ಮೌನ ಮುರಿದ ರಾಖಿ ಸಾವಂತ್ ಪತಿ: ಸತ್ಯ ಏನೆಂದು ಸ್ಪಷ್ಟ ಉತ್ತರ ಕೊಟ್ಟ ಆದಿಲ್ ದುರಾನಿ!

Written by Soma Shekar

Published on:

---Join Our Channel---

ಸದ್ಯಕ್ಕಂತೂ ಬಾಲಿವುಡ್ ನಲ್ಲಿ ಸಿನಿಮಾಗಳಿಗಿಂತ ಹೆಚ್ಚು ಸದ್ದು, ಸುದ್ದಿ ಮಾಡುತ್ತಿರುವ ವಿಚಾರವೆಂದರೆ ಅದು ಬಾಲಿವುಡ್ ನ ಡ್ರಾಮಾ ಕ್ವೀನ್(Bollywood Drama Queen) ರಾಖಿ ಸಾವಂತ್ ಮದುವೆಯ (Rakhi Sawant Marriage) ವಿಚಾರವಾಗಿದೆ. ಹೌದು, ತಾಯಿಯನ್ನು ಕಳೆದುಕೊಂಡ ಕೆಲವೇ ದಿನಗಳ ನಂತರ ರಾಖಿ ಮಾದ್ಯಮಗಳ ಮುಂದೆ ಕಣ್ಣೀರು ಹಾಕುತ್ತಾ, ಆದಿಲ್ (Adil) ತನಗೆ ಮೋಸ ಮಾಡುತ್ತಿದ್ದಾರೆ, ದಯವಿಟ್ಟು ನನಗೆ ನ್ಯಾಯ ಕೊಡಿಸಿ ಎಂದು ಕಣ್ಣೀರು ಹಾಕಿದ್ದುಂಟು. ಅಲ್ಲದೇ ಮಾದ್ಯಮಗಳು ಕಾರಣದಿಂದಾಗಿಯೇ ಅನೇಕರು ತನ್ನ ಕಣ್ಣೀರನ್ನು ಸಹಾ ಡ್ರಾಮಾ ಎಂದು ಕರೆದು ತಮಾಷೆ ಮಾಡುತ್ತಿದ್ದಾರೆ ಎಂದು ಗೋಳಾಡಿದ್ದಾರೆ.

ರಾಖಿ ಸಾವಂತ್(Rakhi Sawant) ಮಾದ್ಯಮಗಳ ಮುಂದೆ ಪತಿ ಆದಿಲ್ ದುರಾನಿ ತಮ್ಮ ಮದುವೆಯನ್ನು ಸೀಕ್ರೆಟ್ ಆಗಿ ಇಟ್ಟಿದ್ದು ಅವರ ಗರ್ಲ್ ಫ್ರೆಂಡ್ ಗಾಗಿ, ಆಕೆ ನನಗೆ ಬೆ ದ ರಿ ಕೆ ಹಾಕುತ್ತಿದ್ದಾಳೆ. ಆದಿಲ್ ಫೇಮಸ್(Adil Rakhi) ಆಗೋಕೆ ನನ್ನನ್ನು ಬಳಸಿಕೊಂಡಿದ್ದಾರೆ. ನಾನು ಬೇರೆಯವರು ಮೇಲೆ ಏರೋದಿಕ್ಕೆ ಮೆಟ್ಟಿಲು ಆಗೋದಿಕ್ಕೆ ಬಯಸುವುದಿಲ್ಲ. ನನಗೆ ನ್ಯಾಯ ಕೊಡಿಸಿ ಎಂದೂ, ನನ್ನ ಸಾಂಸಾರಿಕ ಜೀವನ ಸಮಸ್ಯೆಯಲ್ಲಿ ಸಿಲುಕಿದೆ ಎಂದು ಹೇಳಿದ್ದಾರೆ. ರಾಖಿ ಹೀಗೆ ಆದಿಲ್ ಮೇಲೆ ಸಾಕಷ್ಟು ಆ ರೋ ಪ ಗಳನ್ನು ಮಾಡಿದ ಬೆನ್ನಲ್ಲೇ ಆದಿಲ್ ಕೂಡಾ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಮೆಗಾ ಫ್ಯಾಮಿಲೀಲಿ ಇದೆ ಮೊದಲು: ಸ್ಟಾರ್ ನಟಿಯ ಕೈ ಹಿಡಿಯಲು ಸಜ್ಜಾದ ನಟ ವರುಣ್ ತೇಜ್

ಮದುವೆಯ ವಿಚಾರವಾಗಿ ಕೆಲವೇ ದಿನಗಳ ಹಿಂದೆ ಆದಿಲ್ ರಾಖಿಯ ಕೈ(Adil Rakhi Marriage) ಹಿಡಿದು ಮಾದ್ಯಮಗಳ ಮುಂದೆ ಬಂದಿದ್ದರು. ತಮ್ಮ ಮದುವೆಯ ವಿಚಾರ ನಿಜವೆಂದು ಅಧಿಕೃತವಾಗಿ ತಿಳಿಸಿದ್ದರು. ಈಗ ರಾಖಿ ತಮ್ಮ ಮೇಲೆ ಮಾಡುತ್ತಿರುವ ಆ ರೋ ಪಗಳ ಬೆನ್ನಲ್ಲೇ ಆದಿಲ್ ಮಾದ್ಯಮಗಳ ಮುಂದೆ ಮಾತನಾಡಿ, ರಾಖಿ(Rakhi) ಏನೇ ಹೇಳಲಿ ಅದೆಲ್ಲಾ ನಿಜವಲ್ಲ, ನಾನು ಸದಾ ರಾಖಿಯ ಜೊತೆಗೆ ಇರುತ್ತೇನೆ, ರಾಖಿಗೆ ಸಪೋರ್ಟ್ ನೀಡುತ್ತೇನೆ ಎನ್ನುವ ಮಾತನ್ನು ಹೇಳುತ್ತಾ, ರಾಖಿ ಮಾಡಿರುವ ಆ ರೋ ಪ ಗಳಿಗೆ ತನ್ನ ಉತ್ತರವನ್ನು ನೀಡಿದ್ದಾರೆ.

ಅಲ್ಲದೇ ಈ ವೇಳೆ, ರಾಖಿ ಏನು ಬೇಕಾದರೂ ಮಾಡಬಹುದು, ಮಾತನಾಡಬಹುದು, ಎಷ್ಟೇ ಆಗಲಿ ಅಬಲೆಯಲ್ಲವೇ. ನಾನು ಏನು ಹೇಳಲಿ ರಾಖಿ ತಪ್ಪು ಅಂತ ಹೇಳಲೋ ಅಥವಾ ನಾನು ತಪ್ಪು ಅಂತ ಹೇಳಲೋ, ಏನೂ ಹೇಳಲಾಗದೆ ಮಾದ್ಯಮಗಳ ಮುಂದೆ ಬಂದಿಲ್ಲ. ರಾಖಿ ಹೇಳುತ್ತಿರುವುದೆಲ್ಲಾ ಏನು ಅನ್ನೋದು ನನಗೆ ಅರ್ಥ ಆಗ್ತಿಲ್ಲ. ಆದರೆ ರಾಖಿ ಏನು ಹೇಳಿದರೂ ಕೇಳುತ್ತಾರೆ ಎನ್ನುವ ಮಾತುಗಳನ್ನು ಆದಿಲ್ ಹೇಳಿದ್ದಾರೆ..

Leave a Comment