ಮೊದಲ ಸಿನಿಮಾಕ್ಕೆ ಅವಾರ್ಡ್ ಬಂದ್ರೂ 13 ಸಿನಿಮಾಗಳಿಂದ ಈ ನಟಿಯನ್ನು ಎತ್ತಂಗಡಿ ಮಾಡಿದ್ರು!! ನೋವು ಹಂಚಿಕೊಂಡ ವಿದ್ಯಾ ಬಾಲನ್

Written by Soma Shekar

Published on:

---Join Our Channel---

ಬಾಲಿವುಡ್ ನಲ್ಲಿ ನಟನಾ ಪ್ರಧಾನ, ಮಹಿಳಾ ಪಾತ್ರಗಳ ಮೂಲಕವೇ ದೊಡ್ಡ ಹೆಸರನ್ನು ಮಾಡಿ, ಸ್ಟಾರ್ ನಟಿಯಾಗಿ ಬೆಳೆದು, ಪ್ರಸ್ತುತ ನಿರ್ಮಾಪಕಿ ಸಹಾ ಆಗಿರುವ ನಟಿ ವಿದ್ಯಾ ಬಾಲನ್ ಬಾಲಿವುಡ್ ನಲ್ಲಿ ತನ್ನದೇ ಆದಂತಹ ಸ್ಥಾನ ಮತ್ತು ವರ್ಚಸ್ಸನ್ನು ಪಡೆದಿರುವ ನಟಿಯಾಗಿದ್ದಾರೆ. ಡರ್ಟಿ ಪಿಕ್ಚರ್ ಸಿನಿಮಾದ ಮೂಲಕ ಬಾಲಿವುಡ್ ನಲ್ಲಿ ಹೊಸ ಸಂಚಲನ ಸೃಷ್ಟಿಸಿದ ವಿದ್ಯಾ ಬಾಲನ್ ತನ್ನ ನಟನೆಗೆ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡರು. ಪ್ರಸ್ತುತ ಬಾಲಿವುಡ್ ನಲ್ಲಿ ಕೇವಲ ನಟನೆಯಿಂದ ಗುರ್ತಿಸಲ್ಪಡುವ ಕೆಲವೇ ನಟಿಯರಲ್ಲಿ ವಿದ್ಯಾ ಬಾಲನ್ ಕೂಡಾ ಒಬ್ಬರಾಗಿದ್ದಾರೆ. ಇಂದು ಇಷ್ಟೆಲ್ಲಾ ಹೆಸರು ಮಾಡಿರುವ ಈ ನಟಿಯು ಕೆರಿಯರ್ ಆರಂಭದಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದರು.

ವಿದ್ಯಾಬಾಲನ್ ಒಂದು ಸಂದರ್ಶನದಲ್ಲಿ ಮಾತನಾಡುವ ವೇಳೆಯಲ್ಲಿ ಆರಂಭದ ದಿನಗಳಲ್ಲಿ ಕೆಲವರು ತನ್ನ ಬಗ್ಗೆ ತೀರಾ ಕೆ ಟ್ಟ ದಾಗಿ ನಡೆದುಕೊಂಡಿದ್ದರು ಎಂದು ತನಗೆ ಆಗ ಎದುರಾಗಿದ್ದ ಕಹಿ ಅನುಭವಗಳ ಬಗ್ಗೆ ಮಾತನಾಡಿದ್ದಾರೆ. ಆಗ ಎದುರಾದ ಸಮಸ್ಯೆಗಳು, ಕಹಿ ಅನುಭವಗಳಿಂದ ನನಗೆ ಇಂಡಸ್ಟ್ರಿ ಎಂದರೆ ಅಸಹ್ಯ ಹುಟ್ಟುವ ಹಾಗೆ ಆಗಿತ್ತು ಎನ್ನುವ ಮಾತುಗಳನ್ನು ವಿದ್ಯಾ ಬಾಲನ್ ತಮ್ಮ ಹೊಸ ಸಿನಿಮಾ ಜಲ್ಸಾ ದ ಪ್ರೋಮೋಷನ್ ವೇಳೆಯಲ್ಲಿ ಮಾತನಾಡುತ್ತಾ ತನ್ನ ಕೆರಿಯರ್ ಕುರಿತಾಗಿ ಹೇಳಿಕೊಂಡಿದ್ದಾರೆ.

ಬಾಲಿವುಡ್ ನಲ್ಲಿ ವಿದ್ಯಾ ಬಾಲನ್ ಮೊದಲ ಸಿನಿಮಾ ಪರಿಣೀತಾ. ಈ ಸಿನಿಮಾಕ್ಕೆ ಆಕೆ ಹೊಸ ಪರಿಚಯ ವಿಭಾಗದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡರು. ಆದರೆ ಮೊದಲ ಸಿನಿಮಾ ನಂತರ ವಿದ್ಯಾ ಬಾಲನ್ ಅವರನ್ನು ಒಟ್ಟು ಹದಿಮೂರು ಸಿನಿಮಾಗಳಿಂದ ತೆಗೆದು ಹಾಕಲಾಗಿತ್ತಂತೆ. ಅಂದು ಯಾವ ನಿರ್ಮಾಪಕರು ನನ್ನನ್ನು ಅವರ ಸಿನಿಮಾಗಳಿಂದ ತೆಗೆದು ಹಾಕಿದ್ದರೋ ಇಂದು ಅವರೇ ಕಾಲ್ ಮಾಡಿ, ಅವರ ಸಿನಿಮಾಗೆ ಕಾಲ್ ಶೀಟ್ ಕೇಳುತ್ತಾರೆ. ಅಂತಹವರ ಆಫರ್ ನಾನು ಯಾವುದೇ ಮುಲಾಜಿಲ್ಲದೇ ತಿರಸ್ಕರಿಸುತ್ತೇನೆ ಎಂದು ವಿದ್ಯಾ ಬಾಲನ್ ಹೇಳಿದ್ದಾರೆ.

ಬಾಲಿವುಡ್ ಸಿನಿಮಾಗಳ ನಿರ್ಮಾಪಕರೊಬ್ಬರು ನನ್ನನ್ನು ಬಹಳ ಅ ಸ ಹ್ಯವಾಗಿ ನೋಡುತ್ತಿದ್ದರು. ಆತನ ಕೆಟ್ಟ ವರ್ತನೆಯಿಂದ ಆರು ತಿಂಗಳ ಕಾಲ ನಾನು ಕನ್ನಡಿಯಲ್ಲಿ ನನ್ನ ಮುಖವನ್ನು ನೋಡಿಕೊಳ್ಳಲು ಸಹಾ ಹೆ ದ ರುವಂತೆ ಆಗಿತ್ತು. ಇದು 2003 ರಲ್ಲಿ ನಡೆದ ಘಟನೆ, ಆ ಘಟನೆಯ ನಂತರ ಕೆಲವು ಕಾಲ ನಾನು ಯಾವುದೇ ಸಿನಿಮಾವನ್ನು ಮಾಡುವುದು ಆಗಲಿಲ್ಲ ಎಂದಿರುವ ಅವರು ಮತ್ತೊಂದು ನೋವಿನ ವಿಚಾರವನ್ನು ಸಹಾ ಅವರು ಈ ವೇಳೆ ಹಂಚಿಕೊಂಡಿದ್ದಾರೆ.

ಜನಪ್ರಿಯ ಹಾಗೂ ಪ್ರತಿಭಾವಂತ ನಿರ್ದೇಶಕ ಕೆ.ಬಾಲಚಂದರ್ ಅವರ ನಿರ್ದೇಶನದಲ್ಲಿ ತಾನು ನಟಿಸಬೇಕಿದ್ದ ಎರಡು ಸಿನಿಮಾಗಳಿಂದ ತನಗೆ ಯಾವುದೇ ನೋಟೀಸ್ ನೋಡದೆ ತೆಗೆದು ಹಾಕಿದ್ದರು. ಆಗ ಆದ ಬೇಸರ ಹಾಗೂ ನೋವಿನಿಂದ ಮರೈನ್ ಡ್ರೈವ್ ನಿಂದ ಬಾಂದ್ರಾ ವರೆಗೆ ನಡೆದುಕೊಂಡು, ಕಣ್ಣೀರು ಹಾಕುತ್ತಾ ಹೋಗಿದ್ದೆ. ಆ ದಿನಗಳಲ್ಲಿ ನಾನು ಯಾವ ಕೆಲಸ ಮಾಡಿದರೂ ಅದು ವ್ಯರ್ಥವಾಗುತ್ತಿತ್ತು ಎಂದು ಕೆರಿಯರ್ ಆರಂಭದ ದಿನಗಳಲ್ಲಿ ತಾನು ಎದುರಿಸಿದ ಪರಿಸ್ಥಿತಿಗಳ ಬಗ್ಗೆ ವಿದ್ಯಾಬಾಲನ್ ಮನ ಬಿಚ್ಚಿ ಮಾತನಾಡಿದ್ದಾರೆ.

Leave a Comment