ರೂಪೇಶ್ ರಾಜಣ್ಣ ಬಳಿ ನಿಗೂಢ ಪ್ರಶ್ನೆ ಕೇಳಿದ ಅಮ್ಮು: ರಾಜಣ್ಣ ಅದಕ್ಕೆ ಕೊಟ್ರು ಶಾಕಿಂಗ್ ರಿಪ್ಲೈ

Written by Soma Shekar

Published on:

---Join Our Channel---

ಬಿಗ್ ಬಾಸ್ ಕನ್ನಡ(Kannada Big Boss) ಸೀಸನ್ ಒಂಬತ್ತರ ಆಟ ಕೊನೆಯ ಘಟ್ಟಕ್ಕೆ ಬಂದು ತಲುಪುತ್ತಿದೆ. ಅಲ್ಲದೇ ಫಿನಾಲೇ ವಾರಕ್ಕೆ ಇನ್ನು ಕೆಲವೇ ದಿನಗಳು ಉಳಿದಿವೆ. ಬಿಗ್ ಬಾಸ್ ಮನೆಯಲ್ಲಿ ಈಗ ಎಂಟು ಜನರು ಮಾತ್ರವೇ ಉಳಿದಿದ್ದಾರೆ. ಅಲ್ಲದೇ ಈ ವಾರ ಬಿಗ್ ಬಾಸ್ (Kannda Big Boss) ಮನೆಯಲ್ಲಿ ಇರುವ ಎಲ್ಲಾ ಎಂಟು ಜನರನ್ನು ಸಹಾ ನೇರವಾಗಿ ನಾಮಿನೇಟ್ ಮಾಡಿದ್ದು ಈ ವಾರ ಮನೆಯಿಂದ ಯಾರು ಹೊರಗೆ ಬರಲಿದ್ದಾರೆ ಎನ್ನುವ ಕುತೂಹಲ ಸಹಾ ಎಲ್ಲರಲ್ಲೂ ಮೂಡಿದೆ. ಅಲ್ಲದೇ ಈ ವಾರ ಡಬಲ್ ಎಲಿಮಿನೇಷನ್ ಕೂಡಾ ಇರಬಹುದು ಎನ್ನುವ ಮಾತು ಕೇಳಿ ಬರುತ್ತಿದೆ. ಇನ್ನು ಈ ವಾರ ಬಿಗ್ ಬಾಸ್ ಮನೆಯಲ್ಲಿ ಹಾಸ್ಯ, ನಗು, ತಮಾಷೆ ಎಲ್ಲವೂ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆಯನ್ನು ನೀಡುತ್ತಿದೆ.

ಇನ್ನು ಈಗ ವಾಹಿನಿ ಹಂಚಿಕೊಂಡ ಹೊಸ ಪ್ರೋಮೋದಲ್ಲಿ ಅಮೂಲ್ಯ ಗೌಡ(Amulya Gowda) ಅವರು ರೂಪೇಶ್ ರಾಜಣ್ಣ (Roopesh Rajanna) ಜೊತೆಗೆ ಕುಳಿತು ಮಾತನಾಡಿರುವ ಪ್ರೋಮೋ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಅಮೂಲ್ಯ ಗೌಡ, ರೂಪೇಶ್ ರಾಜಣ್ಣ ಅವರನ್ನು ಕೇಳಿದ ಪ್ರಶ್ನೆ ರಾಜಣ್ಣಗೆ ಸಹಾ ಶಾ ಕ್ ನೀಡಿದೆ. ಇಷ್ಟಕ್ಕೂ ಅಮೂಲ್ಯ ಕೇಳಿದ ಪ್ರಶ್ನೆ ಏನು ಅಂತೀರಾ? ಬನ್ನಿ ಅದನ್ನೇ ನಾವೀಗ ಹೇಳುತ್ತೇವೆ. ಅಮೂಲ್ಯ ಮಾಡಿದ ಫನ್ ನಿಜಕ್ಕೂ ರಾಜಣ್ಣ ನಿರೀಕ್ಷೆ ಮಾಡಿರಲಿಲ್ಲ ಎನ್ನುವುದು ಸಹಾ ವಾಸ್ತವ. ಮನೆಯಲ್ಲಿ ದಿವ್ಯ ಉರುಡುಗ, ರಾಕೇಶ್ ಅಡಿಗ, ದಿವ್ಯ ಮತ್ತು ರೂಪೇಶ್ ರಾಜಣ್ಣ ಕುಳಿತಿದ್ದರು.

ಈ ವೇಳೆ ಅಮೂಲ್ಯ(Amulya) ರೂಪೇಶ್ ರಾಜಣ್ಣ
(Roopesh Rajanna) ಅವರ ಬಳಿ, ಇದು ತಮಾಷೆ ಅಲ್ಲ, ಸೀರಿಯಸ್ ಅಂತ ಹೇಳಿ, ತನ್ನ ಲೈಫ್ ನಲ್ಲಿ ಉತ್ತರ ಸಿಗದೇ ಇರೋ ಪ್ರಶ್ನೆ ಒಂದಿದೆ. ಅದನ್ನು ಬಿಗ್ ಬಾಸ್ ನಲ್ಲಿ ಕೇಳಬಾರದು ಅನ್ಕೊಂಡಿದ್ದೆ. ಆದರೆ ಈಗ ಇಲ್ಲಿ ಇರೋರೆಲ್ಲಾ ನಮ್ಮವರೇ, ನಾವು ಎಲ್ಲಾ ಒಂದೇ ತರ ಇದ್ದೀರಿ, ಎಷ್ಟೆಲ್ಲಾ ಫೇಸ್ ಮಾಡಿದ್ದೇವೆ. ನಾನು ಈ ಪ್ರಶ್ನೆನಾ ದಿವಿನಾ, ರಾಕಿನಾ, ಅದಕ್ಕೂ ಮೊದಲು ನಮ್ಮ ಮನೆ ಅವರನ್ನು ಎಲ್ಲರನ್ನೂ ಕೇಳಿದ್ದೆ. ಬಟ್ ಅವರು ಯಾರಿಗೂ ಉತ್ತರ ಸಿಕ್ಕಿರಲಿಲ್ಲ. ಇವರಿಬ್ಬರಿಗೂ ಉತ್ತರ ಸಿಕ್ಕಿರಲಿಲ್ಲ. ಅದಕ್ಕೆ ನಿಮ್ಮನ್ನು ಕೇಳ್ತಾ ಇದ್ದೀನಿ ಎಂದಿದ್ದಾರೆ.

ಅದಕ್ಕೆ ದಿವ್ಯ(Divya Uruduga) ಅದೊಂದು ನಿಗೂಢ ಪ್ರಶ್ನೆ ಅಂದರೆ, ರಾಕಿ(Rakesh) ಉತ್ತರ ಸಿಕ್ಕಿಲ್ಲ ಅಲ್ಲ, ಅದರ ಬಗ್ಗೆ ಯೋಚನೆ ಮಾಡೋಕೆ ಇನ್ನೂ ಟೈಮ್ ಬೇಕು ಎಂದಿದ್ದಾರೆ. ಆಗ ರಾಜಣ್ಣ ಬಹುಶಃ ಇದೇನೋ ಸೀರಿಯಸ್ ಪ್ರಶ್ನೆ ಇರಬೇಕು ಅಂತ ಬಹಳ ಗಮನ ಇಟ್ಟು ಕೇಳಿದ್ದಾರೆ. ಆಗ ಅಮೂಲ್ಯ (Amulya) ನನ್ನ ಲೈಫ್ ನಲ್ಲಿ ಉತ್ತರಾನೇ ಸಿಗದೇ ಇರೋ ಪ್ರಶ್ನೆ ಏನಂದ್ರೆ, ನಾನು ಯಾಕೆ ಇಷ್ಟು ಕ್ಯೂಟ್ ಆಗಿದ್ದೀನಿ? ಎಂದಿದ್ದಾರೆ. ಇದನ್ನು ಕೇಳಿ ರೂಪೇಶ್ ರಾಜಣ್ಣ(Roopesh Rajanna) ನಗುತ್ತಾ ಸೋಫಾ ಮೇಲೆ ಇದ್ದ ದಿಂಬನ್ನು ಎತ್ತಿಕೊಂಡು ದಿವ್ಯ ಉರುಡುಗ ಮತ್ತು ರಾಕಿ ತಮಾಷೆಯಿಂದಲೇ ಹೊಡೆದಿದ್ದಾರೆ. ಒಟ್ಟಾರೆ ಅಮ್ಮು ರಾಜಣ್ಣ ಅವರ ಜೊತೆ ತಮಾಷೆ ಮಾಡುವಲ್ಲಿ ಸಕ್ಸಸ್ ಆಗಿದ್ದಾರೆ.

Leave a Comment