ಮೊಟ್ಟೆಗಿಂತ ನನಗೆ ಧರ್ಮ ಮುಖ್ಯ: 25 ಲಕ್ಷ ಬಹುಮಾನ ತಿರಸ್ಕರಿಸಿ ಶೋ ನಿಂದ ಹೊರ ಬಂದ ದಿಟ್ಟ ಮಹಿಳೆ

Written by Soma Shekar

Updated on:

---Join Our Channel---

ಆಧುನಿಕ ಸಮಾಜದಲ್ಲಿ ಧರ್ಮ,‌ ಧಾರ್ಮಿಕ ನಂಬಿಕೆಗಳು, ಸಂಪ್ರದಾಯಗಳು ಇವುಗಳನ್ನೆಲ್ಲಾ ಪಾಲಿಸುವ ಗೋಜಿಗೆ ಹೋಗದವರೇ ಹೆಚ್ಚಾಗಿದ್ದಾರೆ. ನೈತಿಕತೆಯನ್ನು ಮರೆತು ಹಣ, ಆಸ್ತಿ, ಸ್ಥಾನ ಗಳಿಸಲು ಹಾತೊರೆಯುವವರ ಸಂಖ್ಯೆ ಕಡಿಮೆಯೇನಿಲ್ಲ. ಅದಕ್ಕಾಗಿ ಅವರು ಜೀವನ ಮೌಲ್ಯಗಳನ್ನು ಸಹಾ ಬದಿಗಿಡಲು ಸಿದ್ಧರಾಗುತ್ತಾರೆ. ಆದರೆ ಇಂತಹವರ ನಡುವೆಯೂ ಬೆರಳೆಣಿಕೆಯಷ್ಟು ಮಂದಿ ಇಂದಿಗೂ ಕೂಡಾ ತಮ್ಮ ಸಂಪ್ರದಾಯ, ಆಚಾರ ಮತ್ತು ನಂಬಿಕೆಗಳಿಗಾಗಿ ಯಾವುದೇ ರೀತಿಯಲ್ಲೂ ರಾಜಿ ಮಾಡಿಕೊಳ್ಳುವುದಿಲ್ಲ. ಅಂತಹವರ ಸಾಲಿಗೆ ಸೇರಿದ್ದಾರೆ ತಮಿಳು ನಾಡಿನ ಅರುಣಾ ವಿಜಯ್(Aruna Vijay).

ಅರುಣಾ ವಿಜಯ್ ಅವರು ಜೈನ(Jainists) ಧರ್ಮದ ಅನುಯಾಯಿಯಾಗಿದ್ದಾರೆ. ಇವರು ಅಡುಗೆ ಮಾಡುವುದರಲ್ಲಿ ನಿಸ್ಸೀಮರು. ತಮ್ಮ ಈ ಕೌಶಲ್ಯದಿಂದಾಗಿಯೇ ಅವರು ಸೋನಿ ಟಿವಿಯ ಜನಪ್ರಿಯ ಬಾಣಸಿಗರ ಶೋ ಮಾಸ್ಟರ್ ಶೆಫ್ ಇಂಡಿಯಾದಲ್ಲಿ(Master chef India) ಭಾಗಿಯಾಗಿದ್ದರು. ವಿವಿಧ ಕಡೆಗಳಿಂದ ಸ್ಪರ್ಧಿಗಳಾಗಿ ಬಂದಿದ್ದ ಬಾಣಸಿಗರ ನಡುವೆ ಅರುಣಾ ಅವರು ತಮ್ಮ ಅಡುಗೆ ಕೌಶಲ್ಯದಿಂದ ಎಲ್ಲರನ್ನೂ ಹಿಂದಿಕ್ಕಿ ಮುಂದೆ ಹೋಗಿ ಬಹುಮಾನದ ಹಣವನ್ನು ಗೆಲ್ಲುವವರಿದ್ದರು. ಆದರೆ ಈಗ ತಾವು ನಂಬಿದ ಧರ್ಮಕ್ಕಾಗಿ ಅವರು ಶೋ ದಿಂದ ಹೊರ ಬಂದಿದ್ದಾರೆ.

ಹೌದು, ಅರುಣಾ ಅವರು ತಮ್ಮ ಅಡುಗೆ ಕೌಶಲ್ಯದಿಂದ ತೀರ್ಪುಗಾರರು ಹೇಳಿದ ವಿವಿಧ ಭಕ್ಷ್ಯಗಳನ್ನು ಲೀಲಾಜಾಲವಾಗಿ ಮಾಡಿ ತೋರಿಸಿ, ಮೆಚ್ಚುಗೆ ಪಡೆದಿದ್ದರು. ಅವರು ಶೋ‌ ನ ಬಹುಮಾನದ ಮೊತ್ತ 25 ಲಕ್ಷ ಗೆಲ್ಲುವ ಹಂತಕ್ಕೆ ಬಂದು ತಲುಪಿದ್ದರು. ಆದರೆ ಕೊನೆಯ ಹಂತದಲ್ಲಿ ಅವರಿಗೆ ಮೊಟ್ಟೆ ಬೇಯಿಸಲು ಹೇಳಲಾಗಿತ್ತು. ಜೈನ ಧರ್ಮಕ್ಕೆ ಸೇರಿದ ಅವರು ಇದಕ್ಕೆ ಒಪ್ಪಿಕೊಂಡಿಲ್ಲ. ಅದು ನನ್ನಿಂದ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ತೀರ್ಪುಗಾರರು ನೀವು ತಿನ್ನುವುದು ಬೇಡ ಬೇಯಿಸಿಕೊಡಿ ಸಾಕು ಎಂದಿದ್ದಾರೆ. ಅರುಣ ಅವರು ಟಾಪ್ ಹತ್ತು ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಶೋ ಗೆಲ್ಲುವ ಸಾಮರ್ಥ್ಯ ಅವರಿಗಿತ್ತು.

ಆದರೆ ಅವರು ಯಾವುದೇ ಕಾರಣಕ್ಕೂ ಧರ್ಮದಲ್ಲಿ ಸಮ್ಮತಿ ಇಲ್ಲದ ಕೆಲಸವನ್ನು ನಾನು ಮಾಡಲಾರೆ ಎಂದಿದ್ದು, ಮೊಟ್ಟೆಗಿಂತ, 25 ಲಕ್ಷಕ್ಕಿಂತ ತನಗೆ ಧರ್ಮ ಮತ್ತು ಅದರ ಮೌಲ್ಯ ಗಳು ಮುಖ್ಯ ಎಂದು ತಾವೇ ಸ್ವಯಂ ನಿರ್ಧಾರವನ್ನು ಮಾಡಿ ಶೋ ನಿಂದ ಹೊರ ಬಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು “ನಾನು ಮೊಟ್ಟೆಗಾಗಿ ಕಾರ್ಯಕ್ರಮದಿಂದ ಹೊರಕ್ಕೆ ಬಂದೆ.  ನಿಮ್ಮ ತತ್ವಗಳನ್ನು ಬಿಟ್ಟು ಯಶಸ್ಸಿನ ಹಿಂದೆ ಓಡಬೇಡಿ. ನಿಮ್ಮ ಮೌಲ್ಯಗಳನ್ನು ಗೌರವಿಸುವ ಮೂಲಕ ಯಶಸ್ಸು ನಿಮ್ಮನ್ನು ಅನುಸರಿಸಲಿ. ನಿಮ್ಮ ಮೌಲ್ಯಗಳು ನಿಮ್ಮನ್ನು ವಿಜೇತರನ್ನಾಗಿ ಮಾಡುತ್ತವೆ” ಎಂದು ಬರೆದುಕೊಂಡಿದ್ದಾರೆ.

Leave a Comment