ಮಹಿಳಾ ಹಾಕಿ ಆಟಗಾರ್ತಿಯರಿಗೆ ಭರ್ಜರಿ ಆಫರ್: ಒಲಂಪಿಕ್ಸ್ ಗೆದ್ದರೆ ಮನೆ ಕಟ್ಟಲು 11 ಲಕ್ಷ

Written by Soma Shekar

Published on:

---Join Our Channel---

ಟೋಕಿಯೋ ಒಲಂಪಿಕ್ಸ್ ನಲ್ಲಿ ಈಗಾಗಲೇ ಭಾರತವು ಮೂರು ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದೆ. ಭಾರತದ ಹೆಮ್ಮೆಯ ಕ್ರೀಡಾಪಟುಗಳಾದ ಮೀರಾಬಾಯಿ ಚಾನು, ಪಿ.ವಿ.ಸಿಂಧು ಹಾಗೂ ಭಾರತೀಯ ಪುರುಷ ಹಾಕಿ ತಂಡದ ಕ್ರೀಡಾಪಟುಗಳು ತಮ್ಮ ಸಾಧನೆಯನ್ನು ಮೆರೆದು ಭಾರತಕ್ಕೆ ಪದಕಗಳನ್ನು ತಂದು ಕೊಟ್ಟಿದ್ದಾರೆ. ಅದರಲ್ಲೂ ಹಾಕಿಯಲ್ಲಿ ಭಾರತೀಯ ಪುರುಷ ತಂಡದ ಆಟಗಾರರು ಬರೋಬ್ಬರಿ 41 ವರ್ಷಗಳ ನಂತರ ಪದಕವನ್ನು ಗೆದ್ದು ಇತಿಹಾಸವನ್ನು ಸೃಷ್ಟಿಸಿದ್ದು, ಅವರ ಈ ಸಾಧನೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ಗಣ್ಯರು ಹಾಗೂ ಸೆಲೆಬ್ರಿಟಿಗಳು ಶುಭಾಶಯವನ್ನು ಕೋರುತ್ತಿದ್ದಾರೆ. ಎಲ್ಲೆಡೆ ಹಾಕಿ ಕ್ರೀಡಾಪಟುಗಳಿಗೆ ಮೆಚ್ಚುಗೆಯು ಹರಿದು ಬರುತ್ತಿದೆ.

ಇದೇ ವೇಳೆಯಲ್ಲಿ ಭಾರತದ ಮಹಿಳಾ ಹಾಕಿ ತಂಡಕ್ಕೆ ಪ್ರೋತ್ಸಾಹ ನೀಡಲು, ಅವರ ಉತ್ಸಾಹವನ್ನು ಹೆಚ್ಚಿಸಲು ಗುಜರಾತಿನ ಬಿಲಿಯನೇರ್ ವಜ್ರದ ವ್ಯಾಪಾರಿ ಆಗಿರುವಂತಹ ಸಾವಾಜಿ ಡೋಲಕಿಯಾ ಅವರು ಸೋಶಿಯಲ್ ಮೀಡಿಯಾಗಳ ಮೂಲಕ ಮಹಿಳಾ ಹಾಕಿ ತಂಡದ ಕ್ರೀಡಾಪಟುಗಳು ಟೋಕಿಯೋ ಒಲಂಪಿಕ್ಸ್ ನಲ್ಲಿ ಗೆಲ್ಲುವಲ್ಲಿ ಯಶಸ್ವಿಯಾದರೆ ಅವರಿಗೆ ದುಬಾರಿ ಉಡುಗೊರೆಯನ್ನು ನೀಡುವ ಘೋಷಣೆಯೊಂದನ್ನು ಮಾಡಿದ್ದಾರೆ. ವಜ್ರ ವ್ಯಾಪಾರಿ ಡೋಲಕಿಯಾ ಅವರು ದುಬಾರಿ ಬಹುಮಾನಗಳನ್ನು ನೀಡುವುದರಲ್ಲಿ ಸಿದ್ಧ ಹಸ್ತರು. ಈಗ ಮಹಿಳಾ ಕ್ರೀಡಾಪಟುಗಳ ಉತ್ಸಾಹವನ್ನು ಹೆಚ್ಚಿಸಲು ಅವರು ಈ ಬಹುಮಾನದ ಘೋಷಣೆಯನ್ನು ಮಾಡಿದ್ದಾರೆ.

ಹೌದು ಸಾವಾಜಿ ಅವರು ಒಲಿಂಪಿಕ್ಸ್ ನಲ್ಲಿ ಮಹಿಳಾ ಆಟಗಾರ್ತಿಯರ ತಂಡವು ಗೆದ್ದು, ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರೆ ಎಲ್ಲಾ ಆಟಗಾರ್ತಿಯರಿಗೆ ಅವರ ಕನಸಿನ ನಿರ್ಮಾಣದ ಕನಸನ್ನು ನನಸು ಮಾಡುವುದಕ್ಕಾಗಿ, ತಮ್ಮ ಹರಿಕೃಷ್ಣ ಗ್ರೂಪ್ ಕಂಪನಿಯ ಕಡೆಯಿಂದ 11 ಲಕ್ಷ ರೂ. ಗಳ ನೆರವನ್ನು ನೀಡುವುದಾಗಿ ಘೋಷಣೆಯನ್ನು ಮಾಡಿದ್ದಾರೆ.‌ ಇದೇ ವೇಳೆ ಅವರು ಒಂದು ಪಕ್ಷ ಸ್ವಂತ ಮನೆ ಬೇಡಡ ಆಟಗಾರ್ತಿಯರಿಗೆ ಅದರ ಬದಲಾಗಿ 5 ಲಕ್ಷ ರೂ ಗಳ ಹೊಸ ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ಹೇಳಿದ್ದಾರೆ. ಭಾರತೀಯ ಮಹಿಳಾ ಹಾಕಿ ತಂಡವು ಅರ್ಜಂಟೀನಾ ವಿರುದ್ಧ ಸೆಮಿಫೈನಲ್ ನಲ್ಲಿ 2-1 ಅಂತರದಿಂದ ಸೋತಿದೆ.

ಇದೀಗ ಮಹಿಳಾ ಹಾಕಿ ತಂಡವು ಕಂಚಿನ ಪದಕಕ್ಕಾಗಿ ಗ್ರೇಟ್ ಬ್ರಿಟನ್ ನೊಡನೆ ಸೆಣಸಲಿದೆ. ಈ ವಿಷಯವಾಗಿ ಟ್ವೀಟ್ ಮಾಡಿರುವ ಸಾವಜಿ ಅವರು ತಮ್ಮ ಟ್ವೀಟ್ ನಲ್ಲಿ, “ಫೈನಲ್‌ನಲ್ಲಿ ಗೆದ್ದರೆ, ಹರಿ ಕೃಷ್ಣ ಗ್ರೂಪ್ ಆರ್ಥಿಕ ಸಹಾಯದ ಅಗತ್ಯವಿರುವ ಮಹಿಳಾ ಹಾಕಿ ಆಟಗಾರ್ತಿಯರಿಗೆ ರೂ 11 ಲಕ್ಷ ಮೌಲ್ಯದ ಮನೆ ಅಥವಾ ಹೊಸ ಕಾರನ್ನು ನೀಡುತ್ತದೆ ಎಂದು ಘೋಷಿಸಲು ನನಗೆ ತುಂಬಾ ಸಂತೋಷವಾಗಿದೆ. ನಮ್ಮ ಹುಡುಗಿಯರು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪ್ರತಿ ಹೆಜ್ಜೆಯೊಂದಿಗೆ ಇತಿಹಾಸವನ್ನು ಸೃಷ್ಟಿಸುತ್ತಿದ್ದಾರೆ.” ಎಂದು ಬರೆದುಕೊಂಡಿದ್ದಾರೆ.

Leave a Comment