ರಶ್ಮಿಕಾ ಚಾರ್ಮ್ ಕುಸಿಯಿತು ಎಂದೋರಿಗೆ ಸಕ್ಸಸ್ ಮೂಲಕ ತಿರುಗೇಟು ಕೊಟ್ಟ ರಶ್ಮಿಕಾ: ಫ್ಯಾನ್ಸ್ ಸಂಭ್ರಮ

Written by Soma Shekar

Published on:

---Join Our Channel---

ದಕ್ಷಿಣ ಸಿನಿಮಾ ರಂಗದಲ್ಲಿ(South cinema industry) ಮತ್ತು ಬಾಲಿವುಡ್ ನಲ್ಲೂ(Bollywood) ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ ಯಾರು ಎಂದರೆ ಸದ್ಯಕ್ಕೆ ಅದಕ್ಕೆ ಒಂದೇ ಉತ್ತರ ಎಂದರೆ ರಶ್ಮಿಕಾ ಮಂದಣ್ಣ‌(Rashmika Mandanna). ಹೌದು ನಟಿ ರಶ್ಮಿಕಾ(Rashmika) ಇತ್ತ ದಕ್ಷಿಣದಲ್ಲಿ ಸಿನಿಮಾಗಳನ್ನು ಮಾಡುತ್ತಲೇ ಅತ್ತ ಬಾಲಿವುಡ್ ನಲ್ಲೂ ಸಹಾ ನೆಲೆಯೂರಲು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಪುಷ್ಪ(Pushpa) ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದ ರಶ್ಮಿಕಾ ಇನ್ನಷ್ಟು ಕ್ರೇಜ್ ಪಡೆದುಕೊಂಡಿದ್ದಾರೆ. ಆದರೆ ಪುಷ್ಪ ಸಿನಿಮಾದ ನಂತರ ನಟಿಗೆ ದಕ್ಷಿಣದಲ್ಲಿ ಒಂದು, ಬಾಲಿವುಡ್ ನಲ್ಲಿ ಒಂದು ಸೋಲು ಎದುರಾಗಿತ್ತು ಎನ್ನುವುದು ಕೂಡಾ ವಾಸ್ತವ.

ಹೌದು, ಪುಷ್ಪ ನಂತರ ನಟಿ ತೆಲುಗಿನಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ಸಿನಿಮಾ ಆಡವಾಳ್ಳು ಮೀಕು ಜೋಹಾರ್ಲು ಸೋಲಿನ ರುಚಿ ಕಂಡರೆ, ಬಾಲಿವುಡ್ ನಲ್ಲಿ ನಟ ಅಮಿತಾಬ್(Amitab) ಜೊತೆಗೆ ನಟಿಸಿದ್ದ ಗುಡ್ ಬೈ(Good Bye) ಸಿನಿಮಾ ಮಕಾಡೆ ಮಲಗಿ ಹೀನಾಯ ಸೋಲನ್ನು ಕಂಡಿತ್ತು. ಈ ಸೋಲಿನ ಬೆನ್ನಲ್ಲೇ ನಟಿ ರಶ್ಮಿಕಾ ಸಕ್ಸಸ್ ಓಟಕ್ಕೆ ಬ್ರೇಕ್ ಬಿದ್ದಿದೆ, ಇನ್ನು ನಟಿಯ ಬೇಡಿಕೆ ಕುಗ್ಗಿದೆ ಎಂದು ಸುದ್ದಿಗಳಾದವು. ರಶ್ಮಿಕಾ ಸೋಲಿನ ಪರ್ವ ಶುರುವಾಗಿದೆ ಎಂದು ನಟಿಯನ್ನು ಸಾಕಷ್ಟು ಟ್ರೋಲ್(Rashmika Troll) ಮಾಡಲಾಗಿತ್ತು.

ಆದರೆ ಈಗ ನಟಿ ತನ್ನ ಬೇಡಿಕೆ ಕುಗ್ಗಿತು ಎನ್ನುವವರಿಗೆ ಮತ್ತೆ ಸಕ್ಸಸ್ ಗಳ ಮೂಲಕ ತಿರುಗೇಟು ನೀಡಿದ್ದಾರೆ. ಹೌದು ದಕ್ಷಿಣದಲ್ಲಿ ರಶ್ಮಿಕಾಗೆ ತಮಿಳು ನಟ ವಿಜಯ್ (Thalapathi Vijay) ಜೊತೆ ನಟಿಸಿದ ವಾರಿಸು(Vaarisu) ಸಿನಿಮಾ ದೊಡ್ಡ ಸಕ್ಸಸ್ ಅನ್ನು ಪಡೆದಿದೆ. ಇದರ ಬೆನ್ನಲ್ಲೇ ನಟಿಯ ಹಿಂದಿ ಸಿನಿಮಾ ಮಿಷನ್ ಮಜ್ನು(Mission Majnu) ಓಟಿಟಿಯಲ್ಲಿ ಬಿಡುಗಡೆ ಆಗಿ ದೊಡ್ಡ ಸಕ್ಸಸ್ ಪಡೆದುಕೊಂಡಿದ್ದು, ಇತ್ತೀಚಿಗಷ್ಟೇ ಚಿತ್ರ ತಂಡ ಸಕ್ಸಸ್ ಅನ್ನು ಸಂಭ್ರಮಿಸುತ್ತಾ ಭರ್ಜರಿ ಪಾರ್ಟಿಯನ್ನು ಸಹಾ ಮಾಡಿಕೊಂಡಿದ್ದು, ಅದರ ಫೋಟೊ ಗಳು ಮತ್ತು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಟಿ ರಶ್ಮಿಕಾ ಮತ್ತೆ ತನ್ನ ಚಾರ್ಮ್ ವಾಪಸ್ ಪಡೆದಿದ್ದು, ನಟಿಯ ಬ್ಯಾಕ್ ಟು ಬ್ಯಾಕ್ ಸಕ್ಸಸ್ ಕಂಡು ಅಭಿಮಾನಿಗಳು ಸಿಕ್ಕಾಪಟ್ಟೆ ಸಂಭ್ರಮಿಸಿದ್ದಾರೆ. ರಶ್ಮಿಕಾ ಮಂದಣ್ಣ‌ ಬಾಲಿವುಡ್ ನ ಜನಪ್ರಿಯ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ(Sanjay Leela Bansali) ಅವರ ಸಿನಿಮಾದಲ್ಲಿ ಸಹಾ ಅವಕಾಶ ಪಡೆದಿದ್ದಾರೆ ಎನ್ನಲಾಗಿದ್ದು, ಅದು ಅಧಿಕೃತವಾದರೆ ನಟಿಗೆ ಬಾಲಿವುಡ್ ನಲ್ಲಿ ಒಂದು ಭದ್ರವಾದ ಸ್ಥಾನವನ್ನು ಪಡೆಯುವುದಕ್ಕೆ ಖಂಡಿತ ನೆರವಾಗಲಿದೆ. ಇದನ್ನೂ ಓದಿ: ಅವರು ಮತ್ತೆ ಭಾರತಕ್ಕೆ ಬರುವುದಿಲ್ಲ: ರಾಜಮೌಳಿ ಬಗ್ಗೆ ಆತಂಕದಿಂದ ಶಾಕಿಂಗ್ ಮಾತು ಹೇಳಿದ ಅನುರಾಗ್ ಕಶ್ಯಪ್

Leave a Comment