ ಬಿದ್ದ ನೆಟ್ಟಿಗರ ಅಸಮಾಧಾನ

ಅಲ್ಲದೇ ನಾವು ಹುಡುಗಿಯರನ್ನು ಬಹಳ ಗೌರವದಿಂದ ನೋಡುತ್ತೇವೆ. ಆಕೆ ನನ್ನ ಕ್ಲೋಸ್ ಫ್ರೆಂಡ್ ಆಗಿರುವ ಕಾರಣ ನಾವು ಫ್ರೆಂಡ್ಲಿಯಾಗಿ ವರ್ತಿಸುತ್ತಿದ್ದೆವು. ಸರ್ ಆ ವಿಚಾರ ಹೇಳಿದಾಗ ಶಾ ಕ್ ಆಯ್ತು. ಗುರೂಜಿ(Guruji) ಮತ್ತು ನಾವು ಅಲ್ಲಿ ಮಾತಾಡುತ್ತಿದ್ದೆವು ಅಷ್ಟೇ ಎಂದು ರೂಪೇಶ್ ಶೆಟ್ಟಿ ಅಂದಿನ ಘಟನೆಗೆ ಈಗ ಕ್ಲಾರಿಟಿಯನ್ನು ನೀಡಿದ್ದಾರೆ. ಅಲ್ಲದೇ ಮಂಗಳೂರಿನಿಂದ ಬಂದಿರುವುದರಿಂದ ಅಲ್ಲಿನ ಜನ ಹೆಮ್ಮೆ ಪಟ್ಟಿರುತ್ತಾರೆ. ಆದರೆ ಈ ಘಟನೆಯಿಂದ ಮಂಗಳೂರಿಗೆ ಕೆಟ್ಟ ಹೆಸರು ಬಂದಿದ್ಯಾ? ಎನ್ನುವ ಆಲೋಚನೆ ಮೂಡಿತ್ತು ಎಂದಿದ್ದಾರೆ ರೂಪೇಶ್ ಶೆಟ್ಟಿ.

ಆ ಘಟನೆ ಮನಸ್ಸನ್ನು ಮುಟ್ಟಿದ್ದರಿಂದ ನಾನು ಭಾವುಕನಾದೆ. ಯಾರಿಗೂ ತೊಂದರೆ ನೀಡದೇ, ಯಾರ ಭಾವನೆಗೂ ನೋವು ಮಾಡದೇ ಒಳ್ಳೆಯ ವ್ಯಕ್ತಿಯಾಗಿರಬೇಕು ಎನ್ನುವುದು ನನ್ನ ಪಾಲಿಸಿ. ಇಷ್ಟು ವರ್ಷ ಬದುಕಿದ್ದ ರೀತಿಗೆ ಆ ಘಟನೆ ಕಪ್ಪು ಚುಕ್ಕಿ ಆಗುತ್ತಾ ಎನ್ನುವ ನೋವಿತ್ತು. ಅದರಿಂದಲೇ ನಾನು ಮನೆಯಿಂದ ಹೊರಗೆ ಹೋಗಲು ರೆಡಿಯಾಗಿದ್ದೆ, ನನ್ನಿಂದ ಆ ಮನೆಗೆ ಅ ವ ಮಾನ ಆಗಬಾರದು ಎನ್ನುವ ಆಲೋಚನೆ ಇತ್ತು. ಸುದೀಪ್ ಸರ್ ಅವರು ಮಾತನಾಡಿ ಎಲ್ಲವನ್ನೂ ಅರ್ಥ ಮಾಡಿಸಿದರು ಎಂದು ಸಹಾ ರೂಪೇಶ್ ಶೆಟ್ಟಿ(Roopesh Shetty) ಹೇಳಿದ್ದಾರೆ.

Leave a Comment