ರಕ್ಕಮ್ಮನಿಗೆ ಶಾಕ್ ಕೊಟ್ಟ ನೋರಾ ಫತೇಹಿ: ಜಾಕ್ವೆಲಿನಾ ಮೇಲೆ ದೂರು ದಾಖಲಿಸಿದ ನೋರಾ

Written by Soma Shekar

Published on:

---Join Our Channel---

ಬಾಲಿವುಡ್ ನಟಿ (Bollywood actress) ಜಾಕ್ವೆಲಿನಾ ಫರ್ನಾಂಡೀಸ್ (Jacqueline Fernandez) ಮತ್ತು ಡ್ಯಾನ್ಸರ್ ಹಾಗೂ ನಟಿ ಸಹಾ ಆಗಿರುವ ನೋರಾ ಫತೇಹಿ (Nora Fatehi) ಇಬ್ಬರ ಹೆಸರುಗಳು ಸಹಾ ಸುಖೇಶ್ ಚಂದ್ರಶೇಖರ್ ಎನ್ನುವ 200 ಕೋಟಿ ವಂಚಕನ ಪ್ರಕರಣದಲ್ಲಿ ತಳಕು ಹಾಕಿಕೊಂಡಿತ್ತು. ಅಲ್ಲದೇ ಇದರಲ್ಲಿ ಇಬ್ಬರೂ ನಟಿಯರನ್ನು ವಿಚಾರಣೆ ಸಹಾ ನಡೆಸಲಾಗಿತ್ತು. ಈ ಪ್ರಕರಣದಲ್ಲಿ ನೋರಾ (Nora) ಪಾತ್ರ ಇಲ್ಲ ಎನ್ನಲಾಯಿತಾದರೂ, ಜಾಕ್ವೆಲಿನಾ (Jacqueline) ಮಾತ್ರ ಇನ್ನೂ ಇದರಿಂದ ಹೊರ ಬಂದಿಲ್ಲ. ಆದರೆ ಈಗ ನಟಿ ಜಾಕ್ವೆಲಿನಾ ಗೆ ಹೊಸದೊಂದು ಶಾ ಕ್ ನೀಡಿದ್ದಾರೆ ನಟಿ ನೋರಾ ಫತೇಹಿ (Nora Fatehi).

ಹೌದು, ಬಾಲಿವುಡ್ ನಟಿ ನೋರಾ ಫತೇಹಿ(Nora) ಮತ್ತೊಬ್ಬ ನಟಿ ಜಾಕ್ವೆಲಿನಾ (Jacqueline) ಮೇಲೆ ಮತ್ತು ಕೆಲವೊಂದು ಮಾದ್ಯಮಗಳ ಮೇಲೆ ದೆಹಲಿ ನ್ಯಾಯಾಲಯದಲ್ಲಿ ಮಾನನಷ್ಟ ಮೊ‌ ಕ ದ್ದಮೆಯನ್ನು (Nora defamation suit on Jacqueline) ಹೂಡಿದ್ದಾರೆ. ಸುಖೇಶ್ ಚಂದ್ರಶೇಖರ್ ಪ್ರಕರಣದಲ್ಲಿ ತನಗಾದ ತೊಂದರೆಗೆ ಬೇಸತ್ತು ನಟಿ ಈ ಕೆಲಸವನ್ನು ಮಾಡಿದ್ದಾರೆ. ನೋರಾ (Nora) ಹೂಡಿರುವ ಮೊ ಕ ದ್ದ ಮೆಯಲ್ಲಿ ನಟಿ ಜಾಕ್ವೆಲಿನಾ ಅವರನ್ನು ಆ ರೋ ಪಿ ನಂಬರ್ ಒನ್ ಎಂದು ನಮೂದಿಸಿದ್ದಾರೆ ಎನ್ನಲಾಗಿದೆ. ಜಾಕ್ವೆಲಿನಾ (Jacqueline) ವಿ ರು ದ್ಧ ದ ದೂರಿನಲ್ಲಿ ನೋರಾ (Nora) ಇನ್ನಷ್ಟು ವಿಚಾರಗಳನ್ನು ಸಹಾ ನಮೂದು ಮಾಡಿದ್ದಾರೆ.

ನೋರಾ ಹೂಡಿರುವ ದಾವೆಯಲ್ಲಿ, ಉದ್ಯಮದಲ್ಲಿ ದೂರಿನಲ್ಲಿ ತಿಳಿಸಿರುವ ವ್ಯಕ್ತಿಗಳು ಇಂಡಸ್ಟ್ರಿಯಲ್ಲಿ ತಕ್ಕಮಟ್ಟಿಗೆ ಸ್ಪರ್ಧಿಸಲು ಸಾಧ್ಯವಾಗದೇ ಇರುವಾಗ ಇಲ್ಲಿ ತಿಳಿಸಲಾದ ಪ್ರತಿಸ್ಪರ್ಧಿಗಳು ಆಕೆಯ ಖ್ಯಾತಿಯನ್ನು ಹಾಳು ಮಾಡುವ ಪ್ರಯತ್ನವನ್ನು ಪ್ರಾರಂಭಿಸಿದ್ದಾರೆ, ಇದು ನೋರಾಗೆ ಕೆಲಸದ ನಷ್ಟಕ್ಕೆ ಕಾರಣವಾಗುತ್ತಿದೆ ಎಂದು ಹೇಳಿದ್ದಾರೆ. ಇನ್ನು ದಾವೆಯಲ್ಲಿ ವಕೀಲರು, ನೋರಾ ಅವರು ದೂರುದಾರರನ್ನು ಅವಹೇಳನಕಾರಿ ಹೇಳಿಕೆಗಳಿಂದ ನೊಂದಿದ್ದಾರೆ. ಅವರು ನೀಡಿದಂತಹ ಹೇಳಿಕೆಗಳನ್ನು ಕೆಲವು ಮಾದ್ಯಮಗಳು ಪ್ರಸಾರ ಮಾಡಿವೆ.

ಇಲ್ಲಿ ಎಲ್ಲರೂ ಸಹಾ ಪರಸ್ಪರ ಸಹಕಾರದಿಂದ ವರ್ತಿಸಿದ್ದಾರೆ. ಆ ರೋ ಪಿ ನಂಬರ್ ಒನ್ ನೋರಾ ಅವರ ಆರ್ಥಿಕ, ಸಾಮಾಜಿಕ ಮತ್ತು ವೈಯಕ್ತಿಕ ಅವನತಿಯನ್ನು ಬಯಸಲಾಗಿದೆ ಎಂದು ಹೇಳಲಾಗಿದೆ. ಈಗಾಗಲೇ ಸುಖೇಶ್ ಚಂದ್ರಶೇಖರ್ ಪ್ರಕರಣದಲ್ಲಿ ಸಿಲುಕಿ ಟ್ರೋಲ್ ಆಗಿರುವ ಜಾಕ್ವೆಲಿನಾಗೆ (Jacqueline) ಈಗ ಮತ್ತೊಂದು ಶಾ ಕ್ ಎದುರಾಗಿದೆ. ನೋರಾ(Nora) ಇಂತಹುದೊಂದು ಕೆಲಸವನ್ನು ಮಾಡುವರು ಎಂದು ಯಾರೂ ಸಹಾ ಊಹೆಯನ್ನು ಮಾಡಿರಲಿಲ್ಲ.

Leave a Comment