ಆಸ್ಕರ್ ಸಮಾರಂಭಕ್ಕೆ ಎಂಟ್ರಿ ಪಡೆಯೋಕೆ ಲಕ್ಷ ಲಕ್ಷ ಖರ್ಚು ಮಾಡಿದ್ರಾ ರಾಜಮೌಳಿ! ಏನಿದು ಶಾಕಿಂಗ್ ಸುದ್ದಿ

Written by Soma Shekar

Updated on:

---Join Our Channel---

RRR ಸಿನಿಮಾದ ನಾಟು ನಾಟು ಹಾಡು(Natu Natu song Oscar) ಆಸ್ಕರ್ ನಲ್ಲಿ ದಿ ಬೆಸ್ಟ್ ಒರಿಜಿನಲ್ ಸಾಂಗ್ ಕ್ಯಾಟಗರಿಯಲ್ಲಿ ಪ್ರಶಸ್ತಿ ಗೆದ್ದಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಇನ್ನು ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಿನಿಮಾದ ನಿರ್ದೇಶಕ ಎಸ್ ಎಸ್ ರಾಜಮೌಳಿ(Rajamouli), ರಾಮ್ ಚರಣ್ (Ram charan) ಮತ್ತು ಜೂ. ಎನ್ ಟಿ ಆರ್ (Jr NTR) ಹಾಗೂ ಅವರ ಕುಟುಂಬದ ಸದಸ್ಯರು ಸಹಾ ಭಾಗಿಯಾಗಿ, ಸಂಭ್ರಮಿಸಿದ್ದರು ಮತ್ತು ಆಸ್ಕರ್ ಪ್ರಶಸ್ತಿ ಗೆದ್ದ ಐತಿಹಾಸಿಕ ಕ್ಷಣಕ್ಕೆ ಅವರೆಲ್ಲಾ ಸಾಕ್ಷಿಯಾಗಿದ್ದರು. ಆದರೆ ಈಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ಹೊಸ ಸುದ್ದಿ ಎಲ್ಲರ ಗಮನವನ್ನು ಸೆಳೆದಿದೆ.

ವರದಿಗಳ ಪ್ರಕಾರ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಲು ನಿರ್ದೇಶಕ ರಾಜಮೌಳಿ ಅವರು ತಮಗೂ ಹಾಗೂ ಸಮಾರಂಭಕ್ಕೆ ಬರಲಿರುವ ತ್ರಿಬಲ್ ಸಿನಿಮಾ ತಂಡಕ್ಕೆ ಟಿಕೆಟ್ ಗಳನ್ನು ಖರೀದಿ ಮಾಡಿದ್ದರು ಎನ್ನಲಾಗಿದ್ದು, ಇವರಿಗೆ ಉಚಿತ ಪ್ರವೇಶ ಇರಲಿಲ್ಲ(No free entry for RRR) ಎಂದು ತಿಳಿದು ಬಂದಿದೆ. ಹೌದು, ಮಾಹಿತಿಗಳ ಪ್ರಕಾರ ಈ ಸಮಾರಂಭದಲ್ಲಿ ಭಾಗವಹಿಸಲು ಸಂಗೀತ ನಿರ್ದೇಶಕ ಎಮ್ ಎಮ್ ಕೀರವಾಣಿ(M M Keeravani) ಮತ್ತು ಸಾಹಿತಿ ಚಂದ್ರಭೋಸ್ ಗೆ(Chandra Bose) ಮಾತ್ರವೇ ಅಧಿಕೃತ ಆಹ್ವಾನ ಮತ್ತು ಉಚಿತ ಎಂಟ್ರಿ ನೀಡಲಾಗಿತ್ತು.

ಆದ್ದರಿಂದಲೇ ರಾಜಮೌಳಿ(Rajamouli) ಅವರು ಸಮಾರಂಭದಲ್ಲಿ ಭಾಗವಹಿಸಲು ತಮ್ಮ ತಂಡಕ್ಕಾಗಿ ಟಿಕೆಟ್ ಖರೀದಿಸಿ ಎಂಟ್ರಿ ಪಡೆದಿದ್ದರು. ಇನ್ನೂ ಈ ಟಿಕೆಟ್ ಗಾಗಿ ರಾಜಮೌಳಿ ಅವರು ಪ್ರತಿ ಟಿಕೆಟ್ ಗೆ $20,000 ಅಂದರೆ ಭಾರತೀಯ ಕರೆನ್ಸಿ ಪ್ರಕಾರ ತಲಾ 20.6 ಲಕ್ಷ ರೂಪಾಯಿಗಳನ್ನು ನೀಡಿ ಟಿಕೆಟ್ ಖರೀದಿ ಮಾಡಿದ್ದರು ಎನ್ನಲಾಗಿದೆ. ಆದ್ದರಿಂದಲೇ ಆರ್ ಆರ್ ಆರ್ ತಂಡಕ್ಕೆ ಸಭಾಂಗಣದಲ್ಲಿ ಕೊನೆಯ ಸಾಲಿನಲ್ಲಿ ಜಾಗವನ್ನು ನೀಡಲಾಗಿತ್ತು. ನಾಮಿನೇಟ್ ಆಗಿದ್ದ ಕೀರವಾಣಿ ಮತ್ತು ಚಂದ್ರಭೋಸ್ ಅವರು ಅನ್ಯ ನಾಮಾಂಕಿತರ ಜೊತೆಗೆ ಮುಂದಿನ ಸಾಲಿನಲ್ಲಿ ಕುಳಿತಿದ್ದರು.

ತ್ರಿಬಲ್ ಆರ್ ತಂಡಕ್ಕೆ ಆಸ್ಕರ್ ಸಮಾರಂಭದಲ್ಲಿ ಕೊನೆಯ ಸಾಲಿನಲ್ಲಿ ಕೂರಲು ಅವಕಾಶ ನೀಡಿದ್ದನ್ನು ನೋಡಿದ ನೆಟ್ಟಿಗರು ಮತ್ತು ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರು. ಅಲ್ಲದೇ ಸಮಾರಂಭದಲ್ಲಿ ವೇದಿಕೆಯ ಮೇಲೆ ನಾಟು ನಾಟು ಹಾಡಿಗೆ ಗಾಯಕರ ಜೊತೆಗೆ ಹೆಜ್ಜೆ ಹಾಕಿದವರು ಭಾರತೀಯರಲ್ಲ ಎನ್ನುವ ಬೇಸರವನ್ನು ಸಹಾ ಹೊರ ಹಾಕಿದ್ದಾರೆ. ಪರ, ವಿ ರೋ ಧ ಪ್ರತಿಕ್ರಿಯೆಗಳು ಹರಿದು ಬಂದಿದೆ.

Leave a Comment