ರಣಬೀರ್ ರಗಡ್ ಲುಕ್ ಗೆ ಥ್ರಿಲ್ಲಾದ ಫ್ಯಾನ್ಸ್: ಸಿನಿಮಾ ಹಿಟ್ ಆಗೋದು ಪಕ್ಕಾ ಅಂದ ಅಭಿಮಾನಿಗಳು

Written by Soma Shekar

Published on:

---Join Our Channel---

ಕಳೆದ ವರ್ಷ ಬಾಲಿವುಡ್ ನಟ ರಣಬೀರ್ ಕಪೂರ್ (Ranbeer Kapoor) ಅವರಿಗೆ ಬಹಳ ಸಂತಸದ ವರ್ಷವಾಗಿತ್ತು. ಏಕೆಂದರೆ ಅವರ ಸಿನಿಮಾ ಬ್ರಹ್ಮಾಸ್ತ್ರ ತೆರೆಗೆ ಬಂದು ಯಶಸ್ಸನ್ನು ಪಡೆದುಕೊಂಡಿತ್ತು. ಬಿಡುಗಡೆಗೆ ಮುನ್ನ ಬಾಯ್ಕಾಟ್ ಬ್ರಹ್ಮಾಸ್ತ್ರ ಅಭಿಯಾನ ಚಿತ್ರತಂಡಕ್ಕೆ ಒಂದು ಭ ಯ, ಆ ತಂ ಕವನ್ನು ಉಂಟು ಮಾಡಿತ್ತು. ಆದರೆ ಸಿನಿಮಾ ಬಿಡುಗಡೆ ನಂತರ ಬ್ಲಾಕ್ ಬಸ್ಟರ್ ಎನಿಸಿಕೊಳ್ಳದೇ ಇದ್ದರೂ ಹಿಟ್ ಸಿನಿಮಾಗಳ ಸಾಲಿಗೆ ಸೇರುವ ಮೂಲಕ ಚಿತ್ರ ತಂಡಕ್ಕೆ ಖುಷಿಯನ್ನು ನೀಡಿತ್ತು. ಇದಲ್ಲದೇ ಖಾಸಗಿ ಜೀವನದಲ್ಲಿ ಸಹಾ ರಣಬೀರ್ ಗೆ (Ranbeer) ಕಳೆದ ವರ್ಷ ಬಹಳ ವಿಶೇಷ ಎನ್ನುವುದು ಕೂಡಾ ವಾಸ್ತವ.

ಹೌದು, ಕಳೆದ ಏಪ್ರಿಲ್ ನಲ್ಲಿ ರಣಬೀರ್ ಮತ್ತು ಆಲಿಯಾ(Ranbeer and Alia) ವೈವಾಹಿಕ ಜೀವನಕ್ಕೆ ಅಡಿಯಿಟ್ಟರು. ಕೆಲವೇ ದಿನಗಳ ಹಿಂದೆ ಹೆಣ್ಣು ಮಗುವಿನ ತಂದೆಯಾಗಿ ಜೀವನದಲ್ಲಿ ಅಪ್ಪನ ಸ್ಥಾನಕ್ಕೆ ಪ್ರಮೋಟ್ ಆಗಿದ್ದಾರೆ ರಣಬೀರ್. ಈಗ ಅವೆಲ್ಲವುಗಳ ಬೆನ್ನಲ್ಲೇ ರಣಬೀರ್ ಕಪೂರ್ ಹೊಸ ವರ್ಷವನ್ನು ಸಂಭ್ರಮದಿಂದ ಬರ ಮಾಡಿಕೊಂಡಿದ್ದು, ಅಭಿಮಾನಿಗಳಿಗೆ ಖುಷಿಯನ್ನು ನೀಡಿದ್ದಾರೆ. ರಣಬೀರ್ ಕಪೂರ್ ಅವರ ಹೊಸ ಸಿನಿಮಾದಲ್ಲಿನ ಅವರ ಫಸ್ಟ್ ಲುಕ್ ಹೊಸ ವರ್ಷದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಹನ್ನೆರಡು ಗಂಟೆಗೆ ಬಿಡುಗಡೆ ಆಗಿದೆ.

ರಣಬೀರ್ ಕಪೂರ್ ಅವರ ಹೊಸ ಸಿನಿಮಾ, ಅರ್ಜುನ್ ರೆಡ್ಡಿ ಸಿನಿಮಾ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗ(Sandeep Reddy Vanga) ನಿರ್ದೇಶನದ ಅನಿಮಲ್(Animal) ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಆಗಿದ್ದು, ಇದರಲ್ಲಿ ರಣಬೀರ್ ಕಪೂರ್ ಲುಕ್ ಸಖತ್ ರಗಡ್ ಆಗಿದೆ. ಸದಾ ರೋಮ್ಯಾಂಟಿಕ್ ಆಗಿ ಕಾಣುತ್ತಿದ್ದ ರಣಬೀರ್ ಈಗ ಈ ಸಿನಿಮಾದ ಫಸ್ಟ್ ಲುಕ್ ನಲ್ಲಿ ಕೈಯಲ್ಲಿ ಮಾ ರ ಕಾ ಸ್ತ್ರ ಹಿಡಿದು, ರಕ್ತ ಮೆತ್ತಿದ ಕೈಗಳಿಂದ ಸಿಗರೇಟ್ ಹೊತ್ತಿಸಿಕೊಳ್ಳುತ್ತಿರುವುದು ಕಂಡಿದೆ. ರಣಬೀರ್ ಅಭಿಮಾನಿಗಳು ಇದನ್ನು ನೋಡಿ ಥ್ರಿಲ್ ಆಗಿದ್ದಾರೆ. ಇನ್ನು ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ‌(Rashmika Mandanna) ನಾಯಕಿಯಾಗಿದ್ದಾರೆ.

Leave a Comment