ಮೊದಲ ಸ್ನಾನವೇ ಕಂಟಕವಾಯ್ತಾ? ವಿಶ್ವದ ಅತ್ಯಂತ ಕೊಳಕು ವ್ಯಕ್ತಿಯ ಸಾವು!

Written by Soma Shekar

Published on:

---Join Our Channel---

ವಿಶ್ವದ ಅತ್ಯಂತ ಕೊಳಕು ವ್ಯಕ್ತಿ ಎಂದೇ ಕುಖ್ಯಾತಿಯನ್ನು ಪಡೆದಿದ್ದವರು ಇರಾನಿನ ಅಮೌ ಹಾಜಿ ಎನ್ನುವ ವ್ಯಕ್ತಿ. ಇವರು ಸುಮಾರು ಅರ್ಧ ಶತಮಾನಕ್ಕಿಂತಲೂ ಹೆಚ್ಚಿನ ಸಮಯದಿಂದ ಸ್ನಾನ ಮಾಡಿರಲಿಲ್ಲ ಎನ್ನಲಾಗಿತ್ತು. ಈತನ ಕುರಿತಾಗಿ ಮಾದ್ಯಮಗಳಲ್ಲಿ ಸಹಾ ಸಾಕಷ್ಟು ಸುದ್ದಿಗಳಾಗಿತ್ತು. ಹೀಗೆ ಐವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಸ್ನಾನ ಮಾಡದೇ ಅತ್ಯಂತ ಕೊಳಕು ವ್ಯಕ್ತಿ ಎನ್ನುವ ಹೆಸರನ್ನು ಪಡೆದಿದ್ದ ಈ ವ್ಯಕ್ತಿ ತಮ್ಮ 94 ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ ಎಂದು ಮಂಗಳವಾರ ಮಾದ್ಯಮಗಳಲ್ಲಿ ವರದಿಗಳು ಪ್ರಕಟವಾಗಿದೆ. ಅನೇಕರು ಈತನ ಆತ್ಮಕ್ಕೆ ಶಾಂತಿ ಸಿಗಲೆಂದು ಕೋರಿದ್ದಾರೆ.

ಒಂಟಿಯಾಗಿ ವಾಸವಾಗಿದ್ದ ಅಮೌ ಹಾಜಿ, ಮೌನವಾಗಿಯೇ ಕಾಲವನ್ನು ಕಳೆಯುತ್ತಿದ್ದರು. ಫಾರ್ಸ್ ನ ದಕ್ಷಿಣ ಪ್ರಾಂತ್ಯದ ದೆಜ್ಗಾ ಎನ್ನುವ ಗ್ರಾಮದಲ್ಲಿ ಈತ ವಾಸವಿದ್ದ.‌ ಒಂಟಿಯಾಗೊದ್ದ ಈತ ಭಾನುವಾರ ಮೃ ತ ಪಟ್ಟಿದ್ದಾನೆ ಎಂದು IRNA ನ್ಯೂಸ್ ಏಜನ್ಸಿಯು ವರದಿಯನ್ನು ಪ್ರಕಟ ಮಾಡಿದೆ. ಅಮೌ ಹಾಜಿ ಸ್ನಾನ ಮಾಡಿದರೆ ತನ್ನ ಆರೋಗ್ಯ ಹಾಳಾಗುತ್ತದೆ ಎನ್ನುವ ಭಯದಿಂದ ಅರ್ಧ ಶತಮಾನಕ್ಕಿಂತ ಹೆಚ್ಚಿನ ಕಾಲ‌ ಸ್ನಾನವನ್ನೇ ಮಾಡಿರಲಿಲ್ಲ. ಆತ ಸ್ನಾನವನ್ನು ನಿರಾಕರಿಸುತ್ತಾ ಬಂದಿದ್ದರು ಎಂದು ಸ್ಥಳೀಯ ಸಂಸ್ಥೆಯೊಂದು ಸಹಾ ಮಾಹಿತಿಯನ್ನು ನೀಡಿದೆ.

ಕೆಲವು ತಿಂಗಳುಗಳ ಹಿಂದೆ ಈ ವ್ಯಕ್ತಿಯನ್ನು ಅಲ್ಲಿನ ಗ್ರಾಮಸ್ಥರು ಬಲವಂತವಾಗಿ ಹಿಡಿದುಕೊಂಡು ಹೋಗಿ ಸ್ನಾನವನ್ನು ಮಾಡಿಸಿದ್ದರು. ಹೀಗೆ ಸ್ನಾನ ಮಾಡಿಸಿದ ತಿಂಗಳುಗಳ ನಂತರ ಈ ವ್ಯಕ್ತಿಯ ನಿಧನದ ವಾರ್ತೆ ಕೇಳಿ ಜನರು ಶಾ ಕ್ ಆಗಿದ್ದಾರೆ.. The strange life of Amou Haji ಹೆಸರಿನಲ್ಲಿ ಈತನ ಜೀವನದ ಕುರಿತಾಗಿ ಒಂದು ಡಾಕ್ಯುಮೆಂಟರಿ ಸಿನಿಮಾವನ್ನು ಸಹಾ ಮಾಡಲಾಗಿತ್ತು. ಇದು 2013 ರಲ್ಲಿ ವಿಶ್ವದ ಗಮನವನ್ನು ಸೆಳೆದಿತ್ತು. ಅನೇಕರು ಈತನ ಬಗ್ಗೆ ತಿಳಿದಾಗ ಆಶ್ಚರ್ಯವನ್ನು ಪಟ್ಟಿದ್ದರು. ಈಗ ಅಮೌ ಹಾಜಿ ಮೃ ತನಾದ ವಿಷಯ ತಿಳಿದು ಅನೇಕರು ಸಂತಾಪ ಸೂಚಿಸಿದ್ದಾರೆ.

Leave a Comment