ಮೆಗಾಸ್ಟಾರ್ ಜೊತೆ ಹೆಜ್ಜೆ ಹಾಕಲು ಸಜ್ಜಾದ ಊರ್ವಶಿ: ಸುದ್ದಿ ಕೇಳಿ ಹೆಚ್ಚಾಯ್ತು ಫ್ಯಾನ್ಸ್ ಎದೆ ಬಡಿತ

Written by Soma Shekar

Published on:

---Join Our Channel---

ಮೆಗಾಸ್ಟಾರ್ ಚಿರಂಜೀವಿ ತೆಲುಗು ಸಿನಿಮಾ ರಂಗದಲ್ಲಿ ಹಿರಿಯ ನಟ ಹಾಗೂ ಸ್ಟಾರ್ ನಟ. ದಶಕಗಳು ಕಳೆದರೂ ಇನ್ನೂ ತಮ್ಮ ಚಾರ್ಮ್ ಉಳಿಸಿಕೊಂಡಿರುವ ನಟ ಚಿರಂಜೀವಿ ಅವರನ್ನು ಅಭಿಮಾನಿಸುವ ಅಭಿಮಾನಿಗಳ ದೊಡ್ಡ ಬಳಗವೇ ಇದೆ. ಮೆಗಾಸ್ಟಾರ್ ಚಿರಂಜೀವಿ ಅವರು ರಾಜಕೀಯ ಪ್ರವೇಶ ಮಾಡಿದಾಗ ಸ್ವಲ್ಪ ವರ್ಷಗಳ ಕಾಲ ಸಿನಿಮಾ ರಂಗದಿಂದ ದೂರವೇ ಉಳಿದಿದ್ದರು. ಆದರೆ ಅನಂತರ ಅವರು ಮರಳಿ ಸಿನಿಮಾ ರಂಗಕ್ಕೆ ಮರಳಿದ್ದು ಅವರ ಅಭಿಮಾನಿಗಳಿಗೆ ಖುಷಿಯನ್ನು ನೀಡಿದೆ. ಅಲ್ಲದೇ ಮೆಗಾಸ್ಟಾರ್ ಚಿರಂಜೀವಿ ಅವರು ಸಹಾ ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಾ ಇಂದಿನ ಯುವ ನಟರಿಗೆ ಟಕ್ಕರ್ ಕೊಡುತ್ತಿದ್ದಾರೆ. ತನ್ನ ಬೇಡಿಕೆ ಇನ್ನೂ ತಗ್ಗಿಲ್ಲ ಎನ್ನುವುದನ್ನು ಈ ಮೂಲಕ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

ಕೋವಿಡ್ ನಂತರದ ಸಮಯದಲ್ಲಿ ನಟ ಚಿರಂಜೀವಿ ಅವರ ನಟನೆಯ ಆಚಾರ್ಯ ಅದಾದ ನಂತರ ಇತ್ತೀಚಿಗೆ ಗಾಡ್ ಫಾದರ್ ಸಿನಿಮಾಗಳು ಬಿಡುಗಡೆ ಆಗಿವೆ. ಆಚಾರ್ಯ ನಿರೀಕ್ಷಿತ ಮಟ್ಟದ ಗೆಲುವನ್ನು ಪಡೆಯಲಿಲ್ಲ. ಗಾಡ್ ಫಾದರ್ ಸಿನಿಮಾ ಯಶಸ್ಸನ್ನು ಪಡೆದುಕೊಂಡಿದೆ. ಇನ್ನು ಈ ಎರಡು ಸಿನಿಮಾಗಳ ನಂತರ ಮುಂದಿನ ವರ್ಷ ಜನವರಿಯಲ್ಲಿ ಸಂಕ್ರಾಂತಿ ವೇಳೆಗೆ ಮೆಗಾಸ್ಟಾರ್ ಅಭಿನಯದ ಹೊಸ ಸಿನಿಮಾ ವಾಲ್ಟೇರ್ ವೀರಯ್ಯ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ವಾಲ್ಟೇರ್ ವೀರಯ್ಯ ಸಿನಿಮಾ ತನ್ನ ಟೈಟಲ್ ಮೂಲಕವೇ ಸಾಕಷ್ಟು ಸದ್ದು ಮಾಡಿದೆ. ಈಗ ಈ ಸಿನಿಮಾದ ಹೊಸ ಅಪ್ಡೇಟ್ ಒಂದು ಅಭಿಮಾನಿಗಳನ್ನು ಥ್ರಿಲ್ ಆಗುವಂತೆ ಮಾಡುತ್ತಿದೆ.

ಮೆಗಾಸ್ಟಾರ್ ನಟನೆಯ ವಾಲ್ಟೇರ್ ವೀರಯ್ಯ ಸಿನಿಮಾದಲ್ಲಿ ಒಂದು ವಿಶೇಷ ಹಾಡಿಗೆ ಬಾಲಿವುಡ್ ನ ಹಾಟ್ ಬೆಡಗಿ, ಇತ್ತೀಚಿಗೆ ಕೆಲವೊಂದು ವಿಚಾರಗಳಿಂದಾಗಿ ಸಿಕ್ಕಾಪಟ್ಟೆ ಸದ್ದು ಸುದ್ದಿ ಮಾಡಿರುವ ಊರ್ವಶಿ ರೌಟೇಲಾ ಮೆಗಾಸ್ಟಾರ್ ಚಿರಂಜೀವಿ ಅವರ ಜೊತೆಗೆ ಹೆಜ್ಜೆ ಹಾಕಲಿದ್ದಾರೆ ಎನ್ನುವ ಸುದ್ದಿ ಈಗ ಟಾಲಿವುಡ್ ಅಂಗಳದಲ್ಲಿ ಹರಿದಾಡಿದೆ. ಈ ವಿಶೇಷ ಹಾಡಿಗೆ ಸ್ಟಾರ್ ಕೊರಿಯೊಗ್ರಫರ್ ಆಗಿರುವ ಶೇಖರ್ ಮಾಸ್ಟರ್ ಅವರು ನೃತ್ಯ ನಿರ್ದೇಶನ ಮಾಡುತ್ತಿರುವ ವಿಚಾರ ತಿಳಿದ ಮೇಲಂತೂ ಅಭಿಮಾನಿಗಳು ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ.

Leave a Comment