ರಶ್ಮಿಕಾ ಸಿನಿಮಾಗಳಿಗೆ ಕನ್ನಡದಲ್ಲಿ ಶಾಶ್ವತವಾಗಿ ಬ್ಯಾನ್? ರಶ್ಮಿಕಾಗೆ ಕನ್ನಡ ಇಂಡಸ್ಟ್ರಿ ಬಾಗಿಲು ಮುಚ್ಚಿತೇ?

Written by Soma Shekar

Updated on:

---Join Our Channel---

ನಟಿ ರಶ್ಮಿಕಾ ಎಷ್ಟೇ ಹೆಸರನ್ನು ಪಡೆದಿದ್ದರೂ ಸಹಾ ಕನ್ನಡದ ಬಗ್ಗೆ ತನ್ನ ನಡೆ, ನುಡಿ ಹಾಗೂ ವರ್ತನೆಯಿಂದಾಗಿ ಸಾಕಷ್ಟು ಬಾರಿ ಟ್ರೋಲ್ ಆಗಿದ್ದಾರೆ. ಅಲ್ಲದೇ ಕನ್ನಡಿಗರು ಅವರ ಮೇಲೆ ಹಲವು ಬಾರಿ ತಮ್ಮ ಸಿಟ್ಟು, ಅಸಮಾಧಾನವನ್ನು ಹೊರಹಾಕಿದ್ದಾರೆ. ಈಗ ಇವೆಲ್ಲವುಗಳ ಬೆನ್ನಲ್ಲೇ ಇತ್ತೀಚಿಗೆ ನಟಿ ರಶ್ಮಿಕಾ ಮಂದಣ್ಣ‌ ಒಂದು ಸಂದರ್ಶನದಲ್ಲಿ ತನ್ನ ಸಿನಿಮಾ ಜರ್ನಿ ಬಗ್ಗೆ, ತಾನು ಹೇಗೆ ನಟಿಯಾದೆ, ಸಕ್ಸಸ್ ಪಡೆದೆ ಎನ್ನುವ ವಿಚಾರಗಳನ್ನು ಮಾತನಾಡುತ್ತಲೇ, ತಮ್ಮ ನಟ ರಿಷಬ್ ಶೆಟ್ಟಿ ಅವರ ನಿರ್ಮಾಣ ಸಂಸ್ಥೆಯ ಬಗ್ಗೆ ಕೇವಲವಾಗಿ ಮಾತನಾಡುತ್ತಾ, ವ್ಯಂಗ್ಯ ಮಾಡಿದ್ದು, ಇದು ದೊಡ್ಡ ಸುದ್ದಿಯಾಗಿದ್ದು, ನಟಿಯ ಬಗ್ಗೆ ಮತ್ತೆ ಕನ್ನಡ ಸಿನಿ ಪ್ರೇಮಿಗಳು ಮತ್ತು ಕನ್ನಡಿಗರು ತಮ್ಮ ಸಿಟ್ಟು ಮತ್ತು ಅಸಮಾಧಾನವನ್ನು ಹೊರ ಹಾಕಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ‌ ಕರ್ಲಿ ಟೇಲ್ ನಲ್ಲಿ ಮಾತನಾಡುತ್ತಾ, ತನಗೆ ಕಿರಿಕ್ ಪಾರ್ಟಿಯಲ್ಲಿ ಅವಕಾಶ ಸಿಕ್ಕಿದ್ದು ಹೇಗೆ ಎಂದು ಹೇಳುತ್ತಾ ನಿರ್ಮಾಣ ಸಂಸ್ಥೆಯ ಹೆಸರನ್ನು ಹೇಳದೇ, ಎರಡು ಬೆರಳುಗಳನ್ನು ಮಡಚಿ ಸನ್ನೆಗಳಲ್ಲಿ ನಿರ್ಮಾಣ ಸಂಸ್ಥೆಯ ಬಗ್ಗೆ ಮಾತನಾಡಿದ್ದರು. ಅಲ್ಲದೇ ನಿರ್ಮಾಣ ಸಂಸ್ಥೆಯ ತನ್ನನ್ನು ಆ ಸಿನಿಮಾದಲ್ಲಿ ಮಾಡಲೇಬೇಕೆಂದು ಬಲವಂತ ಮಾಡಿತು ಎಂದೆಲ್ಲಾ ಹೇಳಿಕೊಂಡಿರುವ ವೀಡಿಯೋ ಸೋಶಿಯಲ್ ಮೀಡಿಯಾಗಳ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಟಿಯ ಮಾತುಗಳನ್ನು ಕೇಳಿದ ಮೇಲೆ ಬಹಳಷ್ಟು ಜನರು ನಟಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಆದರೆ ಅಭಿಮಾನಿಗಳು ನಟಿಗೆ ಮೆಚ್ಚುಗೆ ನೀಡಿದ್ದಾರೆ.

ರಶ್ಮಿಕಾ ತನ್ನ ಸಿನಿಮಾ ಜರ್ನಿಗೆ ದೊಡ್ಡ ಬ್ರೇಕ್ ನೀಡಿದ ಸಿನಿಮಾ ಹೆಸರನ್ನು ಹೇಳಲು, ನಿರ್ಮಾಣ ಸಂಸ್ಥೆಯ ಹೆಸರನ್ನು ಹೇಳಲು ತೋರಿದ ಅಸಡ್ಡೆ ಅಥವಾ ನಿರ್ಲಕ್ಷ್ಯ ಅನೇಕರನ್ನು ಕೆರಳಿಸಿದೆ. ಈ ಕೋಪದಲ್ಲೇ ಈಗ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಪ್ರೇಮಿಗಳು ನಟಿಯ ವಿ ರು ದ್ಧ ತಿರುಗಿ ಬಿದ್ದಿದ್ದಾರೆ. ಹೀಗೆ ಕನ್ನಡ ಅಭಿಮಾನಿಗಳ ಸಿಟ್ಟಿನ ಬೆನ್ನಲ್ಲೇ ಟ್ವಿಟರ್ ನಲ್ಲಿ ಒಂದು ಟ್ವೀಟ್ ಈಗ ವೈರಲ್ ಆಗಿದ್ದು, ನಟಿಗೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇನ್ಮುಂದೆ ಸಮಸ್ಯೆ ಎದುರಾಗಲಿದೆ ಎನ್ನುವುದನ್ನು ಈ ಟ್ವೀಟ್ ನಲ್ಲಿ ನಾವು ನೋಡಬಹುದಾಗಿದೆ. ಈ ಟ್ವೀಟ್ ಗೆ ದೊಡ್ಡ ಮಟ್ಟದಲ್ಲಿ ಪ್ರತಿಕ್ರಿಯೆಗಳು ಸಹಾ ಹರಿದು ಬರುತ್ತಿವೆ.

ಹೌದು, ವೈರಲ್ ಆಗುತ್ತಿರುವ ಟ್ವೀಟ್ ನಲ್ಲಿ, “ಥಿಯೇಟರ್ ಮಾಲೀಕರು, ಸಂಸ್ಥೆಗಳು ಮತ್ತು ಚಲನಚಿತ್ರೋದ್ಯಮ ಶೀಘ್ರದಲ್ಲೇ ರಶ್ಮಿಕಾ ಮಂದಣ್ಣ ವಿ ರು ದ್ಧ ಕ್ರಮ ಕೈಗೊಳ್ಳಲಿದ್ದಾರೆ !!! ಇದು ರಶ್ಮಿಕಾ ನಿಷೇಧದ ಮಟ್ಟಕ್ಕೆ ಹೋಗಬಹುದು ಅವರ ಚಿತ್ರಗಳು ಶಾಶ್ವತವಾಗಿ ಕರ್ನಾಟಕದಿಂದ ಬ್ಯಾನ್ ಆಗಬಹುದು. ಇದು ಪುಷ್ಪದಿ ರೂಲ್ ಮತ್ತು ವಾರಿಸು ಸಿನಿಮಾ ತಂಡಗಳಿಗೆ ಆ ತಂ ಕ ಕಾರಿ ವಿಷಯ” ಎಂದು ಬರೆಯಲಾಗಿದೆ. ಈ ಟ್ವೀಟ್ ಎಷ್ಟರ ಮಟ್ಟಿಗೆ ನಿಜ ಎನ್ನುವುದು ತಿಳಿದಿಲ್ಲವಾದರೂ ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಹರಿದು ಬಂದಿದೆ. ಬಹಳಷ್ಟು ಜನರು ರಶ್ಮಿಕಾ ನಡೆಗೆ ಆಕ್ರೋಶ ವ್ಯಕ್ತಪಡಿಸಿ, ನಟಿಯನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಿ ಎಂದು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

Leave a Comment